ಬೆಂಗಳೂರು (ಏ. 20): ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ 2015ರಲ್ಲಿ ಮಾಡಿದ್ದ ಟ್ವೀಟ್ ಇದೀಗ ಟ್ವಿಟ್ಟರ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅರಬ್ ರಾಷ್ಟ್ರಗಳ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ ಅದಾಗಿ 5 ವರ್ಷಗಳ ಬಳಿಕ ವಿವಾದಕ್ಕೀಡಾಗಿದ್ದಾರೆ. ಈ ಮೂಲಕ ತೇಜಸ್ವಿ ಸೂರ್ಯ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ.
2015ರಲ್ಲಿ ಪಾಕಿಸ್ತಾನಿ ಕೆನಡಿಯನ್ ಲೇಖಕರಾದ ತರೇಕ್ ಫತಾಹ್ ಎಂಬುವವರು ಸ್ವರಾಜ್ಯ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಇಸ್ಲಾಮಿಸಳ ಬಗ್ಗೆ ಮಾತನಾಡಿದ್ದರು. ಆ ಸಂದರ್ಶನವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, 'ಅರಬ್ ರಾಷ್ಟ್ರಗಳ ಶೇ. 95ರಷ್ಟು ಮಹಿಳೆಯರು ನೂರಾರು ವರ್ಷಗಳಿಂದ ಲೈಂಗಿಕವಾಗಿ ಉದ್ರೇಕಗೊಳ್ಳುವುದನ್ನೇ ಮರೆತಿದ್ದಾರೆ. ಅಲ್ಲಿನ ಪ್ರತಿಯೊಬ್ಬ ತಾಯಿಯೂ ಯಾಂತ್ರಿಕವಾದ ಲೈಂಗಿಕ ಕ್ರಿಯೆಯಿಂದ ಮಕ್ಕಳನ್ನು ಹೆತ್ತಿದ್ದಾಳೆಯೇ ವಿನಃ ಪ್ರೀತಿಯಿಂದಲ್ಲ' ಎಂದು ಟ್ವೀಟ್ ಮಾಡಿದ್ದರು.
@PMOIndia ji, What message your MP is giving to the world? He has hurt the sentiments of not only women of Arab but women of the entire world. This act is very shameful. He smartly deleted the tweet later. You should ask him to apologize immediately!#TejasviSurya #Islamophobia pic.twitter.com/RWDWAPo9MX
— M. Sibtain Kadri (@sibtainkadri) April 20, 2020
ಇದನ್ನೂ ಓದಿ: BS Yediyurappa: ಇದು ಜಮೀರ್ ಸರ್ಕಾರವೇನ್ರೀ?: ಮುಖ್ಯಮಂತ್ರಿ, ಗೃಹ ಸಚಿವರು ಆಕ್ರೋಶ
ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿರುವ ಸಂಸದ ತೇಜಸ್ವಿ ಸೂರ್ಯಗೆ ಟ್ವಿಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. 'ಪೂರ್ವಗ್ರಹಪೀಡಿತರಾಗಿ ಒಂದು ಸಮುದಾಯದ ಮಹಿಳೆಯರ ಮೇಲೆ ಅಸಭ್ಯವಾಗಿ ಹೇಳಿಕೆ ನೀಡಿರುವ ತೇಜಸ್ವಿ ಸೂರ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಹಾಗೂ ಈ ರೀತಿಯ ಟ್ವೀಟ್ ಮಾಡಿ ಸಮಾಜಕ್ಕೆ ತಪ್ಪುಸಂದೇಶ ರವಾನಿಸುತ್ತಿರುವ ಅವರನ್ನು ಟ್ವಿಟ್ಟರ್ ಬ್ಯಾನ್ ಮಾಡಬೇಕೆಂಬ' ಆಗ್ರಹವೂ ಕೇಳಿಬಂದಿದೆ.
#TejasviSurya is a National Shame..
Better Tender Resignation @Tejasvi_Surya
That is the smallest help you can do to save your mother's and motherland's dignity.#Dismiss_Tejasvi_Surya
— SelvaKumar S (@Selva_from_TN) April 20, 2020
'ಇಂತಹವರಿಂದ ಬಿಜೆಪಿ ಪಕ್ಷಕ್ಕೂ ಅವಮಾನ. ಈತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ. ಈ ಕ್ಷೇತ್ರದಲ್ಲಿರುವ ಮತದಾರರಲ್ಲಿ ಬಹುತೇಕರು ಸುಶಿಕ್ಷಿತರಾಗಿದ್ದು, ಇಂತಹ ಕೀಳುಮನಸ್ಥಿತಿಯ ವ್ಯಕ್ತಿಯನ್ನು ಹೇಗೆ ಸಂಸದನನ್ನಾಗಿ ಆಯ್ಕೆ ಮಾಡಿದರು ಎಂಬುದೇ ಅಚ್ಚರಿಯ ಸಂಗತಿ. ಬೇರೆ ದೇಶದ ಮಹಿಳೆಯರ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ಈತ ನಮ್ಮ ದೇಶದ ಮಹಿಳೆಯರಿಗೆ ಎಷ್ಟು ಗೌರವ ಕೊಡಲು ಸಾಧ್ಯ ಎಂಬುದನ್ನು ಒಮ್ಮೆ ಯೋಚಿಸಿ' ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
His elected from South Bangalore which is one of the majority educated people out there How did they vote this cheap person?? @Tejasvi_Surya
Think what Respect he gives to our country women when he talks about other country women #TejasviSurya #Arab pic.twitter.com/wprA35P2hz
— Abhishek Handral (@AbhishekHandra2) April 19, 2020
Some people are targetting Tejasvi Surya @Tejasvi_Surya for a 5 year old tweet.
He quoted it from @TarekFatah, Tarek Fatah's interview, a Canadian journalist of Pakistani origin.
Refer the below tweet from Rupa for more clarity or get approval from @TarekFatah pic.twitter.com/LZy6YiUmJW
— @SanjayGandhi for Population Control (@SanjayGandhi75) April 19, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ