ಶೀಲ ಶಂಕಿಸಿ 17 ಬಾರಿ ಹೆಂಡತಿಗೆ ಚಾಕುವಿನಿಂದ ಇರಿದ ಗಂಡ; ಅದೃಷ್ಟವಶಾತ್​ ಬದುಕುಳಿದ ಪತ್ನಿ

ಘಟನೆ ಬಳಿಕ ತಕ್ಷಣಕ್ಕೆ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಇರಿತಗಳಲ್ಲಿ  ಮೂರು ಇರಿತಗಳಿಂದ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್​ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

news18-kannada
Updated:February 22, 2020, 6:04 PM IST
ಶೀಲ ಶಂಕಿಸಿ 17 ಬಾರಿ ಹೆಂಡತಿಗೆ ಚಾಕುವಿನಿಂದ ಇರಿದ ಗಂಡ; ಅದೃಷ್ಟವಶಾತ್​ ಬದುಕುಳಿದ ಪತ್ನಿ
ಹಲ್ಲೆ ಮಾಡಿದ ಆರೋಪಿ
  • Share this:
ಬೆಂಗಳೂರು (ಫೆ.22): ಹೆಂಡತಿಯ ಶೀಲ ಶಂಕಿಸಿ ಗಂಡನೆ ಆಕೆಯನ್ನು 17 ಬಾರಿ  ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಭೀಕರ ಹಲ್ಲೆ ಬಳಿಕವೂ​ ಹೆಂಡತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

ಉಮೇಶ್​ ಹಲ್ಲೆ ಮಾಡಿದ ಆರೋಪಿ. ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿರುವ ಈತ ಕಳೆದ 7 ವರ್ಷಗಳ ಹಿಂದೆ ಇಂದಿರಾ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಇಬ್ಬರ ನಡುವೆ ಹೊಂದಾಣಿಕೆ ಬಾರದ ಹಿನ್ನೆಲೆ ಇವರಿಬ್ಬರು ಬೇರ್ಪಟ್ಟಿದ್ದರು.

ಕಳೆದ ವರ್ಷ ಮತ್ತೆ ಒಂದಾಗಿದ್ದ ಜೋಡಿ ಒಟ್ಟಿಗೆ ಜೀವನ ನಡೆಸಲು ಮುಂದಾಗಿದ್ದರು. ಈ ವೇಳೆ ಹೆಂಡತಿ ಲಕ್ಷ್ಮೀ ಬೇರೆಯವರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಉಮೇಶ್​ ಅನುಮಾನಗೊಂಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.

ಫೆ.20ರಂದು ಕೂಡ ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಉಮೇಶ್​ ಹೆಂಡತಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಚಾಕುವಿನಿಂದ 17 ಬಾರಿ ಆಕೆಯ ದೇಹದ ವಿವಿಧ ಭಾಗಗಳಿಗೆ ಚುಚ್ಚಿದ್ದಾನೆ.

ಇದನ್ನು ಓದಿ: 16ರ ಬಾಲಕನೊಂದಿಗೆ 19ರ ಯುವತಿ ಬಲವಂತದ ಮದುವೆ

ತಕ್ಷಣವೇ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಇರಿತಗಳಲ್ಲಿ  ಮೂರು ಇರಿತಗಳಿಂದ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್​ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಕರಣ ಸಂಬಂಧ ಆರೋಪಿ ಉಮೇಶ್​​ನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.
First published: February 22, 2020, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading