Bangalore Blast: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ; ಪ್ರಮುಖ ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bangalore Bomb Blast: 2008ರ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟಿದ್ದಳು. ಬೆಂಗಳೂರು ಸ್ಫೋಟದ ಪ್ರಕರಣದಲ್ಲಿ ಇದೀಗ ಬಂಧಿಸಲ್ಪಟ್ಟಿರುವ ಶೋಯೆಬ್ ಪ್ರಮುಖ ಪಾತ್ರ ವಹಿಸಿದ್ದ.

  • Share this:

ಬೆಂಗಳೂರು (ಸೆ. 22): 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಬಂಧಿಸಲಾಗಿದೆ. ಕೇಂದ್ರ ತನಿಖಾ ತಂಡಗಳ ನೆರವಿನಿಂದ ಸಿಸಿಬಿ ಎಟಿಸಿ ಸೆಲ್ ಪೊಲೀಸರು ಆರೋಪಿ ಶೋಯೆಬ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಶೋಯೆಬ್ ನಿನ್ನೆ ಕೇರಳದಲ್ಲಿ ಸೆರೆ ಸಿಕ್ಕಿದ್ದಾನೆ. ಶೋಯೆಬ್ ವಿರುದ್ಧ ಸಿಸಿಬಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. 2008ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಶೋಯೆಬ್‌ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.


2008ರ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟಿದ್ದಳು. ಸರಣಿ ಸ್ಫೋಟದಲ್ಲಿ 32 ಆರೋಪಿಗಳು ಭಾಗಿಯಾಗಿದ್ದರು. ಈಗಾಗಲೇ 22 ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಸ್ಫೋಟದ ಪ್ರಕರಣದಲ್ಲಿ ಇದೀಗ ಬಂಧಿಸಲ್ಪಟ್ಟಿರುವ ಶೋಯೆಬ್ ಪ್ರಮುಖ ಪಾತ್ರ ವಹಿಸಿದ್ದ. ಆತ ಸುಮಾರು 12 ವರ್ಷಗಳಿಂದ ಹೊರ ದೇಶದಲ್ಲಿ ತಲೆಮರೆಸಿಕೊಂಡಿದ್ದ.


ಇದನ್ನೂ ಓದಿ: Karnataka Reservoir Water Level: ಭಾರೀ ಮಳೆಯಿಂದ ಉಕ್ಕಿ ಹರಿದ ನದಿಗಳು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

top videos


    ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಿಸಿಬಿಯಿಂದ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಆತ ನಿನ್ನೆ ಕೇರಳಕ್ಕೆ ಬಂದಿಳಿಯುವ ಮಾಹಿತಿ ಪಡೆದು ಬಂಧಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆ ಜೊತೆ ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿದೆ. ಶೋಯೆಬ್ ಪೊಲೀಸರ ವಶದಲ್ಲಿದ್ದು, ಆತನನ್ನು ವಿಚಾರಣೆ ಮಾಡಲಾಗುವುದು. ಇಷ್ಟು ದಿನ ಎಲ್ಲಿ ಇದ್ದ? ಏನು ಕೆಲಸ‌ ಮಾಡ್ತಾ ಇದ್ದ? ಎಂಬುದರ ಬಗ್ಗೆ ತನಿಖೆ‌ ಮಾಡಬೇಕಿದೆ.


    ಬೆಂಗಳೂರಿನಲ್ಲಿ 12 ವರ್ಷಗಳ ಹಿಂದೆ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಶೋಯೆಬ್ ಮಹತ್ವದ ಪಾತ್ರ ವಹಿಸಿದ್ದ ಎಂದಷ್ಟೇ ಈಗ ಹೇಳಲು ಸಾಧ್ಯ. ಈಗಾಗಲೇ ಆತನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಬಳಿಕ‌ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದ್ದಾರೆ.

    First published: