Congress Manifesto: ತಾಕತ್ ಇದ್ರೆ ಭಜರಂಗದಳ ಬ್ಯಾನ್ ಮಾಡಿ; ಶೋಭಾ ಕರಂದ್ಲಾಜೆ ಸವಾಲ್

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

Shobha Karandlaje: ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ. ಹಿಂದೂಗಳು, ರಾಮಮಂದಿರ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಗೆ ಪದೇ ಪದೇ ಅವಮಾನ ಮಾಡ್ತಿದೆ.

  • Share this:

ಬೆಂಗಳೂರು: ಇಂದು ಬೆಳಗ್ಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ (Congress Election Manifesto) ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಭಜರಂಗದಳ (Bhajarangadala) ನಿಷೇಧದ ಬಗ್ಗೆ ಪ್ರಸ್ತಾಪವಿದೆ. ಈ ಪ್ರಸ್ತಾಪಕ್ಕೆ ಬಿಜೆಪಿ (BJP) ಆಕ್ರೋಶ ಹೊರ ಹಾಕಿದೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlage), ಪಾಪದ ಕಾಲದಲ್ಲಿ ಕಾಂಗ್ರೆಸ್ ಗೆ ವಿನಾಶ ಬಂದಿದೆ. ಕಾಂಗ್ರೆಸ್ ಕಾಲದಲ್ಲಿ ಹಿಂದೂ ಯುವಕರ ಹತ್ಯೆ, ಬಾಂಬ್ ಬ್ಲಾಸ್ಟ್ ಆಯ್ತು. ಆದರೂ ಕಾಂಗ್ರೆಸ್ ಯಾವತ್ತು PFI ಬ್ಯಾನ್ ಮಾಡಲು ಮುಂದಾಗಲಿಲ್ಲ. ಅಂದಿನ ಗೃಹ ಮಂತ್ರಿ ರಾಮಲಿಂಗಾರೆಡ್ಡಿ (Ramalingareddy) PFI ಮೇಲೆ ಕೇಸ್ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಗೆ PFI ಬ್ಯಾನ್ ಮಾಡುವ ಉದ್ದೇಶ ಇಲ್ಲ. ಆದ್ರೆ ಭಜರಂಗದಳ ಬ್ಯಾನ್ ಮಾಡುವ ಉದ್ದೇಶ ಇದೆ ಎಂದು ಕಿಡಿಕಾರಿದರು.


ನೀವು RSS ಮೂರು ಬಾರಿ ಬ್ಯಾನ್ ಮಾಡದ್ರಿ, ಆದರೆ ಏನಾಯ್ತು? ನಮ್ಮ ಆರ್​​ಎಸ್​​ಎಸ್ ರಾಷ್ಟ್ರಪತಿ ಹುದ್ದೆಯಲ್ಲಿ ಇರುವಂತವರನ್ನು ತಯಾರು ಮಾಡಿದೆ. ನೀವು PFI ನ್ನು ಭಜರಂಗದಳದ ಜೊತೆ ಹೋಲಿಕೆ ಮಾಡ್ತಿರಾ. ಭಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ. ಆಗ ನಾವು ತೋರಿಸ್ತೇವೆ ಎಂದು ಕಾಂಗ್ರೆಸ್​ಗೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.


ಸಿದ್ದರಾಮಯ್ಯ ಮುಸಲ್ಮಾನರ ಮುಖವಾಡ


ಭಜರಂಗದಳದ ನಿಷೇಧವನ್ನು‌ ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.




ಇದನ್ನೂ ಓದಿ:  Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!


ಇದು ಮುಸಲ್ಮಾನರ ಓಲೈಕೆಯ ಪ್ರಣಾಳಿಕೆ

top videos


    ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ. ಹಿಂದೂಗಳು, ರಾಮಮಂದಿರ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಗೆ ಪದೇ ಪದೇ ಅವಮಾನ ಮಾಡ್ತಿದೆ. ನಿಮಗೆ ತಾಕತ್ ಇದ್ರೆ ಮುಸಲ್ಮಾನರ ಮತಗಳಿಂದಷ್ಟೇ ಗೆದ್ದು ಬನ್ನಿ. ಇದು ಮುಸಲ್ಮಾನರ ಓಲೈಕೆಗೆ ಕೊಟ್ಟಿರುವ ಪ್ರಣಾಳಿಕೆ ಎಂದು ಆಕ್ರೋಶ ಹೊರಹಾಕಿದರು.

    First published: