ಬೆಂಗಳೂರಿಗರನ್ನು ಕಾಡಿದ ದೆವ್ವ!; ಹೆದರಿದ ಜನ ಪೊಲೀಸರಿಗೆ ದೂರು ನೀಡಿದಾಗ ಬಯಲಾಯ್ತು ಅಸಲಿ ಸತ್ಯ

ಭಾನುವಾರ ಮಧ್ಯರಾತ್ರಿ ದೆವ್ವದ ವೇಷ ಧರಿಸಿ ಓಡಾಡುತ್ತಿದ್ದ ಯುವಕ ಸೇರಿದಂತೆ ಆತನ ತಂಡದಲ್ಲಿದ್ದ 6 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆವ್ವದ ಮುಖವಾಡ ಹಾಕಿಕೊಂಡು ಸ್ಥಳೀಯರನ್ನು ಹೆದರಿಸುತ್ತಿದ್ದ ಯುವಕರ ಹುಚ್ಚಾಟಕ್ಕೆ ಹೆದರಿದ ಜನ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು.

Sushma Chakre | news18-kannada
Updated:November 11, 2019, 3:23 PM IST
ಬೆಂಗಳೂರಿಗರನ್ನು ಕಾಡಿದ ದೆವ್ವ!; ಹೆದರಿದ ಜನ ಪೊಲೀಸರಿಗೆ ದೂರು ನೀಡಿದಾಗ ಬಯಲಾಯ್ತು ಅಸಲಿ ಸತ್ಯ
ಟಿಕ್​ಟಾಕ್ ಮಾಡಲು ಹೋಗಿ ಸಿಕ್ಕಿಬಿದ್ದ ಬೆಂಗಳೂರು ಯುವಕರು
  • Share this:
ಬೆಂಗಳೂರು (ನ. 11): ಜನರನ್ನು ಮೂರ್ಖರನ್ನಾಗಿಸುವ (ಪ್ರಾಂಕ್) ಅನೇಕ ಶೋಗಳನ್ನು ಟಿವಿಯಲ್ಲಿ ನೋಡಿರುತ್ತೀರ. ರಸ್ತೆಯಲ್ಲಿ ಹೋಗುವ ಜನರನ್ನು ನಂಬಿಸಿ ಬಕ್ರಾ ಮಾಡುವ ಮೂಲಕ ಮನರಂಜನೆ ನೀಡುವ ಕೆಲವರು ಅದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುತ್ತಾರೆ. ಇದೇ ರೀತಿ ಮಾಡಲು ಹೋದ ಯುವಕರು ಬೆಂಗಳೂರಿನ ಪೊಲೀಸರ ಕೈಗೆ ಸಿಕ್ಕಿಬಿದ್ದ ಸಿನಿಮೀಯ ಘಟನೆ ನಡೆದಿದೆ.

ದೆವ್ವದ ಮುಖವಾಡ ಧರಿಸಿ ನಿನ್ನೆ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರು ತಮ್ಮ ವೇಷ ನೋಡಿ ಬೆಚ್ಚಿ ಬೀಳುವವರ ವಿಡಿಯೋವನ್ನು ಟಿಕ್​ಟಾಕ್ ಮಾಡುವ ಉದ್ದೇಶ ಹೊಂದಿದ್ದರು. ಬೆಂಗಳೂರಿನ ಯಶವಂತಪುರದಲ್ಲಿ ಬಿಳಿ ಬಟ್ಟೆ ತೊಟ್ಟು, ಉದ್ದನೆಯ ಕೂದಲಿನ ಟೋಪನ್ ಹಾಕಿಕೊಂಡು, ಮುಖವಾಡದೊಂದಿಗೆ ಓಡಾಡುತ್ತಿದ್ದ ಯುವಕನ್ನು ನೋಡಿ ಹೆದರುವ ಜನರ ಪ್ರತಿಕ್ರಿಯೆಯನ್ನು ಆ ಯುವಕನ ಸ್ನೇಹಿತರು ವಿಡಿಯೋ ಮಾಡಿಕೊಳ್ಳುತ್ತಿದ್ದರು.

ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಫ್ಲೈ ಓವರ್​ನಲ್ಲಿ ಸಂಚರಿಸುವವರೇ ಎಚ್ಚರ!; ಇಲ್ಲಿ ರಾತ್ರಿ ಏನೆಲ್ಲ ನಡೆಯುತ್ತೆ ಗೊತ್ತಾ?

ಭಾನುವಾರ ಮಧ್ಯರಾತ್ರಿ ದೆವ್ವದ ವೇಷ ಧರಿಸಿ ಓಡಾಡುತ್ತಿದ್ದ ಯುವಕ ಸೇರಿದಂತೆ ಆತನ ತಂಡದಲ್ಲಿದ್ದ 6 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆವ್ವದ ಮುಖವಾಡ ಹಾಕಿಕೊಂಡು ಸ್ಥಳೀಯರನ್ನು ಹೆದರಿಸುತ್ತಿದ್ದ ಯುವಕರ ಹುಚ್ಚಾಟಕ್ಕೆ ಹೆದರಿದ ಜನ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಪ್ರಾಂಕ್ ವಿಡಿಯೋ ಮಾಡಿ ಯೂಟ್ಯೂಬ್, ಟಿಕ್ ಟಾಕ್ ಗೆ ಅಪ್ ಲೋಡ್ ಮಾಡುವ ಪ್ಲಾನ್ ಮಾಡಿದ್ದ 6 ಜನ ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

(ವರದಿ: ಮುನಿರಾಜು)

 

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ