ಮಂಡ್ಯ (ಫೆ. 15): ಮೋಜು ಮಾಡುವ ಸಲುವಾಗಿ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಪೊಲೀಸರು ಬಂಧಿಸಿದ್ದಾರೆ. ಈ ದರೋಡೆಕೋರರ ಗುಂಪಿನಲ್ಲಿದ್ದ ಪೊಲೀಸ್ ಪೇದೆಯ ಮಗ ನಾಪತ್ತೆಯಾಗಿದ್ದಾನೆ. ಬಂಧಿತರಲ್ಲಿ ಓರ್ವ ಆರೋಪಿ ರಾಜಕೀಯ ಮುಖಂಡನ ಮಗ ಎನ್ನಲಾಗಿದೆ.
ದರೋಡೆಕೋರರನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು ನಾಲ್ವರು ಹೆದ್ದಾರಿ ದರೋಡೆಕೋರರನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟು ಐವರು ಆರೋಪಿಗಳು ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಿಡಿಯಲು ಮುಂದಾದ ಪೊಲೀಸರು ದರೋಡೆಗೆ ಹೊಂಚುಹಾಕುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಶಿಕ್ಷಕಿ ಆತ್ಮಹತ್ಯೆ ಪ್ರಕರಣ: ಸಂಸಾರಸ್ಥ ಶಿಕ್ಷಕನ ಪ್ರೀತಿ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ನತದೃಷ್ಟೆ
ಬೆಂಗಳೂರಿನ ಪದ್ಮನಾಭನಗರದ ಓಂಪ್ರಕಾಶ್, ಉತ್ತರಹಳ್ಳಿ ಸುರೇಶ್, ಮದ್ದೂರಿನ ಸಂಜಯ್ ಹಾಗೂ ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮದ್ದೂರಿನ ಕಾರ್ತಿಕ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕಾರ್ತಿಕ್ ಪೊಲೀಸ್ ಪೇದೆಯ ಮಗ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತ ಸಂಜಯ್ ರಾಜಕೀಯ ಮುಖಂಡನ ಮಗನಾಗಿದ್ದು, ಪೊಲೀಸರು 3 ದಿನ ತಡವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚೀನಾದಿಂದ ಬಂದ ವರನನ್ನೇ ಬಿಟ್ಟು ಮಗಳ ಮದುವೆ ರಿಸೆಪ್ಷನ್ ನಡೆಸಿದ ಕೇರಳ ಕುಟುಂಬ!
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರಣಕ್ಕಾಗಿಯೇ ಪೊಲೀಸರು 3 ದಿನ ತಡವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಐವರು ಆರೋಪಿಗಳು ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ದರೋಡೆ ಮಾಡುತ್ತಿದ್ದರು. ದರೋಡೆಕೋರರ ತಂಡದಲ್ಲಿ ಇಬ್ಬರು ಬೆಂಗಳೂರು ಮತ್ತು ಮದ್ದೂರಿನ ಸ್ಥಳೀಯರಿದ್ದರು. ಕಾರಿಗೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಈ ತಂಡ ಇದೇ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಮೋಜು-ಮಸ್ತಿ ಮಾಡಲು ಆರೋಪಿಗಳು ಹಣಕ್ಕಾಗಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ