• Home
  • »
  • News
  • »
  • state
  • »
  • Bandemutt Swamy Case: ಕಣ್ಣೂರು ಮಠದ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ!

Bandemutt Swamy Case: ಕಣ್ಣೂರು ಮಠದ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ!

ಬಂಡೆಮಠ ಸ್ವಾಮೀಜಿ ಕೇಸ್​

ಬಂಡೆಮಠ ಸ್ವಾಮೀಜಿ ಕೇಸ್​

ಪೊಲೀಸರು ಹನಿಟ್ರ್ಯಾಪ್ (Honeytrap) ಬಲೆ ಬೀಸಿದ್ದ ಆರೋಪಿ ಯುವತಿಯನ್ನು ಬಂಧಿಸಿದ್ದಾರೆ. ಈಕೆಯ ಹೆಸರು ನೀಲಾಂಬಿಕೆ (Nilambike) ಅಲಿಯಾಸ್​​ ಚಂದು ಎಂದು ಹೇಳಲಾಗಿದೆ.

  • News18 Kannada
  • Last Updated :
  • Karnataka, India
  • Share this:

ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ (Bandemutt Basavalinga Swamiji) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನಿಟ್ರ್ಯಾಪ್ (Honeytrap) ಬಲೆ ಬೀಸಿದ್ದ ಆರೋಪಿ ಯುವತಿಯನ್ನು ಬಂಧಿಸಿದ್ದಾರೆ. ಈಕೆಯ ಹೆಸರು ನೀಲಾಂಬಿಕೆ (Nilambike) ಅಲಿಯಾಸ್​​ ಚಂದು ಎಂದು ಹೇಳಲಾಗಿದೆ. ಇನ್ನು ಕಣ್ಣೂರು ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಯುವತಿ ನೀಲಾಂಬಿಕೆ ಅರೆಸ್ಟ್​


ಈಕೆಯು ದೊಡ್ಡಬಳ್ಳಾಪುರ ಮೂಲದವಳು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಹೇಳಿದ್ದಾರೆ. ಆರೋಪಿ ಯುವತಿ ನೀಲಾಂಬಿಕೆಯೇ ವೀಡಿಯೋ ಮಾಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ.ಮೃತ್ಯುಂಜಯ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಅಣ್ಣ-ತಮ್ಮಂದಿರು. ಎರಡೂ ಮಠಗಳ ನಡುವೆ ಆಸ್ತಿ ವಿವಾದ ಇತ್ತು. ಈ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.


ಬಂಡೆಮಠ ಸ್ವಾಮೀಜಿ ಕೇಸ್​


ಕಣ್ಣೂರು ಮಠದ ಸ್ವಾಮೀಜಿ ಬಂಧನ


ಪ್ರಕರಣದ ಮೊದಲ ಆರೋಪಿಯಾಗಿ (A1) ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, 2ನೇ ಆರೋಪಿಯಾಗಿ ನಿಲಾಂಬಿಕೆ ಅಲಿಯಾಸ್ ಚಂದರು ಹಾಗೂ 3ನೇ ಆರೋಪಿಯಾಗಿ ಕಣ್ಣೂರು ಮಠದ ವಕೀಲ ಮಹದೇವಯ್ಯ ಅವರನ್ನು ಹೆಸರಿಸಲಾಗಿದೆ. ಆಕ್ಷೇಪಾರ್ಯ ವಿಡಿಯೊವನ್ನು ಫೆಬ್ರವರಿ ಅಥವಾ ಏಪ್ರಿಲ್​ನಲ್ಲಿ ರೆಕಾರ್ಡ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಕಣ್ಣೂರು ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಕಣ್ಣೂರು ಶ್ರೀ ಬಗ್ಗೆ ಸ್ಫೋಟಕ ಮಾಹಿತಿ


ಬಂಧನಕ್ಕೆ ಒಳಗಾಗಿರುವ ಕಣ್ಣೂರು ಶ್ರೀ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕಣ್ಣೂರು ಮಠದ ಸ್ವಾಮಿ ಪ್ರತಿಷ್ಠಿತ ಮಠದ ವಿದ್ಯಾಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ವೇಳೆ ಲಕ್ಷ ಲಕ್ಷ ಹಣಕ್ಕೆ ಡೀಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.


ಇದನ್ನೂ ಓದಿ:  KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


ರಾಜ್ಯದ ಎಲ್ಲಾ ಸಂಸ್ಕೃತ ವಿದ್ಯಾಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದ ಕಣ್ಣೂರು ಶ್ರೀ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲೂ ಪ್ರಾಬಲ್ಯ ಹೊಂದಿರುವ ಆರೋಪ ಕೇಳಿ ಬಂದಿದೆ. ನೇಮಕಾತಿ, ಟ್ರಾನ್ಸ್​ಫರ್ ದಂಧೆಯಲ್ಲಿ ಕಣ್ಣೂರು ಶ್ರೀ ಎತ್ತಿದ ಕೈ ಎಂದು ಹೇಳಲಾಗುತ್ತಿದೆ.


ಮಠದಲ್ಲಿ ಆಸ್ತಿ ಲೆಕ್ಕ


ಬಂಡೆಮಠದ ಬಸವಲಿಂಗ ಸ್ವಾಮಿ ಸಾವನ್ನಪ್ಪಿದ್ದಕ್ಕೆ ಮಠದಲ್ಲಿ ಲೆಕ್ಕಪತ್ರಗಳ ಪರಿಶೋಧನೆ ಮಾಡಲಾಗಿದೆ. ತುಮಕೂರಿನ‌ ಸಿದ್ದಲಿಂಗಾ ಶ್ರೀಗಳ ಸೂಚನೆಯಂತೆ ಮಠದ ಆಡಳಿತ ಮಂಡಳಿ ಪರಿಶೀಲನೆ ಮಾಡಿದೆ. ಮಠದ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳು, ಲೆಕ್ಕ ವ್ಯವಹಾರದ ಪತ್ರಗಳು, ಆಯವ್ಯಯ ದಾಖಲೆಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ. ಇನ್ನು ಬಸವಲಿಂಗ ಸ್ವಾಮೀಜಿ ಸಾವಿನ ಬಳಿಕ ಕಂಚುಗಲ್​ ಮಠಕ್ಕೆ ಬೆಂಗಳೂರಿನ ಗುರುವಣ್ಣ ಮಠದ ಶ್ರೀಗಳನ್ನ ಉಸ್ತುವಾರಿಯನ್ನಾಗಿ ನೇಮಿಸಿ, ಜವಾಬ್ದಾರಿ ವಹಿಸಲಾಗಿದೆ.


ಇದನ್ನೂ ಓದಿ:  Bengaluru Pothole: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ; ಬೈಕ್ ಸವಾರ ಸಾವು


ಸ್ವಾಮೀಜಿ ನಾಪತ್ತೆ


ಈ ನಡುವೆ ಬಸವಲಿಂಗ ಸ್ವಾಮೀಜಿ ತಮ್ಮ ಡೆತ್​ನೋಟ್​ನಲ್ಲಿ ಪ್ರಸ್ತಾಪಿಸಿದ್ದ ಸ್ವಾಮೀಜಿಯೊಬ್ಬರು ನಾಪತ್ತೆಯಾಗಿರುವುದು ಹಲವರ ಹುಬ್ಬೇರಿಸಿದೆ. ಆರೋಪಿ ಸ್ವಾಮೀಜಿ ತಮ್ಮ ಮಠದಿಂದ ನಾಪತ್ತೆಯಾಗಿದ್ದು, ಬಂಧನ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳದಿಂದಲೇ ಅವರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದೀಗ ಪೊಲೀಸರ ವಶದಲ್ಲಿರುವ ಕಣ್ಣೂರು ಮಠದ ಸ್ವಾಮೀಜಿ ಹಾಗೂ ಬಂಡೇಮಠದ ಸ್ವಾಮೀಜಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ಸ್ವಾಮೀಜಿ ಒಬ್ಬರೇನಾ ಎನ್ನುವ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ.

Published by:ಪಾವನ ಎಚ್ ಎಸ್
First published: