• Home
  • »
  • News
  • »
  • state
  • »
  • Ramanagara: ಬಂಡೆಮಠ ಶ್ರೀಗಳ ಆತ್ಮಹತ್ಯೆ ಕೇಸ್​ಗೆ ರೋಚಕ ಟ್ವಿಸ್ಟ್, ಹನಿಟ್ರ್ಯಾಪ್ ಟೀಂನಲ್ಲಿ ಮತ್ತೊಬ್ಬ ಸ್ವಾಮೀಜಿ?

Ramanagara: ಬಂಡೆಮಠ ಶ್ರೀಗಳ ಆತ್ಮಹತ್ಯೆ ಕೇಸ್​ಗೆ ರೋಚಕ ಟ್ವಿಸ್ಟ್, ಹನಿಟ್ರ್ಯಾಪ್ ಟೀಂನಲ್ಲಿ ಮತ್ತೊಬ್ಬ ಸ್ವಾಮೀಜಿ?

ಬಸವಲಿಂಗ ಸ್ವಾಮೀಜಿ

ಬಸವಲಿಂಗ ಸ್ವಾಮೀಜಿ

ಸಾವಿಗೂ ಮುನ್ನ ಅವರು ಬರೆದಿದ್ದ ಎರಡು ಪುಟಗಳ ಡೆತ್​ನೋಟ್​ ಹಲವಾರು ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮಹಿಳೆ ಜೊತೆ ಅರೆನಗ್ನವಾಗಿ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದ ಸ್ವಾಮೀಜಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Ramanagara, India
  • Share this:

ರಾಮನಗರ(ಅ.28): ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆಗೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೌದು ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಂಡೆಮಠದ ಶ್ರೀಗಳ (Bande Mutt seer Basavalinga Swami) ಸಂಬಂಧ ಹೊಸ ವಿಚಾರಗಳು ಬಯಲಾಗುತ್ತಿವೆ. ಸಾವಿಗೂ ಮುನ್ನ ಅವರು ಬರೆದಿದ್ದ ಎರಡು ಪುಟಗಳ ಡೆತ್​ನೋಟ್​ ಹಲವಾರು ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮಹಿಳೆ ಜೊತೆ ಅರೆನಗ್ನವಾಗಿ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದ ಸ್ವಾಮೀಜಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ದೊಡ್ಡ ಗೇಮ್ ಪ್ಲಾನ್ ನಡೆದಿರುವ ಶಂಕೆ


ಹೌದು ಪ್ರತಿದಿನ ಶ್ರೀಗಳ ಒಂದೊಂದು ರಾಸಲೀಲೆ ವಿಡಿಯೋ ರಿಲೀಸ್ ಆಗುತ್ತಿದೆ. ಹೀಗಿರುವಾಗ ಶ್ರೀಗಳ ಮರಣದ ಹಿಂದೆ ಇದೆ ಒಂದು ದೊಡ್ಡ ಗೇಮ್ ಪ್ಲಾನ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ದಿನಕ್ಕೊಂದು ವಿಡಿಯೋ ರಿಲೀಸ್ ಮಾಡುತ್ತಿರುವ ಹಿಂದಿನ ಉದ್ದೇಶವೇನು? ವಿಡಿಯೋ ರಿಲೀಸ್ ಮಾಡೋದಕ್ಕೆ ಕಾರಣವೇನು? ವಿಡಿಯೋ ಮಾಡಿರುವ ಅಥವಾ ಮಾಡಿಸಿರುವ ವ್ಯಕ್ತಿಗಳು ಯಾರು? ಅವರ ಬಳಿ ಇನ್ನೂ 20ಕ್ಕೂ ಹೆಚ್ಚು ವಿಡಿಯೋಸ್ ಇದೆಯಾ? ಶ್ರೀಗಳು ಸಾವನ್ನಪ್ಪಿದ ಮೇಲೆ‌ ವಿಡಿಯೋ ರಿಲೀಸ್‌ಗೆ ಕಾರಣವೇನು? ಎಂಬಿತ್ಯಾದಿ ಸವಾಲುಗಳು ಎದ್ದಿವೆ.


ಹನಿಟ್ರ್ಯಾಪ್ ಟೀಂನಲ್ಲಿ ಮತ್ತೊಬ್ಬ ಸ್ವಾಮೀಜಿ ಭಾಗಿ ಶಂಕೆ


ಸದ್ಯ ಕಳೆದ ಎರಡು ಮೂರು ದಿನಗಳಿಂದ ಪೊಲೀಸರು ಈ ಪ್ರಕರಣ ಬೇಧಿಸಲು ನಿರಂತರ ತನಿಖೆ ನಡೆಸುತ್ತಿದ್ದು, ಈ ಹನಿಟ್ರ್ಯಾಪ್ ತಂಡದಲ್ಲಿ ಮತ್ತೊಬ್ಬ ಸ್ವಾಮೀಜಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಠದ ಸಿಬ್ಬಂದಿ ಹಾಗೂ ಮೂವರು ಮಹಿಳೆಯರ ತನಿಖೆ ವೇಳೆ ಸ್ವಾಮೀಜಿ ಹೆಸರು ಬಹಿರಂಗಗೊಂಡಿದ್ದು, ಸ್ವಾಮೀಜಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಪ್ರಕರಣದ ಮಾಸ್ಟರ್ ಮೈಂಡ್ ಸ್ವಾಮೀಜಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.


ಮೂರು ದಿನಗಳ ಹಿಂದೆ ಆತ್ಮಹತ್ಯೆ


ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಂಡೆಮಠದ ಶ್ರೀಗಳ ಸಾವಿನ ಸುತ್ತ ದಿನೇ ದಿನೇ ಹೊಸ ಸ್ಫೋಟಕ ವಿಷಯಗಳು ಬಯಲಾಗುತ್ತಿದೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು 2 ಪುಟಗಳ ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲೂ ಹಲವರ ಹೆಸರನ್ನು ಬರೆದಿದ್ದು. ಆದರೆ ಪ್ರಕರಣಕ್ಕೆ ಸಂಬಂಧಿಸಿ ಕುದೂರು ಪೊಲೀಸರು ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.


ಇದನ್ನೂ ಓದಿ:  Deepavali Crackers: ಕಣ್ಣಿನ ಗುಡ್ಡೆ ಸೀಳಿದ ಪಟಾಕಿಗಳು; ನಾರಾಯಣ ನೇತ್ರಾಲಯಕ್ಕೆ ದಾಖಲಾದವರೆಷ್ಟು?


ಸ್ವಾಮೀಜಿ ಸಾವಿಗೆ ಬೆದರಿಕೆಯೇ ಕಾರಣನಾ?


ಅದಾದ ಬಳಿಕ ಸ್ವಾಮೀಜಿ ಸಾವಿಗೆ ಬೆದರಿಕೆಯೇ ಕಾರಣನಾ ಎಂಬ ಅನುಮಾನಗಳು ಹೆಚ್ಚಾಗಿತ್ತು. ಏಕೆಂದರೆ ಸ್ವಾಮೀಜಿ ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಇಬ್ಬರು ವ್ಯಕ್ತಿಗಳು ಭೇಟಿ ಆಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಆದರೆ ದಿನ ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆದಿತ್ತು. ಅವರಿಬ್ಬರ ಭೇಟಿ ಬಳಿಕ ಶ್ರೀಗಳು ವಿಚಲಿತರಾಗಿದ್ರಾ? ಶ್ರೀಗಳನ್ನು ಭೇಟಿ ಮಾಡಿದ್ದಾ ಆ ಇಬ್ಬರು ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳು ಮೂಡಿತ್ತು.

Published by:Precilla Olivia Dias
First published: