News18 India World Cup 2019

ಕೋರಂ ಕೊರತೆ ಕಾರಣದಿಂದ ಬಮೂಲ್​ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆ ಮುಂದೂಡಿಕೆ

ಮುಂದಿನ ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ಸಚಿವ ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಚುನಾವಣೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ. ಸರ್ಕಾರ ಮುಂದಿನ ದಿನಾಂಕ ನಿಗದಿ ಮಾಡುತ್ತದೆ.

HR Ramesh | news18
Updated:May 22, 2019, 2:57 PM IST
ಕೋರಂ ಕೊರತೆ ಕಾರಣದಿಂದ ಬಮೂಲ್​ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆ ಮುಂದೂಡಿಕೆ
ಪ್ರಾತಿನಿಧಿಕ ಚಿತ್ರ
HR Ramesh | news18
Updated: May 22, 2019, 2:57 PM IST
ಬೆಂಗಳೂರು: ಕೋರಂ ಇಲ್ಲದ ಕಾರಣಕ್ಕೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆಯಾಗಿದೆ. ಚುನಾವಣಾಧಿಕಾರಿಯ ಈ ನಿರ್ಧಾರಕ್ಕೆ ನಿರ್ದೇಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಮೂಲ್ ಚುನಾವಣಾಧಿಕಾರಿ ಕೃಷ್ಣಮೂರ್ತಿ ನಿರ್ದೇಶಕರ ಸಭೆ ಕರೆಯಬೇಕಿತ್ತು.  ನಾಮಪತ್ರ ಸಲ್ಲಿಕೆಯಾಗಿದ್ರೂ ಸಭೆ ಕರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮುಂದಿನ ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ಸಚಿವ ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಚುನಾವಣೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ. ಸರ್ಕಾರ ಮುಂದಿನ ದಿನಾಂಕ ನಿಗದಿ ಮಾಡುತ್ತದೆ.

ಇದನ್ನು ಓದಿ: Lok Sabha Elections 2019 Result: ಲೋಕಸಭೆ ಫಲಿತಾಂಶಕ್ಕೆ 2 ರಿಂದ 3 ದಿನ ತಡವಾಗಬಹುದು; ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ

13 ಮಂದಿ ನಿರ್ದೇಶಕರಲ್ಲಿ ಆರು ಜನರು ಮಾತ್ರ ಹಾಜರಿದ್ದರು. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದುಕೊಂಡಿದ್ದೇವೋ ಅವರನ್ನೇ ರಾತ್ರೋರಾತ್ರಿ ಅನರ್ಹ ಮಾಡಲಾಗಿದೆ.  ಆಗಿದ್ದಾರೆ.  ಇದರಿಂದ ನೊಂದು ಕೆಲವು ನಿರ್ದೇಶಕರು ಗೈರಾಗಿದ್ದಾರೆ ಎಂದು ಹಾಲಿ ಬಮೂಲ್ ಅಧ್ಯಕ್ಷ ಆಂಜನಪ್ಪ ಹೇಳಿದರು.

Loading...

First published:May 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...