Bengaluru Accident: ಯಶವಂತಪುರ ಫ್ಲೈಓವರ್​ನಲ್ಲಿ ಸಿಎಂ ಯಡಿಯೂರಪ್ಪ ಬೆಂಗಾವಲು ಕಾರು ಅಪಘಾತ; ಚಾಲಕನಿಗೆ ಗಂಭೀರ ಗಾಯ

Bangalore Accident: ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರಿನ ಹಿಂದೆ ಸಾಗುತ್ತಿದ್ದ ಬೆಂಗಾವಲು ವಾಹನಗಳ ಪೈಕಿ ಕೊನೆಯಲ್ಲಿದ್ದ ಕಾರು ಬೆಂಗಳೂರಿನ ಯಶವಂತಪುರ ಮೇಲ್ಸೇತುವೆಯಲ್ಲಿ ಆ್ಯಕ್ಸಿಡೆಂಟ್ ಆಗಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಯಶವಂತಪುರ ಫ್ಲೈಓವರ್​ನಲ್ಲಿ ಸಿಎಂ ಯಡಿಯೂರಪ್ಪ ಬೆಂಗಾವಲು ವಾಹನ ಅಪಘಾತ

ಯಶವಂತಪುರ ಫ್ಲೈಓವರ್​ನಲ್ಲಿ ಸಿಎಂ ಯಡಿಯೂರಪ್ಪ ಬೆಂಗಾವಲು ವಾಹನ ಅಪಘಾತ

  • Share this:
ಬೆಂಗಳೂರು (ಡಿ. 31): ಪ್ರಧಾನಿ ನರೇಂದ್ರ ಮೋದಿ ಜ. 2ರಂದು ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಸಿದ್ಧತೆಯ ಪರಿಶೀಲನೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆಂಗಾವಲು ಕಾರು ಅಪಘಾತಕ್ಕೀಡಾಗಿದೆ. ಸಿಎಂ ಕಾರಿನ ಹಿಂದೆ ಬರುತ್ತಿದ್ದ ಕಾರು ಯಶವಂತಪುರ ಫ್ಲೈಓವರ್​ ಮೇಲೆ ಅಪಘಾತಕ್ಕೀಡಾಗಿದ್ದು, ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ.

ತುಮಕೂರಿನಲ್ಲಿ ಇನ್ನೆರಡು ದಿನಗಳಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳ ವೀಕ್ಷಣೆಗೆ ಇಂದು ಬೆಳಗ್ಗೆ ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಹೊರಟಿದ್ದರು. ಈ ವೇಳೆ ಮುಖ್ಯಮಂತ್ರಿಗಳ ಕಾರಿನ ಹಿಂದೆ ಸಾಗುತ್ತಿದ್ದ ಬೆಂಗಾವಲು ವಾಹನಗಳ ಪೈಕಿ ಕೊನೆಯಲ್ಲಿದ್ದ ಕಾರು ಯಶವಂತಪುರ ಮೇಲ್ಸೇತುವೆಯಲ್ಲಿ ಆ್ಯಕ್ಸಿಡೆಂಟ್ ಆಗಿದೆ. ಡಿವೈಡರ್​ಗೆ ಡಿಕ್ಕಿ ಹೊಡೆದು ನಂತರ ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ವಿನಯ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ಹಂಚೋದು ನಿಮ್ಮ ದುಡ್ಡಾ? ಬಿಜೆಪಿಯದ್ದಾ?; ರಮೇಶ್ ಜಾರಕಿಹೊಳಿಯ 5 ಕೋಟಿ ರೂ. ಆಫರ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಅಪಘಾತಕ್ಕೀಡಾದ ಕಾರು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ಅವರದ್ದು ಎನ್ನಲಾಗಿದೆ. ಇಂದು ಸೆಲ್ವಕುಮಾರ್ ಅವರು ಸಿಎಂ ಕಾರಿನಲ್ಲಿ ತೆರಳಿದ್ದರಿಂದ ಚಾಲಕನಿಗೆ ಮಾತ್ರ ಗಾಯಗಳಾಗಿವೆ. ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳ ಜೊತೆ ಸಾಗುತ್ತಿದ್ದ ಈ ಕಾರು ಕ್ಯಾಂಟರ್​ಗೆ ಡಿಕ್ಕಿ ಹೊಡೆದಿದ್ದರಿಂದ ಸಂಪೂರ್ಣ ಜಖಂ ಆಗಿದೆ. ಫ್ಲೈಓವರ್​ನಲ್ಲಿ ಅಪಘಾತ ಸಂಭವಿಸಿದ್ದರಿಂದ ಯಶವಂತಪುರ ಬಳಿ ಸಾಕಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Published by:Sushma Chakre
First published: