HOME » NEWS » State » BANGALORE CEO POSTED HIS GIRLFRIEND NUDE PHOTO VIDEOS ON INSTAGRAM GET ARRESTED IN BENGALURU SCT

ಇನ್​ಸ್ಟಾಗ್ರಾಂನಲ್ಲಿ ಪ್ರೇಯಸಿಯ ಖಾಸಗಿ ಫೋಟೋ, ವಿಡಿಯೋ ಪೋಸ್ಟ್​; ಬೆಂಗಳೂರು ಖಾಸಗಿ ಕಂಪನಿ ಸಿಇಓ ಬಂಧನ

29 ವರ್ಷದ ರಾಹುಲ್ ಸಿಂಗ್ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಸಿಇಓ ಆಗಿದ್ದಾರೆ. ಕಳೆದ ವರ್ಷ ಯುವತಿಯೊಬ್ಬಳ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. 2018ರ ಮೇ ತಿಂಗಳಿಂದ ಇಬ್ಬರೂ ಲಿವ್​ ಇನ್ ರಿಲೇಷನ್​ಶಿಪ್​ನಲ್ಲಿದ್ದರು.

news18-kannada
Updated:October 5, 2019, 7:07 PM IST
ಇನ್​ಸ್ಟಾಗ್ರಾಂನಲ್ಲಿ ಪ್ರೇಯಸಿಯ ಖಾಸಗಿ ಫೋಟೋ, ವಿಡಿಯೋ ಪೋಸ್ಟ್​; ಬೆಂಗಳೂರು ಖಾಸಗಿ ಕಂಪನಿ ಸಿಇಓ ಬಂಧನ
ಆರೋಪಿ ರಾಹುಲ್ ಸಿಂಗ್
  • Share this:
ಬೆಂಗಳೂರು (ಅ. 5): ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಪ್ರೇಮಕತೆಗಳಿರುತ್ತವೆ. ಕೆಲವು ಪ್ರೇಮಕತೆಗಳು ಏಕಮುಖವಾಗಿದ್ದರೆ ಇನ್ನು ಕೆಲವರು ಇಬ್ಬರೂ ಇಷ್ಟಪಟ್ಟು ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ತಾನು ಪ್ರೀತಿಸಿದ ಹುಡುಗಿಯೋ ಹುಡುಗನೋ ಕೈಕೊಟ್ಟ ಎಂದಾಕ್ಷಣ ಕೋಪ ಬರುವುದು ಸಹಜ. ಆದರೆ, ಆ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟರೆ ಆಗಬಾರದ ಅವಾಂತರಗಳಾಗುತ್ತವೆ. 

ಆತ ಬೆಂಗಳೂರಿನ ಕಂಪನಿಯೊಂದರ ಸಿಇಓ. ಒಳ್ಳೆಯ ವಿದ್ಯಾಭ್ಯಾಸ ಪಡೆದು, ತನ್ನದೇ ಕಂಪನಿ ಹುಟ್ಟುಹಾಕುವ ಕನಸು ಕಂಡಿದ್ದ ರಾಹುಲ್ ಸಿಂಗ್​ಗೆ ಒಬ್ಬಳು ಪ್ರೇಯಸಿಯಿದ್ದಳು. ಆಕೆ ತನ್ನ ಕನಸಿಗೆ ನೀರೆರೆಯುತ್ತಾಳೆ ಎಂಬ ಕನಸು ಕಂಡಿದ್ದ ರಾಹುಲ್ ಸಿಂಗ್​ಗೆ ಕೈಕೊಟ್ಟು ಆಕೆ ದೂರ ಹೋಗಿದ್ದಳು. ಇದನ್ನು ಸಹಿಸದ ರಾಹುಲ್ ಆಕೆಯ ಖಾಸಗಿ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಇದೀಗ ಪೊಲೀಸರ ವಶದಲ್ಲಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. 29 ವರ್ಷದ ರಾಹುಲ್ ಸಿಂಗ್ ಖಾಸಗಿ ಕಂಪನಿಯೊಂದರ ಸಿಇಓ ಆಗಿದ್ದಾರೆ. ಕಳೆದ ವರ್ಷ ಯುವತಿಯೊಬ್ಬಳ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. 2018ರ ಮೇ ತಿಂಗಳಿಂದ ಇಬ್ಬರೂ ಲಿವ್​ ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಮದುವೆಯಾಗದೆ ಒಟ್ಟಿಗೇ ವಾಸಿಸುತ್ತಿದ್ದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದರಿಂದ 3 ತಿಂಗಳಿಂದ ಬೇರೆಯಾಗಿ ವಾಸಿಸುತ್ತಿದ್ದರು.

ಆಯುಧ ಪೂಜೆಯಂದು ಬಿಎಂಟಿಸಿ ಬಸ್​ ಸ್ವಚ್ಛತೆ, ಅಲಂಕಾರಕ್ಕೆ 100 ರೂ ಪುಡಿಗಾಸು ಬಿಡುಗಡೆ

ತನ್ನ ಪ್ರೇಯಸಿ ತನ್ನೊಂದಿಗೆ ಜಗಳವಾಡಿಕೊಂಡು ಬೇರೆಯಾಗಿ ವಾಸಿಸುತ್ತಿದ್ದುದರಿಂದ ಕೋಪಗೊಂಡ ರಾಹುಲ್ ಸಿಂಗ್ ಆಕೆಯ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ವೈರಲ್ ಮಾಡಿದ್ದ. ಕಳೆದ 10 ದಿನಗಳ ಹಿಂದೆ ಆ ಫೋಟೋ, ವಿಡಿಯೋಗಳನ್ನು ನಕಲಿ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಪೋಸ್ಟ್​ ಮಾಡಿದ್ದ ರಾಹುಲ್ ಸಿಂಗ್ ವಿರುದ್ಧ ಆ ಯುವತಿ ದೂರು ನೀಡಿದ್ದಳು. ತನ್ನ ಖಾಸಗಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾಗಿ ಯುವತಿ ದೂರು ನೀಡಿದ್ದರಿಂದ ರಾಹುಲ್ ಸಿಂಗ್​ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಚಂದನ್​ ಶೆಟ್ಟಿ ಮಹಾಪರಾಧವೇನೂ ಮಾಡಿಲ್ಲ; ಮತ್ತೆ ಟ್ವಿಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸಂಸದ ಪ್ರತಾಪ್ ಸಿಂಹ

2 ತಿಂಗಳ ಹಿಂದೆ ಆ ಯುವತಿಗೆ ರಾಹುಲ್ ಸಿಂಗ್ ಕಿರುಕುಳ ನೀಡುತ್ತಿರುವುದಾಗಿ ದೂರು ಬಂದಿತ್ತು. ಆಗ ಹೆಚ್​ಎಸ್​ಆರ್​ ಲೇಔಟ್​ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಹೆಚ್​ಎಸ್​ಆರ್​ ಲೇಔಟ್​ಗೆ ದೂರು ನೀಡಿದ್ದ ಯುವತಿ ಇದೀಗ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಹಿಂದೆ ಬುದ್ಧಿವಾದ ಹೇಳಿ ಸೆಕ್ಷನ್​ 107 ದಾಖಲಿಸಿಕೊಂಡು ಬಿಟ್ಟಿದ್ದರೂ ಬುದ್ಧಿ ಕಲಿಯದ ಸಿಇಓ ರಾಹುಲ್ ಸಿಂಗ್ ಮತ್ತೆ ಕಿರುಕುಳ ನೀಡಿದ್ದರಿಂದ ಬಂಧಿಸಲಾಗಿದೆ.(ವರದಿ: ಮುನಿರಾಜು)

First published: October 5, 2019, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories