• Home
  • »
  • News
  • »
  • state
  • »
  • Suicide Case: ಹನಿಟ್ರ್ಯಾಪ್‌ನಲ್ಲಿ ಸಿಲುಕಿ ಒದ್ದಾಡಿದ್ದ ಬಂಡೇಮಠ ಸ್ವಾಮಿ, 10 ಕೋಟಿಗೆ ಡಿಮ್ಯಾಂಡ್ ಮಾಡಿದ್ರಾ ಅನಾಮಿಕರು?

Suicide Case: ಹನಿಟ್ರ್ಯಾಪ್‌ನಲ್ಲಿ ಸಿಲುಕಿ ಒದ್ದಾಡಿದ್ದ ಬಂಡೇಮಠ ಸ್ವಾಮಿ, 10 ಕೋಟಿಗೆ ಡಿಮ್ಯಾಂಡ್ ಮಾಡಿದ್ರಾ ಅನಾಮಿಕರು?

ಬಸವಲಿಂಗ ಸ್ವಾಮೀಜಿ

ಬಸವಲಿಂಗ ಸ್ವಾಮೀಜಿ

ವಿಡಿಯೋ ಮಾಡಿಕೊಂಡಿದ್ದ ಟೀಮ್ ಶ್ರೀಗಳ ಬಳಿ 10 ಕೋಟಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ವಿಡಿಯೋವನ್ನು ಸ್ವಾಮೀಜಿ ಮೊಬೈಲ್ ಗೆ ಕಳುಹಿಸಿ ಬೆದರಿಕೆ ಹಾಕಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿಲಿದೆ ಎನ್ನಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಮಾಗಡಿ ತಾಲೂಕಿನ ಬಂಡೇಮಠದ ಶ್ರೀಗಳ ಆತ್ಮಹತ್ಯೆ (Bandemutt Shree Suicide) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಸಂಬಂಧ ಪೊಲೀಸ್ ತನಿಖೆ (Police Investigation) ಚುರುಕುಗೊಂಡಿದ್ದು ಶ್ರೀಗಳ ಆಪ್ತ ಚಾಲಕ, ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಲಾಗಿದೆ. ಈ ನಡುವೆ ಶ್ರೀಗಳ ಬಳಿ 10 ಕೋಟಿ ಹಣಕ್ಕೆ ಡಿಮ್ಯಾಂಡ್ (Demand) ಮಾಡಲಾಗಿತ್ತು ಅನ್ನೋ ಮಾಹಿತಿ ಬಹಿರಂಗವಾಗ್ತಿದ್ದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹಾಗೇ ಸ್ವಾಮೀಜಿ 3 ಡೆತ್ ನೋಟ್ (Death Note) ಬರೆದಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. 


ಶ್ರೀಗಳು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​


ಕಂಚುಗಲ್ ಬಂಡೇ ಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ನಾಲ್ಕು ದಿನ ಕಳೆದಿದೆ. ಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಮತ್ತಷ್ಟು ಅನುಮಾನಗಳನ್ನ ಹೆಚ್ಚಿಸಿದೆ. ಇದರ ಜೊತೆಗೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು ಶ್ರೀಗಳ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ಪ್ರಭಾವಿಗಳೇ ಸಂಚುರೂಪಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ ಎನ್ನಲಾಗುತ್ತಿದೆ.


ಶ್ರೀಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿ


ಶ್ರೀಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೆಲ ವ್ಯಕ್ತಿಗಳೇ ಮಹಿಳೆಯನ್ನ ಶ್ರೀಗಳಿಗೆ ಪರಿಚಯ ಮಾಡಿಕೊಟ್ಟಿದ್ದರು ಎನ್ನಲಾಗ್ತಿದೆ. ಈ ಕುರಿತಾಗಿ ಈಗಾಗಲೇ 7 ಜನರ ವಿಚಾರಣೆ ನಡೆಸಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿದೆ.


Bande mutt swamy video secrete mrq
ಬಸವಲಿಂಗ ಸ್ವಾಮೀಜಿ


10 ಕೋಟಿ ಹಣಕ್ಕೆ ಬೇಡಿಕೆ


ಬಸವಲಿಂಗ ಶ್ರೀಗಳ ವಿಡಿಯೋವೊಂದು ವೈರಲ್ ಆಗಿರುವ ಹಿನ್ನೆಲೆ ವಿಡಿಯೋ ವೈರಲ್ ಮಾಡಿರುವ ಬಗ್ಗೆಯೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಲ್ಲದೇ ವಿಡಿಯೋ ಮಾಡಿಕೊಂಡಿದ್ದ ಟೀಮ್ ಶ್ರೀಗಳ ಬಳಿ 10 ಕೋಟಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ವಿಡಿಯೋವನ್ನು ಸ್ವಾಮೀಜಿ ಮೊಬೈಲ್ ಗೆ ಕಳುಹಿಸಿ ಬೆದರಿಕೆ ಹಾಕಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿಲಿದೆ.


ಇದನ್ನೂ ಓದಿ: Bandemutt Swamy: ಬಂಡೆಮಠ ಸ್ವಾಮಿಯ 3 ವಿಡಿಯೋ ರಹಸ್ಯ; ಆಸ್ತಿಯ ಲೆಕ್ಕಪತ್ರಗಳ ಪರಿಶೋಧನೆ


ಮಠದ ಆಪ್ತರಿಂದ ವೀಡಿಯೋ ಕಳುಹಿಸಿರೋ ಶಂಕೆ


10 ದಿನದ ಹಿಂದೆಯೇ ಬಸವಲಿಂಗ ಸ್ವಾಮೀಜಿ ಮೊಬೈಲ್​ಗೆ ಮಠದ ಆಪ್ತನೇ ವೀಡಿಯೋ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ಮೊತ್ತದ ಹಣವನ್ನ ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿ ಡೆತ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.


ಪೊಲೀಸರಿಂದ ಮೊಬೈಲ್​ಗಳ ಪರಿಶೀಲನೆ


ಇನ್ನು ಬಸವಲಿಂಗ ಸ್ವಾಮೀಜಿಯ ಆಪ್ತ ಚಾಲಕ ಸೇರಿದಂತೆ ನಾಲ್ವರ ಮೊಬೈಲ್ ಫೋನ್​ನನ್ನು ವಶಕ್ಕೆ ಪಡೆದಿರೋ ಪೊಲೀಸರು ಮೊಬೈಲ್ ಗಳ ಪರಿಶೀಲನೆ ನಡೆಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಊರು ಬಿಟ್ಟು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆಪ್ತ ಚಾಲಕ ಮತ್ತು ಸಿಬ್ಬಂದಿಯಿಂದ ಸ್ವಾಮೀಜಿಯ ಚಲನಾವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಮಠಕ್ಕೆ ಬಂದು ಹೋಗ್ತಿದ್ದವರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆಹಾಕಲಾಗ್ತಿದೆ.


ಸ್ವಾಮೀಜಿ ವಿಡಿಯೋ ವೈರಲ್ ಬಗ್ಗೆ ತನಿಖೆ


ರಾಮನಗರ ಎಸ್ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ನಡೆಸಿ
ಈಗಾಗಲೇ ಕೇಸ್​ನನ್ನು ಕುದೂರು ಪೋಲಿಸ್ ಠಾಣೆಯಿಂದ ಮಾಗಡಿಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಕೆಲವರನ್ನು ಠಾಣೆಗೆ ಕರೆಸಲಾಗಿದೆ. ಜೊತೆಗೆ ಕೆಲವರನ್ನು ಮನೆಯ ಬಳಿಯೇ ಹೋಗಿ ವಿಚಾರಿಸಲಾಗಿದೆ. ಆದರೆ ಯಾರನ್ನೂ ಕೂಡ ವಶಪಡಿಸಿಕೊಂಡಿಲ್ಲ, ಸ್ವಾಮೀಜಿ ವಿಡಿಯೋ ವೈರಲ್ ಬಗ್ಗೆ ಕೂಡ ತನಿಖೆ ಮಾಡಲಾಗುವುದು.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ವಿಡಿಯೋ ರಿಲೀಸ್ ಮಾಡಲು ಪ್ಲಾನ್


ಇನ್ನು ವಿಡಿಯೋ ಮಾಡಿಕೊಂಡಿರುವುದು ಕೆಲವೊಂದು ಉದ್ದೇಶಗಳಿಗಾಗಿ
ಅದನ್ನು ತನಿಖೆ ಮಾಡಲಾಗುತ್ತಿದೆ. ಮುಂದೊಂದು ದಿನ ಆ ವಿಡಿಯೋವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿ ವಿಡಿಯೋ ಮಾಡಿಕೊಂಡಿದ್ದಾರೆ.
ಸ್ವಾಮೀಜಿ ಸಾವಿನಲ್ಲಿ ಯಾರೇ ಇದ್ರೂ ಕೂಡ ತನಿಖೆ ಮಾಡಲಾಗುತ್ತದೆ, ಪ್ರಾಥಮಿಕ ವಿಚಾರಣೆ ನಡೆಯುತ್ತಿದೆ. ಆ ಯುವತಿಯ ಕೆಲವೊಂದು ಸಾಕ್ಷಾಧಾರಗಳನ್ನು ಹುಡುಕುತ್ತಿದ್ದೇವೆ.


ಸ್ವಾಮೀಜಿ ಪೋನ್ ನಲ್ಲಿದ್ದ ಕಾಲ್ ಡಿಟೇಲ್ ಮುಖಾಂತರ ವಿಚಾರಣೆ ನಡೆಸಲಾಗುವುದು ಎಂದರು. ಇನ್ನು ಸ್ವಾಮೀಜಿ ಅವರು ಡೆತ್ ನೋಟ್ ಬರೆದು ಕಿಟಕಿಯಿಂದ ಹೊರಗಡೆ ಎಸೆದಿದ್ದರು, ಶ್ರೀಗಳು ಮೊದಲು ಬರೆದಿದ್ದ ಡೆತ್ ನೋಟ್ ಭಕ್ತರಿಗೆ, ಜನರಿಗೆ ಅಡ್ರೆಸ್ ಮಾಡಿದ್ದರು. ಪೋಲಿಸರಿಗೆ ಇಟ್ಟಿದ್ದ ಡೆತ್ ನೋಟ್ ನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಅಂತಾ ಬರೆದಿದ್ದರು.


ಮಠದ ಸಿಬ್ಬಂದಿ ಬಳಿ ಕೂಡ ಒಂದು ಡೆತ್ ನೋಟ್ ಇದೆ ಅಂತಾ ಗೊತ್ತಾಗಿದೆ  ಆ ಡೆತ್ ನೋಟ್ ಕೂಡ ಸಿಗುವ ಸಾಧ್ಯತೆ ಇದೆ. ಪೋಲಿಸ್ ಇಲಾಖೆಗೆ ಮೊದಲು ಮೂರು ಪುಟಗಳು ಸಿಕ್ಕಿತ್ತು, ನಂತರ ಸ್ವಾಮೀಜಿ ಹರಿದು ಬಿಸಾಕಿದ್ದ ಮೂರು ಪುಟಗಳು ದೊರೆತಿವೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ಮಾಡಿದರು.


ಶೀಘ್ರವಾಗಿ ತನಿಖೆ ಮುಗಿಸುವಂತೆ ಮನವಿ


ಒಟ್ಟಾರೆ ದಿನಕಳೆದಂತೆ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ರೆಕ್ಕೆಪುಕ್ಕಗಳು ಹೆಚ್ಚಾಗುತ್ತಿವೆ. ತನಿಖೆ ಬಗ್ಗೆ ಸಾಕಷ್ಟು ಊಹಾಪೋಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಮಠದ ಕೆಲ ಮುಖಂಡರು ಸಿಎಂ ಭೇಟಿಯಾಗಿ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮುಗಿಸುವಂತೆ ಮನವಿ ಮಾಡುವ ಬಗ್ಗೆ ಮಾಹಿತಿ ದೊರೆತಿದೆ. ಇನ್ನಾದರೂ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದ್ಯಾ ಎಂದು ಕಾದುನೋಡಬೇಕಿದೆ.

Published by:ಪಾವನ ಎಚ್ ಎಸ್
First published: