• Home
  • »
  • News
  • »
  • state
  • »
  • ಬೆಂಕಿ ಬಿದ್ದ ಕೂಡಲೇ ಅಲರ್ಟ್ ಮೆಸೇಜ್; ಬೇಸಿಗೆ ಕಾಡ್ಗಿಚ್ಚು ಪರಿಸ್ಥಿತಿ ಎದುರಿಸಲು ಬಂಡೀಪುರ ಅರಣ್ಯ ಸಿಬ್ಬಂದಿಯಿಂದ ಹಲವು ಮುಂಜಾಗ್ರತಾ ಕ್ರಮ

ಬೆಂಕಿ ಬಿದ್ದ ಕೂಡಲೇ ಅಲರ್ಟ್ ಮೆಸೇಜ್; ಬೇಸಿಗೆ ಕಾಡ್ಗಿಚ್ಚು ಪರಿಸ್ಥಿತಿ ಎದುರಿಸಲು ಬಂಡೀಪುರ ಅರಣ್ಯ ಸಿಬ್ಬಂದಿಯಿಂದ ಹಲವು ಮುಂಜಾಗ್ರತಾ ಕ್ರಮ

ಬಂಡೀಪುರ ಅರಣ್ಯ ಪ್ರದೇಶ

ಬಂಡೀಪುರ ಅರಣ್ಯ ಪ್ರದೇಶ

ಬೇಸಿಗೆ ಆರಂಭಕ್ಕೂ ಮುನ್ನವೇ ಸುರಕ್ಷತಾ ಕ್ರಮಕ್ಕೆ ಮುಂದಾಗಿರುವ ಅರಣ್ಯವಲಯದ ಸಿಬ್ಬಂದಿ, ನಾಲ್ಕು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮೂಲಕ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದು, ಹಾನಿ ತಡೆಗೆ ಸನ್ನದ್ಧವಾಗಿದ್ದಾರೆ. 

  • Share this:

ಚಾಮರಾಜನಗರ (ಫೆ. 24): ಕಳೆದ ಬೇಸಿಗೆಯಲ್ಲಿ ಬೆಂಕಿ ಕೆನ್ನಾಲಿಗೆಗೆ ತುತ್ತಾಗಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ಪ್ರದೇಶದಲ್ಲಿ 4 ಸಾವಿರ ಹೆಕ್ಟೇರ್​ ಪ್ರದೇಶ ನಾಶವಾಗುವುದರ ಜೊತೆಗೆ ಅನೇಕ ಸಸ್ಯ ಹಾಗೂ ಜೀವ ಸಂಕುಲಗಳು ನಾಶವಾಗಿದ್ದವು. ಬೇಸಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಈ ಬಾರಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಿಬ್ಬಂದಿವರ್ಗದವರು ಮುಂದಾಗಿದ್ದು, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಅರಣ್ಯದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ಸಿಬ್ಬಂದಿಗೆ ಎಚ್ಚರಿಕೆ ಘಂಟೆ ರವಾನೆಯಾಗಲಿದೆ. 


ಬೇಸಿಗೆ ಆರಂಭಕ್ಕೂ ಮುನ್ನವೇ ಸುರಕ್ಷತಾ ಕ್ರಮಕ್ಕೆ ಮುಂದಾಗಿರುವ ಅರಣ್ಯವಲಯದ ಸಿಬ್ಬಂದಿ, ನಾಲ್ಕು ಪ್ರಮುಖ ಕ್ರಮಗಳನ್ನು ಕೂಡ ಕೈಗೊಂಡಿದ್ದಾರೆ. ಈ ಮೂಲಕ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದು, ಹಾನಿ ತಡೆಗೆ ಸನ್ನದ್ಧವಾಗಿದ್ದಾರೆ. 


ಬೆಂಕಿ ರೇಖೆ ನಿರ್ಮಾಣ: ಬಂಡೀಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766 ಹಾಗು 67 ಮತ್ತು ಸಫಾರಿ ಮಾರ್ಗ, ಗೇಮ್ ರಸ್ತೆಗಳು ಹಾಗು ಅರಣ್ಯದಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಂಕಿ ರೇಖೆ ನಿರ್ಮಿಸಲಾಗಿದೆ . ಈ ಬಾರಿ 2500 ಕಿಮೀಗೂ ಹೆಚ್ಚು ಉದ್ದದ ಬೆಂಕಿ ರೇಖೆ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿ 10 ಮೀಟರ್ ಅಗಲದಲ್ಲಿ ಬೆಳೆದಿರುವ ಸಣ್ಣಪುಟ್ಟ ಗಿಡಗಂಟಿಗಳು, ಹುಲ್ಲಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಹೀಗೆ ಮಾಡುವುದರಿಂದ ಬೆಂಕಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಬ್ಬವುದು ತಪ್ಪಲಿದೆ.
ವಾಟರ್​ ಸ್ಪ್ರೇ:  ಬಂಡೀಪುರದ ಮಧ್ಯೆ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 67, ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರ ಇಕ್ಕೆಲಗಳಲ್ಲಿ ಟ್ಯಾಂಕರ್​ಗಳ ಮೂಲಕ ವಾಟರ್ ಸ್ಪ್ರೇ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ರಸ್ತೆ ಬದಿಗಳಲ್ಲಿ ಬೇಗ ಹಸಿರು ಚಿಗರಲಿದೆ. ವಾಹನಗಳಲ್ಲಿ ಪಯಣಿಸುವವರು ಒಂದು ವೇಳೆ ಬೀಡಿ ಸೇದಿ ಆಕಸ್ಮಿಕವಾಗಿ ರಸ್ತೆ ಬದಿ ಬೀಸಾಡಿದರೂ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟುವುದು ಇದರ ಉದ್ದೇಶ ಎನ್ನುತ್ತಾರೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದರ್.


ಸೆನ್ಸಾರ್​ ಮೂಲಕ ಎಚ್ಚರಿಕೆ ಸಂದೇಶ:  ಬೆಂಕಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಅರಣ್ಯದಲ್ಲಿ ಯಾವುದೇ ಕಡೆ ಬೆಂಕಿ ಬಿದ್ದರೂ ಅಧಿಕಾರಿಗಳ ಮೊಬೈಲ್​ಗೆ ತಕ್ಷಣ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ. ಹೌದು ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯು ಕರ್ನಾಟಕ ರಿಮೋಟ್ ಸೆನ್ಸಿಂಗ್ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಏಜೆನ್ಸಿಯು ಸ್ಯಾಟಲೈಟ್ ಪಿಕ್ಚರ್​ಗಳನ್ನು ಆಧರಿಸಿ ಅರಣ್ಯದಲ್ಲಿ ಬೆಂಕಿ ಬಿದ್ದ ಪ್ರದೇಶದ ಬಗ್ಗೆ ಸಿಎಫ್, ಎಸಿಎಫ್, ಆರ್​.ಎಫ್.ಓ ಹಾಗು ಡಿ.ಆರ್.ಎಫ್.ಓ.ಗಳ ಮೊಬೈಲ್ ಗಳಿಗೆ ತಕ್ಷಣ ಸಂದೇಶ ರವಾನಿಸಲಿದೆ. ಹೀಗೆ ಸಂದೇಶ ಬರುವುದರಿಂದ ಅರಣ್ಯಾಧಿಕಾರಿಗಳು ಎಚ್ಚೆತ್ತು ಆ ಪ್ರದೇಶಕ್ಕೆ ತಕ್ಷಣ ಧಾವಿಸಿ ಬೆಂಕಿ ನಂದಿಸಬಹುದು. ಬೆಂಕಿ ಹರಡದಂತೆ ಕ್ರಮಕೈಗೊಳ್ಳಬಹುದು. ಒಂದು ವೇಳೆ ಬೆಂಕಿ ಆರದೇ ಇದ್ದರೂ ಆ ಬಗ್ಗೆಯೂ ಎಚ್ಚರಿಕೆ ಸಂದೇಶ ಬರಲಿದೆ.


ಸೇನಾ ಹೆಲಿಕ್ಯಾಪ್ಟರ್​ ಬಳಕೆ: ದುರ್ಗಮ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ತೆರಳಲು ಅರಣ್ಯ ಸಿಬ್ಬಂದಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಸೇನಾ ಹೆಲಿಕಾಪ್ಟರ್​ಗಳನ್ನು ಬಳಸಲು ಕ್ರಮ ಕೈಗೊಳ್ಳಲಾಗಿದೆ. ಈ ಹೆಲಿಕಾಪ್ಟರ್​ಗಳು ಪಕ್ಕದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸದಾ ಸನ್ನದ್ದವಾಗಿದ್ದು ಬೆಂಕಿ ಬಿದ್ದ ಅರ್ಧ ಗಂಟೆಯೊಳಗೆ ಬಂಡೀಪುರಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ.


ಇದನ್ನು ಓದಿ: ಸೂಪರ್ ಸಿಎಂ ಯಾರೂ ಇಲ್ಲ; ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ವಿ ಸೋಮಣ್ಣ


ಕಳೆದ ವರ್ಷ ಫೆಬ್ರವರಿಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೇರ್​ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರು ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ಹಾಗಾಗಿ ಈ ಬಾರಿ ತೀವ್ರ ಕಟ್ಟೆಚ್ಚರ ಹಾಗು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ಮು ಕೈಗೊಳ್ಳಲಾಗಿದೆ.


(ವರದಿ : ಎಸ್ ಎಂ ನಂದೀಶ್)

Published by:Seema R
First published: