ಬೆಂಗಳೂರು ವಿಮಾನ ನಿಲ್ದಾಣದ ಗೋದಾಮಿನಿಂದ 2.5 ಕೆಜಿ ಚಿನ್ನ ನಾಪತ್ತೆ; ಐವರು ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು

ಜೂನ್ 2012ರಿಂದ ಡಿಸೆಂಬರ್ 2014ರವರೆಗೆ ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಜಪ್ತಿ ಮಾಡಲಾಗಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಎಂಹೆಚ್​ಬಿ ಗೋಡಾನ್​ನಲ್ಲಿ ಶೇಖರಣೆ ಮಾಡಲಾಗಿತ್ತು

news18-kannada
Updated:October 18, 2020, 8:07 AM IST
ಬೆಂಗಳೂರು ವಿಮಾನ ನಿಲ್ದಾಣದ ಗೋದಾಮಿನಿಂದ 2.5 ಕೆಜಿ ಚಿನ್ನ ನಾಪತ್ತೆ; ಐವರು ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 18): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ಗೋದಾಮಿನಿಂದ 2.5 ಕೆಜಿ ಚಿನ್ನವನ್ನು ಕದಿಯಲಾಗಿದೆ. ಚಿನ್ನ ಕಳ್ಳಸಾಗಣೆಯ ವೇಳೆ ಸೀಜ್ ಮಾಡಲಾಗಿದ್ದ ಚಿನ್ನವನ್ನು ಬೆಂಗಳೂರು ಏರ್​ಪೋರ್ಟ್ ಗೋದಾಮಿನಲ್ಲಿ ಇರಿಸಲಾಗಿತ್ತು. ಆ ಚಿನ್ನವನ್ನು ಕಳವು ಮಾಡಿರುವ ಆರೋಪದಲ್ಲಿ 5 ಜನ ಕಸ್ಟಮ್ಸ್​ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಸಿಬಿಐ ಎಸಿಬಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ. ಚೇತನ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಜೂನ್ 2012ರಿಂದ ಡಿಸೆಂಬರ್ 2014ರವರೆಗೆ ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಜಪ್ತಿ ಮಾಡಲಾಗಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಎಂಹೆಚ್​ಬಿ ಗೋಡಾನ್​ನಲ್ಲಿ ಶೇಖರಣೆ ಮಾಡಲಾಗಿತ್ತು. ಚಿನ್ನ ಕಳವು ಬಗ್ಗೆ ಆಂತರಿಕ ತನಿಖೆ ಕೈಗೊಂಡಿದ್ದ ಕಸ್ಟಮ್ಸ್​ ಇಲಾಖೆಯ ವಿಜಿಲೇನ್ಸ್ ಅಧಿಕಾರಿಗಳು ತನಿಖೆ ವೇಳೆ 13 ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 2 ಕೆಜಿ 594 ಗ್ರಾಂ. ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮನೀಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ; ಇಬ್ಬರ ಕಾಲಿಗೆ ಗುಂಡೇಟು

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ದೂರು ನೀಡಲಾಗಿತ್ತು. ಹೀಗಾಗಿ, ಐವರು ಕಸ್ಟಮ್ಸ್ ಅಧಿಕಾರಿಗಳು ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಗೋಡಾನ್​ನ ಸೇಫ್ಟಿ ಮತ್ತು ಉಸ್ತುವಾರಿ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತು. ಅಕ್ಟೋಬರ್ 12ರಂದು ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ.

ಕಸ್ಟಮ್ಸ್​ ಮತ್ತು ಕೇಂದ್ರ ಅಬಕಾರಿ ಸಹಾಯಕ ಆಯುಕ್ತರಾದ ವಿನೋದ್ ಚಿನ್ನಪ್ಪ, ಕೆ. ಕೇಶವ್, ಸೂಪರಿಂಟೆಂಡೆಂಟ್ ಎನ್​.ಜೆ. ರವಿಶೇಖರ್, ಡೀನ್​ರೆಕ್ಸ್​, ಕೆ.ಇ. ಲಿಂಗರಾಜು ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
Published by: Sushma Chakre
First published: October 18, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading