ನನ್ನೊಂದಿಗೆ ಐದು ಬಾರಿ ಸಂಭೋಗ ಮಾಡಿದರೆ ಸರ್ಪದೋಷ ಪರಿಹಾರ - ಯುವತಿಗೆ ವಂಚಿಸಿದ ಬೆಂಗಳೂರಿನ ಕಾಮಿ ಸ್ವಾಮಿ

ಶನಿವಾರ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರವಾಗಿ ಪೂಜೆ ಮಾಡುತ್ತಾನೆ. ಪೂಜೆ ಮುಗಿದ ಬಳಿಕ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ತಿಳಿಸುತ್ತಾನೆ. ಆತನ ಮಾತು ನಂಬಿದ ಯುವತಿ ಶನಿವಾರ ರಾತ್ರಿಯೇ ಆತನೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಾರೆ

G Hareeshkumar | news18
Updated:September 12, 2019, 2:38 PM IST
ನನ್ನೊಂದಿಗೆ ಐದು ಬಾರಿ ಸಂಭೋಗ ಮಾಡಿದರೆ ಸರ್ಪದೋಷ ಪರಿಹಾರ - ಯುವತಿಗೆ ವಂಚಿಸಿದ ಬೆಂಗಳೂರಿನ ಕಾಮಿ ಸ್ವಾಮಿ
ಯುವತಿಗೆ ವಂಚಿಸಿದ ಆರೋಪಿ ಗಣೇಶ್ ಹಾಗೂ ಮಗ ಮಣಿಕಂಠಸ್ವಾಮಿ
  • News18
  • Last Updated: September 12, 2019, 2:38 PM IST
  • Share this:
ಬೆಂಗಳೂರು(ಸೆ. 12): ಸರ್ಪ ದೋಷ ಪರಿಹಾರ ಮಾಡಿಸುತ್ತೇನೆಂದು ಹೇಳಿ ನಂಬಿಸಿ ಯುವತಿ ಮಾಡಬೇಕಾದ್ರೆ ನೀನು ನನ್ನೊಂದಿಗೆ 5 ಬಾರಿ ಸಂಭೋಗ ಮಾಡಬೇಕು. ನನ್ನ ಮಗನೊಂದಿಗೂ ಸಹಕರಿಸಬೇಕು ಎಂದು ಬೆಂಗಳೂರಿನ ವ್ಯಕ್ತಿಯೊಬ್ಬ ಯುವತಿಯನ್ನ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಬಾಣಸವಾಡಿ ಪೊಲೀಸರು ಕಾಮಿಸ್ವಾಮಿಯ ಮಗ ಮಣಿಕಂಠನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗಣೇಶ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯು ಯುವತಿಯನ್ನು ನಂಬಿಸಿ ಕುಕ್ಕೆ ಸುಬ್ರಮಣ್ಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿರುವುದು ಯುವತಿ ನೀಡಿದ ದೂರಿನಿಂದ ತಿಳಿದುಬಂದಿದೆ.

ಘಟನೆ ಏನು ?

ಬಾಣಸವಾಡಿಯಲ್ಲಿರುವ ಕಂಪನಿಯೊಂದರಲ್ಲಿ ಸಂತ್ರಸ್ತ ಯುವತಿಯು ಹೆಚ್​​ಆರ್​​ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಏನೋ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸಲಹೆ ಕೇಳಲೆಂದು ಗಣೇಶ್​ನನ್ನು ಸಂಪರ್ಕಿಸಿರುತ್ತಾರೆ. ಅದಕ್ಕೆ ಆತ ನಿಮಗೆ ಸರ್ಪದೋಷವಿದ್ದು ಅದನ್ನು ಪರಿಹರಿಸಲು ಪೂಜೆ ಮಾಡಬೇಕಿದೆ ಎಂದು ಹೇಳುತ್ತಾನೆ. ಇದಕ್ಕೆ 40 ಸಾವಿರ ರೂಪಾಯಿ ವಸೂಲಿ ಮಾಡುತ್ತಾನೆ.

ಇದನ್ನೂ ಓದಿ : ಸೆಲ್ಫಿ ಗೀಳಿಗೆ ಇಬ್ಬರು ಯುವಕರು ಬಲಿ; ತುಂಗಭದ್ರ ಡ್ಯಾಂ ಬಳಿ ಸೆಲ್ಪೀ ತೆಗೆದುಕೊಳ್ಳುವ ಮುನ್ನ ಎಚ್ಚರ....!

ಶನಿವಾರ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರವಾಗಿ ಪೂಜೆ ಮಾಡುತ್ತಾನೆ. ಪೂಜೆ ಮುಗಿದ ಬಳಿಕ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ತಿಳಿಸುತ್ತಾನೆ. ಆತನ ಮಾತು ನಂಬಿದ ಯುವತಿ ಶನಿವಾರ ರಾತ್ರಿಯೇ ಆತನೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಾರೆ. ಈತ ಕುಕ್ಕೆಯಲ್ಲಿ ಎರಡು ಪ್ರತ್ಯೇಕ ಕೋಣೆಗಳನ್ನು ಮಾಡಿರುತ್ತಾನೆ. ಯುವತಿ ಜತೆ ಕಾಮದಾಟವಾಡಲು ಗಣೇಶ್​ ಹುನ್ನಾರ ನಡೆಸಿರುತ್ತಾನೆನ್ನಲಾಗಿದೆ.

ಈ ಹಂತದಲ್ಲಿ ಯುವತಿಯ ಗುಪ್ತಾಂಗದಲ್ಲಿ ದೋಷವಿದೆ ಎಂದು ಹೇಳಿ ಅಸಲಿ ಆಟ ಶುರುವಿಟ್ಟುಕೊಳ್ಳುತ್ತಾನೆ. ನನ್ನಿಂದ 5 ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು. 5 ಬಾರಿ ಸಂಭೋಗ ಮಾಡಬೇಕು. ಅಷ್ಟೇ ಅಲ್ಲ ನನ್ನ ಪುತ್ರನ ಜತೆಯೂ ದೇಹ ಹಂಚಿಕೊಳ್ಳಬೇಕು ಎಂದು ಪುಸಲಾಯಿಸುತ್ತಾನೆ. ಅಲ್ಲದೆ, ಈ ಸಂಗತಿಯನ್ನು ಯಾವುದೇ ಕಾರಣಕ್ಕೂ ತನ್ನ ಪಾಲಕರಿಗೆ ತಿಳಿಸದಂತೆ ಯುವತಿಗೆ ತಾಕೀತೂ ಮಾಡಿರುತ್ತಾನೆ.ಇದನ್ನೂ ಓದಿ : ಅತೃಪ್ತರ ಭವಿಷ್ಯ ಮತ್ತಷ್ಟು ಕಗ್ಗಂಟು; ಸುಪ್ರೀಂ ಕೋರ್ಟ್​​​ನಲ್ಲಿ ಭಾರೀ ಹಿನ್ನಡೆ

ಈತನ ವರ್ತನೆಯಿಂದ ಹೆದರಿದ ಯುವತಿ, ಕುಕ್ಕೆ ಸುಬ್ರಹ್ಮಣ್ಯದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ವಾಪಸ್ ಬರುತ್ತಾರೆ. ಇಲ್ಲಿ, ಬಾಣಸವಾಡಿ ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಅದರಂತೆ ಗಣೇಶ್​ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಣಿಕಂಠನನ್ನು ಬಂಧಿಸಿದ್ದಾರೆ. ಗಣೇಶ್​ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಸೆರೆ ಹಿಡಿಯಲು ವ್ಯಾಪಕ ಬಲೆಯನ್ನು ಪೊಲೀಸರು ಬಿಸಿದ್ದಾರೆ.

(ವರದಿ : ಮಂಜುನಾಥ್ ಆರ್ಯ)

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ