HOME » NEWS » State » BANGALORE A LADY DIED FROM CORONAVIRUS AND HER HUSBAND OUTRAGE AGAINST GOVERNMENT LG

Bangalore: ನಾನೂ ಸತ್ತೋದ್ರೆ ನನ್ನ ಮಕ್ಕಳಿಗೆ ಯಾರು ಗತಿ?; ಹೆಂಡತಿ ಅಗಲಿಕೆಯಿಂದ ನೊಂದ ವ್ಯಕ್ತಿಯ ಮಾತು

31 ವರ್ಷದ ಮೃತ ಮಹಿಳೆಗೆ ಸೋಮವಾರ ಕೋವಿಡ್​ ಸೋಂಕು ದೃಢಪಟ್ಟಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಲ್ಬಣಿಸಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 2-3 ಆಸ್ಪತ್ರೆಗಳಿಗೆ ಅಲೆದಾಡಿದ್ರೂ ಬೆಡ್ ಸಿಗದ ಕಾರಣ ಮನೆಗೆ ಕರೆತಂದಿದ್ದರು. ಆದರೆ ದುರಾದೃಷ್ಟವಶಾತ್ ಮಂಗಳವಾರ ರಾತ್ರಿ 10 ಗಂಟೆಗೆ ಮನೆಯಲ್ಲೇ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ.

news18-kannada
Updated:April 29, 2021, 10:11 AM IST
Bangalore: ನಾನೂ ಸತ್ತೋದ್ರೆ ನನ್ನ ಮಕ್ಕಳಿಗೆ ಯಾರು ಗತಿ?; ಹೆಂಡತಿ ಅಗಲಿಕೆಯಿಂದ ನೊಂದ ವ್ಯಕ್ತಿಯ ಮಾತು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.29): ಕೊರೋನಾ ಮಹಾಮಾರಿಗೆ ಯಾವ ಕರುಣೆಯೂ ಇಲ್ಲ. ಕೊರೋನಾ  ಸೋಂಕಿಗೆ ನಲುಗಿರುವ ಇಡೀ ದೇಶ ಅಕ್ಷರಶಃ ತತ್ತರಿಸಿ ಹೋಗಿದೆ. ನಮ್ಮ ಕರ್ನಾಟಕ ರಾಜ್ಯದ ಸ್ಥಿತಿಯೂ ಹೇಳತೀರದಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಸ್ಥಿತಿಯಂತೂ ಘನಘೋರ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ವಿದ್ಯಾರಣ್ಯಪುರದ ಸಿಂಗಾಪುರದಲ್ಲಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ.  

ಕೊರೋನಾ ಸೋಂಕಿಗೆ ಮಹಿಳೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಹಿಳೆಯ ಗಂಡ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿವೆ. ಸೋಂಕಿತೆ ಸಾವನ್ನಪ್ಪಿರುವ ಹಿನ್ನೆಲೆ ಅಕ್ಕಪಕ್ಕದವರು ಅವರ ಮನೆ ಬಳಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ತೀರಾ ಬಿಗಡಾಯಿಸಿದ್ದು, ಅವರ ಗೋಳನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ಲಾಕ್​ಡೌನ್​ ತಂದ ಸಂಕಷ್ಟ; ಕ್ಯಾಪ್ಸಿಕಂ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ರೈತನಿಂದಲೇ ಬೆಳೆ ನಾಶ

31 ವರ್ಷದ ಮೃತ ಮಹಿಳೆಗೆ ಸೋಮವಾರ ಕೋವಿಡ್​ ಸೋಂಕು ದೃಢಪಟ್ಟಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಲ್ಬಣಿಸಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 2-3 ಆಸ್ಪತ್ರೆಗಳಿಗೆ ಅಲೆದಾಡಿದ್ರೂ ಬೆಡ್ ಸಿಗದ ಕಾರಣ ಮನೆಗೆ ಕರೆತಂದಿದ್ದರು. ಆದರೆ ದುರಾದೃಷ್ಟವಶಾತ್ ಮಂಗಳವಾರ ರಾತ್ರಿ 10 ಗಂಟೆಗೆ ಮನೆಯಲ್ಲೇ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ.

ಹೆಂಡತಿಯ ಶವ ಕಂಡು ಗಂಡ ಕುಸಿದು ಬಿದ್ದಿದ್ದಾನೆ. ನೆರವಿಗೆ ಯಾರೂ ಇಲ್ಲದೇ ಇಬ್ಬರು ಹೆಣ್ಣುಮಕ್ಕಳೂ ಕಂಗಾಲಾಗಿದ್ದಾರೆ. ಸರ್ಕಾರದ ವಿರುದ್ಧ ಮೃತ ಮಹಿಳೆಯ ಪತಿ ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಹೆಂಡತಿಯ ಮೃತದೇಹ ಕೊಡಲ್ಲ, ಎಂದು ಹಠ ಹಿಡಿದು ಕುಳಿತಿದ್ದರು.

’ಕಳೆದ ಒಂದು‌ ವಾರದಲ್ಲಿ ಮೂರು ಜನರನ್ನ ಕಳೆದುಕೊಂಡಿದ್ದೀನಿ.  ಅತ್ತೆ, ಮಾವ, ಈಗ ನನ್ನ ಪತ್ನಿ ಮೂವರನ್ನೂ ಕಳೆದುಕೊಂಡೆ.  ಸರ್ಕಾರ ಏನ್ಮಾಡ್ತಿದೆ? ನನಗೂ ಕೊರೊನಾ ಲಕ್ಷಣಗಳಿವೆ.  ನನಗೆ ಐಸಿಯು ಬೆಡ್ ಬೇಕು, ಬೆಡ್ ಕೊಡ್ತಾರೆ ಅಂತಾ ಗ್ಯಾರೆಂಟಿ ಕೊಡಿ.  ನಾನೂ ಸತ್ತೋದ್ರೆ ನನ್ನ ಎರಡು ಹೆಣ್ಣು ಮಕ್ಕಳಿಗೆ ಯಾರು ಗತಿ? ಐಸಿಯು ಬೆಡ್ ಕೊಡ್ತೀವಿ ಅಂತಾ ಗ್ಯಾರೆಂಟಿ ಕೊಟ್ರೇನೇ ಮೃತದೇಹ ಕೊಡ್ತೀನಿ’ ಅಂತ ಪಟ್ಟು ಹಿಡಿದು ಕುಳಿತಿದ್ದರು.
Youtube Video
ಕೊನೆಗೆ ಹಿರಿಯ ಅಧಿಕಾರಿಗಳ ಮನವೊಲಿಕೆ ಬಳಿಕ ಶಿವಣ್ಣ ಹೆಂಡತಿಯ ಮೃತದೇಹ ಕೊಟ್ಟಿದ್ದಾರೆ.
Published by: Latha CG
First published: April 29, 2021, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories