Koila Cattle Farm: ಕೊಯಿಲಾ ಜಾನುವಾರು ಕೇಂದ್ರದಲ್ಲಿ ಕಿಡಿಗೇಡಿಗಳ‌ ಉಪಟಲಕ್ಕೆ ಬ್ರೇಕ್​​: ಫಾರ್ಮ್​​ಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ

704 ಎಕರೆ ಪ್ರದೇಶದಲ್ಲಿ ಇರುವ ಈ ಜಾನುವಾರು ಸಂವರ್ಧನಾ ಕೇಂದ್ರವನ್ನು ಕೆಲವು ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳ ಕೇಂದ್ರವನ್ನಾಗಿಯೂ ಮಾಡಿದ್ದು, ಇಲ್ಲಿ ಪೋಲೀಸ್ ಔಟ್ ಪೋಸ್ಟ್ ಸ್ಥಾಪಿಸುವಂತೆಯೂ ಕೇಂದ್ರದ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಕೋರಿದ್ದಾರೆ.

news18-kannada
Updated:September 5, 2020, 3:05 PM IST
Koila Cattle Farm: ಕೊಯಿಲಾ ಜಾನುವಾರು ಕೇಂದ್ರದಲ್ಲಿ ಕಿಡಿಗೇಡಿಗಳ‌ ಉಪಟಲಕ್ಕೆ ಬ್ರೇಕ್​​: ಫಾರ್ಮ್​​ಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
ಕೊಯಿಲಾ ಜಾನುವಾರು ಕೇಂದ್ರ
  • Share this:
ದಕ್ಷಿಣ ಕನ್ನಡ(ಸೆ.05): ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರಿಗೆ ಇದೀಗ ಬ್ರೇಕ್ ಬಿದ್ದಿದೆ. ಪ್ರಕೃತಿಯನ್ನು ನೋಡಲು ಬರುವ ಪ್ರವಾಸಿಗರ ಅತಿಯಾದ ಚೇಷ್ಟೆಗಳಿಂದ ಬೇಸತ್ತ ಜಾನುವಾರು ಸಂವರ್ಧನಾ ಕೇಂದ್ರದ ಅಧಿಕಾರಿಗಳು ಇದೀಗ ಈ ಫಾರ್ಮ್ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ್ದಾರೆ. ಜಾನುವಾರುಗಳು ಮೇಯುವ ಈ ಫಾರ್ಮ್ ಮಳೆಗಾಲದ ಸಂದರ್ಭದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಕೃತಿ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಆದರೆ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಬದಲು ಮೋಜು-ಮಸ್ತಿಯಲ್ಲಿ ತೊಡಗಿರುವುದರಿಂದ ಜಾನುವಾರುಗಳ ಜೀವಕ್ಕೂ ಸಂಕಷ್ಟ ಎದುರಾಗುತ್ತಿತ್ತು.

ಪ್ರವಾಸಿಗರು ತಂದು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ತಿಂದು ಜಾನುವಾರುಗಳು ಸಾವನ್ನಪ್ಪುವ ಘಟನೆಯೂ ನಡೆಯುತ್ತಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡ ಪ್ರವಾಸಿಗರ ಚೇಷ್ಟೆಯ ಕುರಿತು ವರದಿ ಮಾಡಿತ್ತು. ಈ ನಡುವೆ ಇದೀಗ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಅಧಿಕಾರಿಗಳು ಫಾರ್ಮ್ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ಧಾರೆ.

ಈ ಸಂಬಂಧ ಫಾರ್ಮ್ ನ ಸುತ್ತ 10 ಕಡೆಗಳಲ್ಲಿ ಬೋರ್ಡ್ ಅಳವಡಿಸಲಾಗಿದ್ದು, ಅಕ್ರಮವಾಗಿ ಫಾರ್ಮ್ ಒಳಗೆ ಪ್ರವೇಶಿಸುವುದು, ಫೋಟೋ ತೆಗೆಯುವುದು ಮಾಡಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಫಾರ್ಮ್ ರಸ್ತೆಯ ಪ್ರವೇಶ ದ್ವಾರದಲ್ಲಿ ಸಿ.ಸಿ. ಕ್ಯಾಮರಾವನ್ನೂ ಅಳವಡಿಸಲಾಗಿದ್ದು, ರಸ್ತೆಯ ಮೂಲಕ ಸಂಚರಿಸುವ ಪ್ರತಿಯೊಬ್ಬರ ದಾಖಲೆಗಳನ್ನೂ ಪರಿಶೀಲನೆ ನಡೆಸಲು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಡ್ರಗ್ಸ್ ದಂಧೆ; ರಾಗಿಣಿ ಸೇರಿ 12 ಮಂದಿ ಮೇಲೆ ದಾಖಲಾದ ಎಫ್ಐಆರ್​ನಲ್ಲಿ ಇಲ್ಲ ರವಿಶಂಕರ್ ಹೆಸರು

704 ಎಕರೆ ಪ್ರದೇಶದಲ್ಲಿ ಇರುವ ಈ ಜಾನುವಾರು ಸಂವರ್ಧನಾ ಕೇಂದ್ರವನ್ನು ಕೆಲವು ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳ ಕೇಂದ್ರವನ್ನಾಗಿಯೂ ಮಾಡಿದ್ದು, ಇಲ್ಲಿ ಪೋಲೀಸ್ ಔಟ್ ಪೋಸ್ಟ್ ಸ್ಥಾಪಿಸುವಂತೆಯೂ ಕೇಂದ್ರದ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಕೋರಿದ್ದಾರೆ.
Published by: Ganesh Nachikethu
First published: September 5, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading