ದೇಶಾದ್ಯಂತ ಬಂದ್ ಎಫೆಕ್ಟ್​; ರೈಲಿನಲ್ಲೇ ಮಹಿಳೆಗೆ ಹೆರಿಗೆ

news18
Updated:September 10, 2018, 1:54 PM IST
ದೇಶಾದ್ಯಂತ ಬಂದ್ ಎಫೆಕ್ಟ್​; ರೈಲಿನಲ್ಲೇ ಮಹಿಳೆಗೆ ಹೆರಿಗೆ
news18
Updated: September 10, 2018, 1:54 PM IST
-ಲೋಹಿತ್​, ನ್ಯೂಸ್​ 18 ಕನ್ನಡ

ಚಿಕ್ಕೋಡಿ,(ಸೆ.10): ತೈಲ​ ಬೆಲೆ ಏರಿಕೆ ವಿರೋಧಿಸಿ ಇಂದು ದೇಶಾದ್ಯಂತ ಬಂದ್ ಆಚರಿಸಲಾಗುತ್ತಿರುವ ​ ಪರಿಣಾಮ, ಗರ್ಭಿಣಿಗೆ ರೈಲಿನಲ್ಲೇ ಹೆರಿಗೆ ಮಾಡಿಸಲಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೊಲ್ಲಾಪುರ-ಹೈದರಾಬಾದ್​ ಎಕ್ಸ್​​ಪ್ರೆಸ್​ ರೈಲಿನಲ್ಲಿ 108 ಸಿಬ್ಬಂದಿ ಹಾಗೂ ರೈಲ್ವೆ ಸಿಬ್ಬಂದಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಗರ್ಭಿಣಿ ಮಹಿಳೆ ಯಲ್ಲವಾ ಪಾತ್ರೋಟ ರೈಲಿನಲ್ಲಿ ಮಹಾರಾಷ್ಟ್ರದ ಮೀರಜ್​​​​ನಿಂದ ರಾಯಬಾಗ ಪಟ್ಟಣಕ್ಕೆ ಬರುವಾಗ, ಕುಡಚಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ರೈಲ್ವೆ ಸಿಬ್ಬಂದಿ 108 ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ 108 ಸಿಬ್ಬಂದಿ ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ಮಹಿಳೆಗಾಗಿ ಅರ್ಧ ಘಂಟೆ ರೈಲು ನಿಲ್ಲಿಸಿ ರೈಲ್ವೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ಬಳಿಕ ರಾಯಬಾಗ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರೈಲು ಹಾಗೂ 108 ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...