• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Market Price Of Banana: ಶ್ರಾವಣ ಬರುತ್ತಿದಂತೆ ಗಗನಕ್ಕೇರಿದ ಬಾಳೆಹಣ್ಣಿನ ಬೆಲೆ! ಮೊಟ್ಟೆಯ ದರ ಎಷ್ಟಾಗಿದೆ?

Market Price Of Banana: ಶ್ರಾವಣ ಬರುತ್ತಿದಂತೆ ಗಗನಕ್ಕೇರಿದ ಬಾಳೆಹಣ್ಣಿನ ಬೆಲೆ! ಮೊಟ್ಟೆಯ ದರ ಎಷ್ಟಾಗಿದೆ?

ಬಾಳೆಹಣ್ಣು

ಬಾಳೆಹಣ್ಣು

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ದರ ಹೆಚ್ಚಳವಾಗಿದೆ. ಮತ್ತು ಮೊಟ್ಟೆಯ ದರದಲ್ಲಿ ಇಳಿಕೆಯಾಗಿದೆ ಅಲ್ಲದೆ ತರಕಾರಿಯ ಬೆಲೆಗಳು ಕುಸಿದಿದೆ. ಎಷ್ಟು ಎಂದು ಇಲ್ಲಿದೆ ನೋಡಿ.

  • Share this:

ಶ್ರಾವಣ ಮಾಸ (Sawan Masam) ಎಂದರೆ ಅದು ಹಬ್ಬಗಳ (Festival) ಸಡಗರದಿಂದ ತುಂಬಿರುತ್ತದೆ. ಈ ಮಾಸದಲ್ಲಿ  ಸಾಮಾನ್ಯವಾಗಿ ಪೂಜಾ ವಿಧಿ ವಿಧಾನಗಳು (Rituals) ಹೆಚ್ಚಾಗಿ ಇರುತ್ತದೆ. ಅಲ್ಲದೆ ಉಪವಾಸ (Fasting) ವ್ರತಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ನಡೆಸುತ್ತಾರೆ. ವ್ರತಧಾರಿಗಳು ಸಾಮಾನ್ಯವಾಗಿ ಲಘು ಉಪಹಾರವಾಗಿ ಬಾಳೆಹಣ್ಣನ್ನು (Banana) ಸೇವಿಸುತ್ತಾರೆ. ಅಲ್ಲದೆ ದೇವರ ಪೂಜಾ ಕ್ರಮಗಳಿಗೂ ಬಾಳೆ ಹಣ್ಣನ್ನು ಪ್ರಮುಖವಾಗಿ ಬಳಸುತ್ತಾರೆ. ಆದರೆ ಇದೀಗ ಕರ್ನಾಟದಲ್ಲಿ (Karnataka) ಬಾಳೆ ಹಣ್ಣಿನ ಮಾರುಕಟ್ಟೆ ದರದಲ್ಲಿ (Market Price) ಹೆಚ್ಚಳವಾಗಿದೆ.  ಮತ್ತು ಇದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಇದರ ಜೊತೆಗೆ ಮಳೆಯ ಹೆಚ್ಚಳದ ಪರಿಣಾಮವಾಗಿ ಮೊಟ್ಟೆಯ ಉತ್ಪಾದೆನ ಅಧಿಕವಾಗಿದ್ದು ಮೊಟ್ಟೆಯ ದರ (Egg Price) ಇಳಿಕೆಯಾಗಿದೆ.


ಎರಡು ವರ್ಷದಿಂದ ಬಾಳೆ ಬೆಳೆಯಲ್ಲಿ ಕುಸಿತ
ಕಳೆದ ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಬೆಳೆದ ಬೆಲೆಗೆ ಸರಿಯಾಗಿ ಬೆಲೆ ದೊರೆಯದ ಕಾರಣದಿಂದಾಗಿ ರೈತರು ಬೆಸೆತ್ತು ಹೋಗಿದ್ದರು. ಅಲ್ಲದೆ ವಿಪರೀತವಾದ ಮಳೆಯಿಂದಾಗಿ ಬೆಳೆದ ಬೆಳೆಗಳು ಅಪಾರವಾಗಿ ನಷ್ಟಕ್ಕೀಡಾಗಿದ್ದಲ್ಲದೆ ರೋಗಗಳಿಂದ ನಾಶವಾಗಿತ್ತು.


ಇದನ್ನೂ ಓದಿ: Gold and Silver: ಭಾನುವಾರವೂ ಆಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇಂದು ಚಿನ್ನದ ಬೆಲೆಯಲ್ಲಿ ಏರಿಕೆ


ಇದರಿಂದಾಗಿ ರೈತರ ಬೆಳೆದ ಬೆಳೆಗೆ ಬೆಲೆಯ ಪ್ರಮಾಣವು ಕುಸಿದಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಾಳೆ ಬೆಳೆಗಾರರು ಬಾಳೆ ಬೆಳೆಯ ಪ್ರಮಾಣವನ್ನು ಕಡಿಮೆಗೊಳಿಸಿದ್ದರು.


ಶ್ರಾವಣ ಮಾಸದಲ್ಲಿ ಹೆಚ್ಚಿದ ಬಾಳೆ ಹಣ್ಣಿನ ಬೆಲೆ
ಶ್ರಾವಣ ಮಾಸ ಬರುತ್ತಿದ್ದಂತೆ ಬಾಳೆಯ ಬೆಲೆಯಲ್ಲಿ ಹೆಚ್ಚಳವಾಗಲು ಆರಂಭವಾಗಿದೆ. ಕಳೆದ ತಿಂಗಳು ಏಲಕ್ಕಿ ಬಾಳೆಹಣ್ಣಿನ ಒಂದು ಕೆ.ಜಿ ಗೆ 50 ರೂ. ನಿಂದ 55 ರೂ. ಇತ್ತು. ಇದೀಗ ಶ್ರಾವಣ ಮಾಸ ಆರಂಭವಾಯಿತು ಎಂದಾಗ 100 ರೂ.ಗಳ ಗಡಿ ಸಮೀಪಿಸಿದೆ. ಪಚ್ಚ ಬಾಳೆ ಬೆಲೆಯ ದರವು ಸಹ 10 ರಿಂದ 15 ರೂ. ನಷ್ಟು ಜಾಸ್ತಿಯಾಗಿದೆ.


ಅಲ್ಲದೆ ಚಿಲ್ಲರೆ ವ್ಯಾಪಾರಿಗಳು ಬಾಳೆ ಹಣ್ಣನ್ನು ಕೆ.ಜಿಗೆ 100 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಶ್ರಾವಂ ಮಾಸದಲ್ಲಿ ಹಬ್ಬಗಳು ಅಧಿಕವಾಗಿದ್ದು ಜನ ಬಾಳೆ ಹಣ್ಣಿನ ಹೆಚ್ಚಳದಿಂದ ಕಂಗಾಲಾಗಿದ್ದಾರೆ.


ಬಾಳೆ ಗೊನೆಯ ಇಳುವರಿಯಲ್ಲಿ ಕುಸಿತ
ವಿಪರೀತ ಮಳೆ ಮತ್ತು ವೈಪರೀತ್ಯವಾದ ಹವಾಮಾನದಿಂದಾಗಿ ಬೆಳೆಗಳಿಗೆ ರೋಗಗಳು ತಗುಲಿದ್ದ ಅವುಗಳ ಇಳುವರಿಯಲ್ಲಿ ಕುಸಿದಿದೆ. 20 ಕೆ.ಜಿ ಗಿಂತ ಅಧಿಕ ಇಳುವರಿ ನೀಡುತ್ತಿದ್ದ ಗೊನೆಗಳು ಈಗ 10 ಕೆಜಿಗಿಂತಲೂ ಕಡಿಮೆ ಇಳುವರಿ ನೀಡುತ್ತಿದೆ.


ಮೊಟ್ಟೆಯ ಬೆಲೆಯಲ್ಲಿ ಇಳಿಕೆ
ಶ್ರಾವಣ ಮಾಸ ಬಾಳೆ ಹಣ್ಣಿನ ಬೆಲೆ ಏರಿಕೆಯಿಂದಾಗಿ ಗ್ರಾಹಕರನ್ನು ಚಿಂತೆಗೊಳಪಡಿಸಿದರೆ ಮೊಟ್ಟೆ ಪ್ರಿಯರಿಗೆ ಖುಷಿ ನೀಡಿದೆ. 7 ರೂಪಾಯಿವರೆಗೆ ಇದ್ದ ಮೊಟ್ಟೆಯ ಬೆಲೆ 6 ರೂಪಾಯಿಗೆ ಇಳಿದಿದೆ. ಮಳೆ ಮತ್ತು ಮೋಡದ ವಾತಾವರಣದ ಕಾರಣದಿದಿಂದಾಗಿ ಈ ಬಾರಿ ಮೊಟ್ಟೆಯ ಉತ್ಪಾದನೆ ಅಧಿಕವಾಗಿದೆ. ಸಗಟು ದರದಲ್ಲಿ ಮೊಟ್ಟೆಗೆ 5 ರೂಪಾಯಿದ್ದು, ಚಿಲ್ಲರೆ ವ್ಯಾಪಾರಿಗಳು ಅದನ್ನು ಐದೂವರೆ ರೂಪಅಯಿಂದ  6 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ. ಅಲ್ಲದೆ ಮೊಟ್ಟೆಯ ಉತ್ಪಾದನೆಯ ಪ್ರಮಾಣದ ಹೆಚ್ಚಳದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಮಾರಾಟಗಾರು ಕೊಂಡುಕೊಳ್ಳುವ ಪ್ರಮಾಣ ಕಡಿಮೆಯಾಗಿದೆ.


ಇದನ್ನೂ ಓದಿ: Petrol-Diesel Price Today: 13 ಜಿಲ್ಲೆಗಳಲ್ಲಿಂದು ಪೆಟ್ರೋಲ್ ಬೆಲೆ ಇಳಿಕೆ, ಉಳಿದೆಡೆ ಹೇಗಿದೆ?


 ತರಕಾರಿಗಳ ಬೆಲೆಯಲ್ಲಿ ಇಳಿಕೆ
ಮಾರುಕಟ್ಟೆಯಲ್ಲಿ ಆಕಾಶದೆತ್ತರಕ್ಕೆ ಏರಿದ್ದ ಮಾರುಕಟ್ಟೆಯ ಬೆಲೆಗಳು ಆಷಾಡ ಮಾಸದಲ್ಲಿ ಇಳಿಕೆಯಾಗಿದೆ. ಸೊಪ್ಪು ತರಕಾರಿಗಳ ಮಾರುಕಟ್ಟೆ ದರ ಗಣನೀಯವಾಗಿ ಇಳಿದಿದೆ. 100 ರೂಪಾಯಿಯಷ್ಟು ಇದ್ದ ಟೋಮ್ಯಾಟೋ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಕೆ.ಜಿ ಗೆ 15-20 ರೂಪಾಯಿಷ್ಟು ಆಗಿದೆ. ಈರುಳ್ಳಿ ದರವು 33-35 ರೂಪಯಿಷ್ಟು ಇದೆ. ಬೀನ್ (40ರೂ.), ಬೀಟ್ರೂಟ್ (46ರೂ.) , ಮೂಲಂಗಿ (29 ರೂ.), ನುಗ್ಗೆಕಾಯಿ (44 ರೂ) ಹೀಗೆ ಹೆಚ್ಚಿನ ತರಕಾರಿಗಳ ಮಾರುಕಟ್ಟೆ ದರ ಇಳಿದಿದೆ.

Published by:Nalini Suvarna
First published: