• Home
  • »
  • News
  • »
  • state
  • »
  • ಡಾರ್ಕ್ ನೆಟ್ ಮೂಲಕ ಬೆಂಗಳೂರಿನಲ್ಲಿ ಡ್ರಗ್ ಡೀಲ್; ಬೃಹತ್ ಜಾಲ ಬೇದಿಸಿದ ಸಿಸಿಬಿ ಪೊಲೀಸರು

ಡಾರ್ಕ್ ನೆಟ್ ಮೂಲಕ ಬೆಂಗಳೂರಿನಲ್ಲಿ ಡ್ರಗ್ ಡೀಲ್; ಬೃಹತ್ ಜಾಲ ಬೇದಿಸಿದ ಸಿಸಿಬಿ ಪೊಲೀಸರು

ಬಂಧಿತ ಗ್ಯಾಂಗ್​ನಿಂದ ಪೊಲೀಸರ ಜಪ್ತಿಮಾಡಿರುವ ವಸ್ತುಗಳು.

ಬಂಧಿತ ಗ್ಯಾಂಗ್​ನಿಂದ ಪೊಲೀಸರ ಜಪ್ತಿಮಾಡಿರುವ ವಸ್ತುಗಳು.

ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 80 ಲಕ್ಷ ಮೌಲ್ಯದ 660 ಎಲ್ ಎಸ್ ಡಿ, 389 ಎಂಡಿಎಂಎ, 12 ಗ್ರಾ ಎಂಡಿಎಂಎ ಕ್ರಿಸ್ಟಲ್, 10 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ಇದೇ ವೇಳೆ ಸಿಸಿಬಿಯ ಮಾದಕವಸ್ತುಗಳ ತಂಡದಿಂದ ಓರ್ವ ನೈಜಿರಿಯನ್ ಪ್ರಜೆ ಸೇರಿ  9 ಜನರ ಗ್ಯಾಂಗ್ ಬಂಧಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ನವೆಂಬರ್​ 02); ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಉಡ್ತಾ ಪಂಜಾಬ್ ಆಗ್ತಿದ್ಯಾ..! ಹೀಗೊಂದು ಅನುಮಾನ ಮತ್ತೆ ಕಾಡಲು ಕಾರಣವಾಗಿದ್ದು ನಗರದಲ್ಲಿ ಪತ್ತೆಯಾದ ಹೈ ಎಂಡ್ ಡ್ರಗ್ ಜಾಲ. ಡಾರ್ಕ್ ನೆಟ್ ಮೂಲಕ ನಗರಕ್ಕೆ ಡ್ರಗ್ ತರಿಸಿಕೊಳ್ತಿದ್ದ ಗ್ಯಾಂಗ್ ವೊಂದು ಇದೀಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಸಿಲಿಕಾನ್ ಸಿಟಿಯನ್ನ ಡ್ರಗ್ ಮುಕ್ತನಗರವನ್ನಾಗಿಸಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ನಗರ ಮತ್ತು ಸಿಸಿಬಿ ಪೊಲೀಸರು ಕಳೆದ ಐದಾರು ತಿಂಗಳಿಂದ ಬೆಂಗಳೂರು ಸೇರಿ ಹೊರರಾಜ್ಯದಿಂದ ಡ್ರಗ್ ಸಫ್ಲೈ ಮಾಡ್ತಿದ್ದವರನ್ನ ಬಂಧಿಸಿ ಜೈಲಿಗಟ್ಟಿದ್ರು. ಇದೀಗ ಅನ್ ಲೈನ್ ಮೂಲಕ ನಗರಕ್ಕೆ ಡ್ರಗ್ ತರಿಸುತ್ತಿದ್ದ ಗ್ಯಾಂಗ್ ವೊಂದನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


TOR ಹೆಸರಿನ ಬ್ರೌಸರ್ ಮೂಲಕ ಹೈ ಎಂಡ್‌ ಡ್ರಗ್ಸ್ ನಗರಕ್ಕೆ ತರಿಸಿ ನಂತರ ಅದೇ ಬ್ರೌಸರ್ ಮೂಲಕ ಮಾರಾಟ ಮಾಡ್ತಿದ್ರಂತೆ. ಅನ್ ಲೈನ್ ಮೂಲಕ ಡ್ರಗ್ ಖರೀದಿಸಿ ಅದಕ್ಕೆ ಬಿಟ್ ಕಾಯಿನ್ ನಲ್ಲಿ ಹಣ ಪಾವತಿ ಮಾಡುತ್ತಿದ್ರಂತೆ. ಈ ಬಗ್ಗೆ ಡಾರ್ಕ್ ನೆಟ್ ವೆಬ್ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು, ಇಂಟರ್ ನ್ಯಾಷನಲ್ ಪೋಸ್ಟ್ ನಲ್ಲಿ ಬರುವ ಕೊರಿಯರ್ ಗಳನ್ನ ಪತ್ತೆ ಹಚ್ಚಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.


ಇದನ್ನೂ ಓದಿ : ರಾಜಸ್ಥಾನದಲ್ಲಿನ್ನು ಮಾಸ್ಕ್​ ಧರಿಸುವುದು ಕಾನೂನಾತ್ಮಕವಾಗಿ ಕಡ್ಡಾಯ; ಹೊಸ ಕಾನೂನು ಜಾರಿಗೆ ತಂದ ಸಿಎಂ ಅಶೋಕ್ ಗೆಹ್ಲೋಟ್


ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 80 ಲಕ್ಷ ಮೌಲ್ಯದ 660 ಎಲ್ ಎಸ್ ಡಿ, 389 ಎಂಡಿಎಂಎ, 12 ಗ್ರಾ ಎಂಡಿಎಂಎ ಕ್ರಿಸ್ಟಲ್, 10 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ಇದೇ ವೇಳೆ ಸಿಸಿಬಿಯ ಮಾದಕವಸ್ತುಗಳ ತಂಡದಿಂದ ಓರ್ವ ನೈಜಿರಿಯನ್ ಪ್ರಜೆ ಸೇರಿ  9 ಜನರ ಗ್ಯಾಂಗ್ ಬಂಧಿಸಿದ್ದಾರೆ. ಸಾರ್ಥಕ್, ನಿತಿನ್, ಕಾರ್ತಿಕ್, ಜಮಾನ್ ಹಮ್ಜಾಮಿನ್, ಮೊಹಮ್ಮದ್ ಆಲಿ, ಅಮಲ್‌ ಬೈಜು, ಪೆನಿಕ್ಸ್‌ ಡಿಸೋಜಾ, ಶಾನ್ ಶಾಜಿ, ಪಾಲ್ಡುಗ ವೆಂಕಟ್ ಬಂಧಿತರು.


ನಗರದ ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿ ಹಲವರಿಗೆ ಅನ್ ಲೈನ್ ಮೂಲಕ ಡ್ರಗ್ ಸಪ್ಲೈ ಆಗ್ತಿತ್ತಂತ್ತೆ. ಸದ್ಯ ಈ ಬಗ್ಗೆ ನಗರದ ವಿವಿಧ‌ ಠಾಣೆಗಳಲ್ಲಿ 8 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಒಂದೇ ವಾರದಲ್ಲಿ ಅಂತರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಡ್ರಗ್ ಜಾಲವನ್ನ ಸಿಸಿಬಿ ಪೊಲೀಸರು ಬೇದಿಸಿದ್ದಾರೆ.

Published by:MAshok Kumar
First published: