news18-kannada Updated:April 8, 2021, 1:51 PM IST
ಸಾಂದರ್ಭಿಕ ಚಿತ್ರ
ಕಾಮಸೂತ್ರ ಸೆಕ್ಸ್ ಗೋಲ್ಡ್ ಮೆಡಿಸಿನ್ ಗಿಫ್ಟ್ ಬಹುಮಾನವಾಗಿ ಬಂದಿದೆ ಎಂದು ಯಾಮಾರಿಸಿ ಸೈಬರ್ ಕ್ರಿಮಿನಲ್ಗಳು ಅಮನ್ ಎನ್ನುವ ವ್ಯಕ್ತಿಗೆ 2.17 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಕಂಡು ಬಂದಿದೆ. ಬೆಳ್ಳಂದೂರಿನ ನಿವಾಸಿಯಾಗಿರುವ ಅಮನ್ ಟ್ಯಾಕ್ಸಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಕ್ಸ್ ಪಿಲ್ಸ್ಗಳನ್ನು ಕೊಳ್ಳಲು ಟಿಕೆಟ್ ಬಹುಮಾನವಾಗಿ ಬಂದಿದೆ ಎಂದು ಅವರಿಗೆ ಕರೆಬಂದಿದೆ ಎನ್ನುವುದನ್ನು ಖಾಸಗಿ ಪತ್ರಿಕೆ ವರದಿ ಮಾಡಿದೆ.
ವಂಚನೆಗೆ ಒಳಗಾದ ಅಮನ್ ಅವರಿಗೆ ಎರಡು ವಿಭಿನ್ನ ನಂಬರ್ನಿಂದ ಕರೆ ಮತ್ತು ಮೆಸೇಜ್ ಬಂದಿದೆ. ಈ ಸಮಯದಲ್ಲಿ ವಂಚಕ ಮಾತನಾಡಿ ಗಿಫ್ಟ್ ಕಾರ್ಡ್ ರೂಪದಲ್ಲಿ ದೊಡ್ಡ ಮಟ್ಟದ ಹಣವನ್ನು ಗೆದ್ದಿದ್ದು, ಸೆಕ್ಸ್ ಪಿಲ್ಗಳನ್ನು ಕೊಳ್ಳಬಹುದು ಎಂದ್ದಿದ್ದಾನೆ. ಇದಕ್ಕೆ ಮುಂಗಡ ತೆರಿಗೆ ಹಣವನ್ನು ಪಾವತಿಸಬೇಕೆಂದು ಹೇಳಿದ್ದಾನೆ.
ಇದಾದ ಬಳಿಕ ಕೆಲವು ದಿನಗಳ ನಂತರ 2.17 ಲಕ್ಷ ಹಣವನ್ನು ಇವರ ಖಾತೆಯಿಂದ ತೆಗೆದಿರುವುದು ತಿಳಿದು ಬಂದಿದೆ. ಸದ್ಯ ವೈಟ್ಫೀಲ್ಡ್ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ವಿಷಯ ತಿಳಿದ ಸ್ಕ್ಯಾಮರ್ಸ್ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ನಾಯಿಗಳ ಮೇಲಿನ ಪ್ರೀತಿಯಿಂದ ಕಾರ್ಪೊರೇಟ್ ಕೆಲಸಕ್ಕೆ ಗುಡ್ಬೈ ಹೇಳಿದ ಯುವಕ, ಈಗ ಭಾರೀ ಬೇಡಿಕೆಯ ಪೆಟ್ ಗ್ರೂಮರ್ !
ಆನ್ಲೈನ್ ಸ್ಕ್ಯಾಮ್ ಹೊಸದೇನಲ್ಲ. ಮೊನ್ನೆಯಷ್ಟೇ ಗುಜರಾತ್ನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿರುವ 71 ವರ್ಷದ ವೃದ್ಧೆಯೊಬ್ಬರು ಆನ್ಲೈನ್ನಲ್ಲಿ ಕಾರು ಬುಕ್ ಮಾಡಲು ಹೋಗಿ 1 ಲಕ್ಷ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ನಲ್ಲಿ ಕಾರು ತೋರಿಸಿ, ಹಣವನ್ನು ಪಾವತಿಸಲು ಆಪ್ಗಳ ಲಿಂಕ್ ಕಳುಹಿಸಿದ್ದಾನೆ. ಆ ಲಿಂಕ್ ಕ್ಲಿಕ್ ಮಾಡಿದ ಬಳಿಕ ಆ ವೃದ್ಧೆಯ ಮೊಬೈಲ್ನಲ್ಲಿರುವ ಎಲ್ಲಾ ಮಾಹಿತಿಯೂ ಆತನಿಗೆ ಸಿಕ್ಕಿದೆ. ನಂತರ ಮೂರು ಬಾರಿ ಆತ ಹಣವನ್ನು ಆಕೆಯ ಅಕೌಂಟ್ನಿಂದ ತೆಗೆದಿದ್ದಾನೆ.
ಇದೇ ರೀತಿಯಾದ ಘಟನೆ 2019 ರಲ್ಲಿ ನಡೆದಿತ್ತು. ಒಬ್ಬರು ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಅವರ ಅಕೌಂಟ್ನಿಂದ 95,000 ಹಣವನ್ನು ಹ್ಯಾಕರ್ಗಳು ತೆಗೆದಿದ್ದರು. ಎನ್ ವಿ ಶೇಕ್ ಎಂಬ ಟೆಕ್ಕಿ ಆನ್ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿ ವಂಚನೆಗೊಳಗಾಗಿದ್ದರು. ಬೆಂಗಳೂರಿನ ಕೋರಮಂಗಲದ ನಿವಾಸಿ ತಮ್ಮ ಸ್ಮಾರ್ಟ್ಫೋನ್ ಬಳಸಿ ಫುಡ್ ಡೆಲಿವರಿ ಆ್ಯಪ್ ಮೂಲಕ ಡಿಸೆಂಬರ್ 1 ರಂದು ಪಿಜ್ಜಾ ಆರ್ಡರ್ ಮಾಡಿದ್ದರು. ಪಿಜ್ಜಾ ಪಡೆದುಕೊಂಡು ಅದಕ್ಕಾಗಿ 95,000 ಯನ್ನು ಸಹ ಕಳೆದುಕೊಂಡಿದ್ದರು.
ಇದನ್ನೂ ಓದಿ: ಹೆತ್ತ ಮಗಳನ್ನೇ ತನ್ನ ಮಗನಿಗೆ ಮದುವೆ ಮಾಡಿದ ತಾಯಿ!; ಅಷ್ಟಕ್ಕೂ ನಡೆದಿದ್ದೇನು?ಆನ್ಲೈನ್ಲ್ಲಿ ವಿವಿಧ ರೀತಿಯ ಮೋಸದ ಜಾಲಗಳಿವೆ. ಇಲ್ಲಿ ಗ್ರಾಹಕರು ಆನ್ಲೈನ್ ಪೇಮೆಂಟ್ ಮಾಡುವುದು, ಓಟಿಪಿ, ಹಣ ಡಬಲ್ ಮಾಡುವ ಯೋಜನೆಯಂತಹ ಹಲವಾರು ಆಫರ್ಗಳಿದ್ದು, ಇ-ಮೇಲ್, ಫೋನ್ ಅಥವಾ ಮೆಸೇಜ್ ಮೂಲಕ ವಂಚಕರು ಮೋಸದ ಜಾಲಕ್ಕೆ ಇಳಿದಿದ್ದಾರೆ. ಬ್ರ್ಯಾಂಡೆಡ್ ಕಂಪನಿಗಳ ಗಿಫ್ಟ್ ಕಾರ್ಡ್ಗಳಿಗಾಗಿ ಹಣವನ್ನು ವಂಚಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬ್ರ್ಯಾಂಡೆಡ್ ಕಂಪನಿಗಳು ಹಲವಾರು ರೀತಿಯ ಕಠಿಣ ನಿಯಮ ಪಾಲನೆ ಮಾಡುತ್ತಿದ್ದು, ಆಗಾಗ ತನ್ನ ಗ್ರಾಹಕರನ್ನು ಎಚ್ಚರಿಸುತ್ತಿರುತ್ತದೆ.
ಸಾಮಾನ್ಯವಾಗಿ ವಂಚಕರು ಫೋನ್, ಇ-ಮೇಲ್ ಇಲ್ಲವೇ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುತ್ತಾರೆ. ಹೆಚ್ಚಿನ ಹಣದ ಆಮಿಷ ಇಲ್ಲವೇ ಲಿಮಿಟೆಡ್ ಡೇಟ್ ಹೇಳಿ ನಿಮ್ಮ ಗಿಫ್ಟ್ ಕಾರ್ಡ್ ಮೂಲಕ ಹಣವನ್ನು ಪಡೆಯುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮ ಕ್ಲೈಂ ಕೋಡ್ಗಳ ಬಗ್ಗೆ ಎಚ್ಚರವಾಗಿರಿ. ಇದಿಷ್ಟೇ ಅಲ್ಲದೇ ಇತ್ತಿಚೆಗೆ ಯೋಧರ ಫೋಟೋ ಹಾಕಿ, ಅವರ ಹೆಸರಲ್ಲಿ ಅಕೌಂಟ್ ಕ್ರಿಯೆಟ್ ಮಾಡಿ ಹಣವನ್ನು ಸುಲಿಗೆ ಮಾಡುವವರ ಗ್ಯಾಂಗ್ ಕೂಡ ಹೆಚ್ಚಾಗಿದೆ.
ಇದಿಷ್ಟೇ ಅಲ್ಲದೇ ಹಬ್ಬಗಳಿಗೆ ನಿಮ್ಮ ಮೊಬೈಲ್ಗೆ ಬರುವ ನಿಮ್ಮ ಹೆಸರಿನ ಲಿಂಕ್, ಶುಭಾಶಯಗಳ ಲಿಂಕ್, ಫಾವರ್ಡ್ ಮಾಡಿ ಗಿಫ್ಟ್ ಗೆಲ್ಲಿ ಇಂತಹ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬೇಡಿ. ಇವು ನಿಮ್ಮ ಮೊಬೈಲ್ನ ಎಲ್ಲಾ ಮಾಹಿತಿಯನ್ನು ಕದಿಯಲು ಹ್ಯಾಕರ್ಗಳ ತಂತ್ರವಾಗಿರುತ್ತದೆ.
Published by:
Sushma Chakre
First published:
April 8, 2021, 1:51 PM IST