• Home
  • »
  • News
  • »
  • state
  • »
  • Bandemutt Swamy: ಬಂಡೆಮಠ ಸ್ವಾಮಿಯ 3 ವಿಡಿಯೋ ರಹಸ್ಯ; ಆಸ್ತಿಯ ಲೆಕ್ಕಪತ್ರಗಳ ಪರಿಶೋಧನೆ

Bandemutt Swamy: ಬಂಡೆಮಠ ಸ್ವಾಮಿಯ 3 ವಿಡಿಯೋ ರಹಸ್ಯ; ಆಸ್ತಿಯ ಲೆಕ್ಕಪತ್ರಗಳ ಪರಿಶೋಧನೆ

ಬಸವಲಿಂಗ ಸ್ವಾಮೀಜಿ

ಬಸವಲಿಂಗ ಸ್ವಾಮೀಜಿ

ಸ್ವಾಮೀಜಿಯ ಇನ್ನು 3 ವಿಡಿಯೋಗಳು ಇರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಹೈಕೋರ್ಟ್​ನಲ್ಲಿ ತಡೆಯಾಜ್ಞೆ ತರಲು ನಿರ್ಧರಿಸಿದ್ದಾರೆ.

  • Share this:

ಬಂಡೆಮಠದ ಬಸವಲಿಂಗ ಶ್ರೀ (Basavalinga Swamiji) ಆತ್ಮಹತ್ಯೆ ಪ್ರಕರಣಕ್ಕೆ (Suicide Case) ಕುದೂರು ಪೊಲೀಸರು 3 ಮಹಿಳೆಯರು ಸೇರಿ 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಮೊಬೈಲ್ ಫೋನ್ ಕಾಲ್ ಡಿಟೇಲ್ಸ್ (Phone Call Details) ಅಧಾರದ ಮೇಲೆ ಕುದೂರು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮಾಡ್ತಿದ್ದಾರೆ. ಇನ್ನು ಸ್ವಾಮೀಜಿಯ ಅರೆಬೆತ್ತಲೆ ವಿಡಿಯೋ ವೈರಲ್ (Video Viral) ಆಗ್ತಿದ್ದಂತೆ ಲಿಂಗಾಯತ ಮುಖಂಡರು (Lingayat Leaders) ಎಚ್ಚೆತ್ತುಕೊಂಡಿದ್ದಾರೆ. ಸ್ವಾಮೀಜಿಯ ಇನ್ನು 3 ವಿಡಿಯೋಗಳು ಇರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಹೈಕೋರ್ಟ್​ನಲ್ಲಿ (Highcourt) ತಡೆಯಾಜ್ಞೆ ತರಲು ನಿರ್ಧರಿಸಿದ್ದಾರೆ. ಒಂದು ವೇಳೆ ಸ್ಟೇ ತಂದ್ರೆ ಯಾವುದೇ ವಿಡಿಯೋ ಪ್ರಸಾರ ಮಾಡಬಾರದು. ಸ್ವಾಮೀಜಿ ಆತ್ಮಹತ್ಯೆ ವಿಚಾರವಾಗಿ ಯಾವುದೇ ಸುದ್ದಿ ಪ್ರಸಾರಕ್ಕೆ ತಡೆ ಬೀಳಲಿದೆ.


ಮಠದಲ್ಲಿ ಆಸ್ತಿ ಲೆಕ್ಕ


ಬಂಡೆಮಠದ ಬಸವಲಿಂಗ ಸ್ವಾಮಿ ಸಾವನ್ನಪ್ಪಿದ್ದಕ್ಕೆ ಮಠದಲ್ಲಿ ಲೆಕ್ಕಪತ್ರಗಳ ಪರಿಶೋಧನೆ ಮಾಡಲಾಗಿದೆ. ತುಮಕೂರಿನ‌ ಸಿದ್ದಲಿಂಗಾ ಶ್ರೀಗಳ ಸೂಚನೆಯಂತೆ ಮಠದ ಆಡಳಿತ ಮಂಡಳಿ ಪರಿಶೀಲನೆ ಮಾಡಿದೆ.


ಮಠದ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳು, ಲೆಕ್ಕ ವ್ಯವಹಾರದ ಪತ್ರಗಳು, ಆಯವ್ಯಯ ದಾಖಲೆಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ.


ಇನ್ನು ಬಸವಲಿಂಗ ಸ್ವಾಮೀಜಿ ಸಾವಿನ ಬಳಿಕ ಕಂಚುಗಲ್​ ಮಠಕ್ಕೆ ಬೆಂಗಳೂರಿನ ಗುರುವಣ್ಣ ಮಠದ ಶ್ರೀಗಳನ್ನ ಉಸ್ತುವಾರಿಯನ್ನಾಗಿ ನೇಮಿಸಿ, ಜವಾಬ್ದಾರಿ ವಹಿಸಲಾಗಿದೆ.


ಹನಿಟ್ರ್ಯಾಪ್ ಆರೋಪ


ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆಗೆ ಸ್ಫೋಟಕ ಟ್ವಿಸ್ಟ್​  ಸಿಕ್ಕಿದೆ. ಬಸವಲಿಂಗ ಸ್ವಾಮೀಜಿಗೆ ಹನಿಟ್ರ್ಯಾಪ್ ಮಾಡಿದ್ದ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ವಾಮೀಜಿಯ ಅರೆಬೆತ್ತಲೆಯ ವಿಡಿಯೋ ಒಂದು  ವೈರಲ್ ಆಗಿದೆ. ಅರೆಬೆತ್ತಲಾಗಿ ಮಹಿಳೆ ಜೊತೆ ಮಾತಾಡಿರುವ ಅನುಮಾನ ವ್ಯಕ್ತವಾಗಿದೆ.


ಗುರುವಣ್ಣ ಮಠದ ಶ್ರೀಗಳಿಗೆ ಜವಾಬ್ದಾರಿ


ಇನ್ನು ಬಸವಲಿಂಗಸ್ವಾಮೀಜಿ ಸಾವಿನ ಬಳಿಕ ಕಂಚುಗಲ್​ ಮಠದಲ್ಲಿ ವೀರಶೈವ ಮುಖಂಡರ ಸಭೆ ನಡೆಸಿದರು. ಮಠದ ಮುಂದಿನ ಕೆಲಸ ಹಾಗೂ ಪೀಠಾಧಿಪತಿ ಬಗ್ಗೆ ಚರ್ಚಿಸಲಾಯ್ತು. ಮಠದ ಜವಬ್ದಾರಿನ್ನು ಬೆಂಗಳೂರಿನ ಗುರುವಣ್ಣ ಮಠದ ಶ್ರೀಗಳಿಗೆ ವಹಿಸಲಾಯ್ತು.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ಆತ್ಮಹತ್ಯೆ ಬಗ್ಗೆ ಮಾಹಿತಿ ಇರಲಿಲ್ಲ


ಶ್ರೀಗಳ ಸಾವಿನ ಬಗ್ಗೆ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬಂಡೆಮಠದ ಶ್ರೀಗಳು ಯುವಕರು, ಸಮಾಜದ ಕಳಕಳಿ ಉಳ್ಳವಾರಾಗಿದ್ದರು. ಅವರು ಎಂದಿಗೂ ನಮ್ಮ ಬಳಿ ತಮ್ಮ ನೋವುಗಳ ಬಗ್ಗೆ ಚರ್ಚೆ ಮಾಡಿರಲಿಲ್ಲ ಎಂದಿದ್ದಾರೆ. ಇನ್ನೂ  ಹೊನ್ನಮಗವಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾತನಾಡಿ, ಅವರ ಆತ್ಮವನ್ನೇ ಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ಸಂಕಟ ಅವರಿಗಾಗಿದೆ ಎಂದು ಹೇಳಿದರು.


ರಾಮನಗರ ಎಸ್​​ಪಿ ಹೇಳಿದ್ದೇನು?


ರಾಮನಗರ ಎಸ್​​ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ನಡೆಸಿ, ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಅನ್ ನ್ಯಾಚುರಲ್ ಡೆತ್ ಅಂತ ದೂರು ನೀಡಲಾಗಿದೆ. ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.


ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಸಿಕ್ಕಿದೆ. ದೂರಿನ ಅನ್ವಯ ಅನಾಮದೇಯ ಮಹಿಳೆ ವಿರುದ್ಧ IPC ಸೆಕ್ಷನ್​ 306 ರ ಅಡಿ ಕೇಸ್ ದಾಖಲಾಗಿದೆ. ಕೆಲವರ ಹೆಸರೂ ಕೂಡ ಡೆತ್​ನೋಟ್​ನಲ್ಲಿದೆ ಎಂದಿದ್ದಾರೆ.


ಇದನ್ನೂ ಓದಿ:  Deepavali Crackers: ಕಣ್ಣಿನ ಗುಡ್ಡೆ ಸೀಳಿದ ಪಟಾಕಿಗಳು; ನಾರಾಯಣ ನೇತ್ರಾಲಯಕ್ಕೆ ದಾಖಲಾದವರೆಷ್ಟು?

 ಎಲ್ಲಾ ಅಯಾಮದಲ್ಲೂ ತನಿಖೆ

ಅರೆಬೆತ್ತಲಾಗಿ ಮಹಿಳೆ ಜೊತೆ ಮಾತಾಡಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಗೆ ಬ್ಲ್ಯಾಕ್​ಮೇಲ್​ (Blackmail) ಮಾಡಲಾಗಿತ್ತಾ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.

Published by:Mahmadrafik K
First published: