ಪ್ರಾಮಾಣಿಕತೆಗೆ ಮಾದರಿಯಾದ ಬೆಂಗಳೂರಿನ ಆಟೋ ಡ್ರೈವರ್​

ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಂಡು ಆಟೋ ಹತ್ತಿಕೊಂಡು ಹೋಟೆಲ್​​ಗೆ ಹಿಂತಿರುಗಿದ್ದರು. ಈ ವೇಳೆ, ಚಿಕಿತ್ಸೆ ಖರ್ಚಿಗಾಗಿ ಮಾಲ್ಡೀವ್ಸ್​​ನಿಂದ ತಂದಿದ್ದ 12 ಸಾವಿರ ಅಮೇರಿಕ ಡಾಲರ್​ ಮತ್ತು 1.5 ಲಕ್ಷ ಹಣವನ್ನು ಆಟೋದಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ. 

ಆಟೋ ಚಾಲಕ

ಆಟೋ ಚಾಲಕ

  • Share this:
ಬೆಂಗಳೂರು(ಡಿ.12): ಸಿಲಿಕಾನ್​ ಸಿಟಿ ಬೆಂಗಳೂರಿನ ಕೆಲವು ಆಟೋ ಮತ್ತು ಕ್ಯಾಬ್​​ ಡ್ರೈವರ್​​ಗಳ ಮಾನವೀಯತೆ ಮತ್ತು ಪ್ರಾಮಾಣಿಕತೆಗೆ ಒಂದು ಸೆಲ್ಯೂಟ್ ಹೊಡೆಯಲೇಬೇಕು. ಯಾಕೆಂದರೆ ಪ್ರಯಾಣಿಕರು ಅಪ್ಪಿತಪ್ಪಿ ಮರೆತು ಆಟೋದಲ್ಲಿ ಬಿಟ್ಟುಹೋದ ವಸ್ತುಗಳನ್ನು ಕದಿಯದೆ, ಹಿಂದಿರುಗಿಸುವ ಗುಣ ಅವರದ್ದು. ಇಂದಿನ ಕಾಲದಲ್ಲಿ ಬಿಟ್ಟಿ ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿತೆಂದರೆ ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಅಂತದ್ದರಲ್ಲಿ ಬೆಂಗಳೂರಿನ ಆಟೋ ಡ್ರೈವರ್​ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಧಿಕ ಮೊತ್ತದ ಹಣವನ್ನು ವಾಪಸ್​ ನೀಡಿ ಪ್ರಾಮಾಣಿಕತೆ ಮರೆದಿದ್ದಾರೆ.

ರಮೇಶ್​ ಬಾಬು ನಾಯಕ್​ ಎಂಬಾತ ಹಣ ತಂದು ಕೊಟ್ಟ ಆಟೋ ಚಾಲಕ. ಡಾ. ಎಂ. ಆರ್ ಭಾಸ್ಕರ್​ ಎಂಬಾತ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಾಲ್ಡೀವ್ಸ್​​ನಿಂದ ಬೆಂಗಳೂರಿಗೆ ಬಂದಿದ್ದರು. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಹೊಟೆಲ್​​ನಲ್ಲಿ ಉಳಿದುಕೊಂಡಿದ್ದರು. ಬಳಿಕ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದರು.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಗುವಾಹಟಿ ಪೊಲೀಸರು; ಇಬ್ಬರು ಸಾವು

ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಂಡು ಆಟೋ ಹತ್ತಿಕೊಂಡು ಹೋಟೆಲ್​​ಗೆ ಹಿಂತಿರುಗಿದ್ದರು. ಈ ವೇಳೆ, ಚಿಕಿತ್ಸೆ ಖರ್ಚಿಗಾಗಿ ಮಾಲ್ಡೀವ್ಸ್​​ನಿಂದ ತಂದಿದ್ದ 12 ಸಾವಿರ ಅಮೇರಿಕ ಡಾಲರ್​ ಮತ್ತು 1.5 ಲಕ್ಷ ಹಣವನ್ನು ಆಟೋದಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ.

ಹಣ ವಾಪಸ್​ ಪಡೆದವರು


ಇದನ್ನು ನೋಡಿದ ಆಟೋ ಚಾಲಕ ರಮೇಶ್​ ಬಾಬು ಭಾರೀ ಮೊತ್ತದ ಹಣ ಮತ್ತು ಡಾಲರ್​​ನ್ನು ಶೇಷಾದ್ರಿಪುರಂ ಇನ್ಸ್​ಪೆಕ್ಟರ್​​​ ಸಂಜೀವ್​ಗೌಡರಿಗೆ ತಂದುಕೊಟ್ಟಿದ್ದಾರೆ.  ಆಟೋ ಡ್ರೈವರ್​​​ನ ಪ್ರಾಮಾಣಿಕತೆ ಮೆಚ್ಚಿದ ಇನ್ಸ್​​ಪೆಕ್ಟರ್​​​​​ ಸಂಜೀವ್​ಗೌಡ ಚಾಲಕನಿಗೆ 2ಸಾವಿರ ನಗದು ಬಹುಮಾನ ಕೊಟ್ಟು ಶ್ಲಾಘಿಸಿದ್ದಾರೆ. ಜೊತೆಗೆ ಹಣ ವಾಪಸ್​​ ಸಿಕ್ಕ ಖುಷಿಗೆ ಭಾಸ್ಕರ್​​ ಕೂಡ ಆಟೋ ಡ್ರೈವರ್​​ಗೆ 5 ಸಾವಿರ ನೀಡಿ ಧನ್ಯವಾದ ತಿಳಿಸಿದ್ದಾರೆ.

ರಾಜಕಾರಣವೇ ಬೇರೆ, ಸ್ನೇಹವೇ ಬೇರೆ; ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್​ವೈ ಮನದಾಳದ ಮಾತು
Published by:Latha CG
First published: