ಬನಶಂಕರಿ ದೇವಿ ದರ್ಶನ ಪಡೆದ ಪವರ್ ಸ್ಟಾರ್ ಪುನಿತ್​

news18
Updated:July 17, 2018, 4:02 PM IST
ಬನಶಂಕರಿ ದೇವಿ ದರ್ಶನ ಪಡೆದ ಪವರ್ ಸ್ಟಾರ್ ಪುನಿತ್​
news18
Updated: July 17, 2018, 4:02 PM IST
ನ್ಯೂಸ್18 ಕನ್ನಡ

ಬಾಗಲಕೋಟೆ ( ಜುಲೈ 17) : ನಟ ಸಾರ್ವಭೌಮ ಚಿತ್ರೀಕರಣಕ್ಕಾಗಿ ಆಗಮಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲಿಯ ಬನಶಂಕರಿದೇವಿ ದರ್ಶನ ಪಡೆದರು.

ಈ ವೇಳೆ ಜನರು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ತಗೆಯಿಸಿಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳನ್ನ ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇದೇ ವೇಳೆ ನಟ ರವಿಶಂಕರ್ ಕೂಡಾ ಬನಶಂಕರಿದೇವಿ ದರ್ಶನ ಪಡೆದರು.

ಕೆಲ ದಿನಗಳ ಹಿಂದೆ ಇಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾವ೯ಭೌಮ ಚಿತ್ರದ ಪ್ರೀ ಕ್ಲೈಮ್ಯಾಕ್ಸ್  ಚಿತ್ರೀಕರಣ ನಡೆದಿತ್ತು. ಇಲ್ಲಿನ ಬಾದಾಮಿ ತಾಲೂಕಿನ ಇತಿಹಾಸ ಪ್ರಸಿದ್ಧ ಪುಷ್ಕರಣಿಯಲ್ಲಿ ಅನುಮತಿ ಪಡೆಯದೇ ಸೆಟ್ ಹಾಕಿದ ಹಿನ್ನೆಲೆಯಲ್ಲಿ ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961-1965ರ ಅಡಿ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಜತೆಗೆ, ದೇಗುಲದ ಸುತ್ತಮುತ್ತ ಚಿತ್ರೀಕರಣ ಸ್ಥಗಿತಕ್ಕೆ ಸೂಚನೆ ನೀಡಲಾಗಿತ್ತು.


ಮಹಾಕೂಟದ ಪುಷ್ಕರಣಿ ಎಂದೂ ಬತ್ತದ ಅಂತರ್ಜಲದಿಂದ ಖ್ಯಾತಿ ಗಳಿಸಿದೆ. ಇತಿಹಾಸ ಪ್ರಸಿದ್ಧ ಈ ಪುಷ್ಕರಣಿಯಲ್ಲಿ ಹಳ್ಳತೋಡಿ ಸೆಟ್ ಹಾಕಿದ್ದರಿಂದ ಸ್ಥಳೀಯ ಜನರಿಂದ ಆಕ್ಷೇಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟೀಕರಣ ನಿಡಿದ್ದ ಚಿತ್ರತಂಡ ಪಾರಂಪರಿಕ ತಾಣಕ್ಕೆ ಯಾವುದೇ ಧಕ್ಕೆ ಮಾಡಿಲ್ಲ ಎಂದು ಸಮರ್ಥನೆ ನೀಡಿತ್ತು.

 
Loading...

 
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...