HOME » NEWS » State » BANGALORE ACCIDENT NEWS TWO BIKE ACCIDENT THREE YOUTHS DIED IN YALAHANK

ಬೈಕ್​​ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಅಪಘಾತ : ಮೂವರು ಯುವಕರ ಸಾವು

Bangalore bike accident : ಎರಡು ಬೈಕ್ ಗಳಲ್ಲಿ ಬಂದ ಮೂವರು ಯುವಕರು ಏರ್​ ಪೋರ್ಟ್ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದು, ಈ ವೇಳೆ ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ

news18-kannada
Updated:June 21, 2020, 6:02 PM IST
ಬೈಕ್​​ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಅಪಘಾತ : ಮೂವರು ಯುವಕರ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂ.21): ಅಮವಾಸ್ಯೆ ದಿನವೇ ವ್ಹೀಲಿಂಗ್ ಮಾಡಲು ಹೋದ ಇಬ್ಬರು ಯುವಕರ ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಗರದ ಏರ್ಪೋರ್ಟ್ ರಸ್ತೆಯ ಜಕ್ಕೂರು ಬಳಿ ಬೆಳಗಿನ ಜಾವ 6.30ರ ವೇಳೆ ಮೂವರು ಯುವಕರು ವ್ಹೀಲಿಂಗ್  ಮಾಡುತ್ತಿದ್ದು, ಈ ವೇಳೆ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಬೈಕ್ ಗಳು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದು ಮತ್ತೊರ್ವ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾನೆ.

ಮೃತ ಯುವಕರು ನಾಗವಾರ ಬಳಿಯ ಗೋವಿಂದಪುರ ನಿವಾಸಿಗಳಾಗಿದ್ದು ಮಹಮ್ಮದ್ ಆದಿ ಆಯಾನ್(16), ಮಾಜ್ ಅಹಮ್ಮದ್ ಖಾನ್(17), ಸಯ್ಯದ್ ರಿಯಾಜ್ (22) ಎಂದು ತಿಳಿದು ಬಂದಿದೆ. ಬೆಳ್ಳಂಬೆಳಗ್ಗೆ ಎರಡು ಬೈಕ್ ಗಳಲ್ಲಿ ಬಂದ ಮೂವರು ಯುವಕರು ಏರ್​ ಪೋರ್ಟ್ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ  ವ್ಹೀಲಿಂಗ್ ಮಾಡುತ್ತಿದ್ದು, ಈ ವೇಳೆ ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನೂ ಅಪಘಾತ ವಿಷಯ ತಿಳಿದು ಸ್ಥಳಕ್ಕೆ ಯಲಹಂಕ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ರಸ್ತೆ ಬದಿಯ‌ ಸಿಸಿಟಿವಿಗಳ ಪರಿಶೀಲನೆ ವೇಳೆ ಯುವಕರ ವ್ಹೀ ಲಿಂಗ್ ಪುಂಡಾಟ ಗೊತ್ತಾಗಿದೆ. ಈ ಬಗ್ಗೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದರೂ ಸೆಲ್ಪಿ ವಿಡಿಯೋ ಮಾಡಿ ಜನರಿಗೆ ಧೈರ್ಯ ತುಂಬಿದ ವೈದ್ಯದಂಪತಿ

ಇನ್ನೂ ಯಲಹಂಕ ಹಾಗೂ ಏರ್​ಪೋರ್ಟ್ ರಸ್ತೆಯಲ್ಲಿ ಪ್ರತಿ ನಿತ್ಯ ಕೆಲವು ಯುವಕರು ವ್ಹೀಲಿಂಗ್ ಮಾಡುವುದು, ಜಿಗ್ ಜಾಗ್ ಡ್ರೈವಿಂಗ್ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು ಪೊಲೀಸರು ಪದೇ ಪದೇ ಇಂತವರನ್ನ ಪತ್ತೆ ಮಾಡಿ ಜೈಲಿಗಟ್ಟುತ್ತಿದ್ದರು‌.

ಲಾಕ್ ಡೌನ್ ಸಡಿಲಿಕೆ ನಂತರ ಪುನಃ ಬೈಕ್​ ವ್ಹೀಲಿಂಗ್ ಮಾಡುವ ಪುಡಾರಿಗಳು ರಸ್ತೆಗೆ ಇಳಿಯುತ್ತಿದ್ದು ಪೊಲೀಸರ ನಿದ್ದೆಗೆಡಿಸಿದೆ.
First published: June 21, 2020, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories