ಟಿ ಬಿ ಡ್ಯಾಂಗೆ ಕಳೆದೊಂದು ತಿಂಗಳು ಬಂದಿರುವ ನೀರೆಷ್ಟು?; ನದಿ ಮೂಲಕ ಹರಿದುಹೋದ ನೀರೆಷ್ಟು ಗೊತ್ತಾ?

news18
Updated:August 29, 2018, 6:01 PM IST
ಟಿ ಬಿ ಡ್ಯಾಂಗೆ ಕಳೆದೊಂದು ತಿಂಗಳು ಬಂದಿರುವ ನೀರೆಷ್ಟು?; ನದಿ ಮೂಲಕ ಹರಿದುಹೋದ ನೀರೆಷ್ಟು ಗೊತ್ತಾ?
news18
Updated: August 29, 2018, 6:01 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಆ.29) : ಮಲೆನಾಡು, ಪಶ್ಚಿಮಘಟ್ಟದಲ್ಲಿ ಭರ್ಜರಿ ಮಳೆಯಾದ ಪರಿಣಾಮ ತುಂಗಭದ್ರ ಜಲಾಶಯ ತುಂಬಿ ಹರಿಯುತ್ತಿದೆ. ಇಂಥ ಜಲಾಶಯಕ್ಕೆ ಕಳೆದೊಂದು ತಿಂಗಳಿನಲ್ಲಿ ಹತ್ತಲ್ಲ ಇಪ್ಪತ್ತಲ್ಲ ಬರೋಬ್ಬರಿ 300 ಟಿಎಂಸಿ ನೀರು ಹರಿದುಬಂದಿದೆ. ಇದರಲ್ಲಿ 30 ಟಿಎಂಸಿ ನೀರು ಕಾಲುವೆ ಮೂಲಕ ಕೃಷಿಗೆ ಬಳಕೆಯಾಗಿದೆ. ಉಳಿದ 176 ಟಿಎಂಸಿ ನೀರು ಎಲ್ಲಿಗೆ ಸೇರಿದೆ ಗೊತ್ತಾ? ಈ ವಿಷಯ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ! ಅದೇನ್ ಗೊತ್ತಾ? ಇಲ್ಲಿದೆ ಡೀಟೈಲ್. ಓದಿ..

ಹೈದ್ರಾಬಾದ್ ಕರ್ನಾಟಕ, ನೆರೆಯ ಆಂಧ್ರ ಹಾಗೂ ತೆಲಂಗಾಣದ ಕೆಲ ಭಾಗದ ಜೀವನಾಡಿ ತುಂಗಭದ್ರ ಜಲಾಶಯ ಮೈದುಂಬಿ ಹರಿಯುತ್ತಿದೆ. ಜಲಾಶಯ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾದ ಹಿನ್ನೆಲೆ ಡ್ಯಾಂನಿಂದ ಕಳೆದೊಂದು ತಿಂಗಳಿನಿಂದ ಭರ್ಜರಿಯಾಗಿ ನೀರು ನದಿ ಮೂಲಕ ಹರಿಬಿಡಲಾಗುತ್ತಿದೆ. ದಿನವೊಂದಕ್ಕೆ 50 ಕ್ಯೂಸೆಕ್ಸ್ ನಿಂದ ಎರಡುವರೆ ಲಕ್ಷದಷ್ಟು ಕ್ಯೂಸೆಕ್ಸ್ ನೀರು ರೀತಿ ಕಳೆದೊಂದು ತಿಂಗಳಿನಿಂದ ನೀರಿನ ಒಳಹರಿವಿನ ಲಭ್ಯತೆ ಮೇರೆಗೆ ಬಿಡುಗಡೆ ಮಾಡಲಾಗುತ್ತಿದೆ.

ಹೀಗೆ ಕಳೆದೊಂದು ತಿಂಗಳಿನಿಂದ ಜಲಾಶಯದ ನದಿ ಹಾಗೂ ಕೃಷಿಗೆ ಉಪಯೋಗವಾಗುವ ವಿವಿಧ ಕಾಲುವೆಗಳಿಗೆ ಬಿಡುಗಡೆ ಮಾಡಿದ್ದು ಬರೋಬ್ಬರಿ 200 ಟಿಎಂಸಿ ನೀರು. ಇದರಲ್ಲಿ 30 ಟಿಎಂಸಿ ನೀರು ಕಾಲುವೆಗಳಿಗೆ ಬಳಕೆಯಾಗಿದೆ. ಆದರೆ ಉಳಿದ 176 ಟಿಎಂಸಿ ನೀರು ಅನ್ಯಾಯವಾಗಿ ಕರ್ನಾಟಕ ರಾಜ್ಯ ಬಿಟ್ಟು ನೆರೆ ರಾಜ್ಯಕ್ಕೆ ಹರಿದುಹೋಗುತ್ತಿದೆ. ಹೋಗಲಿ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಭಾಗದಲ್ಲಿಯಾದ್ರೂ ಈ ತುಂಗಭದ್ರ ನದಿ ನೀರು ಬಳಕೆಯಾಗುತ್ತಿದೆಯೇ? ಅದು ಸಹವಿಲ್ಲ. ಈ ನೀರೆಲ್ಲ ಸಮುದ್ರ ಪಾಲಾಗುತ್ತಿದೆ ಎನ್ನುತ್ತಾರೆ ತುಂಗಭದ್ರ ರೈತ ಸಂಘಟನೆಯ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ.

ಈ ಬಾರಿ ತುಂಗಭದ್ರ ಜಲಾಶಯಕ್ಕೆ ಬರೋಬ್ಬರಿ 300 ಟಿಎಂಸಿ ನೀರು ಹರಿದುಬಂದಿದೆ. ಸದ್ಯ ಜಲಾಶಯದಲ್ಲಿ ನೂರು ಟಿಎಂಸಿ ನೀರು ಶೇಖರಣೆಯಾಗಿ ಭರ್ತಿಯಾಗಿದೆ. 176 ಟಿಎಂಸಿ ನೀರು ನದಿ ಮೂಲಕ ಹರಿಬಿಟ್ಟರೆ, ಕಾಲುವೆಗಳಿಗೆ 30 ಟಿಎಂಸಿ ನೀರು ಬಿಡಲಾಗಿದೆ. ಒಟ್ಟು ಮುನ್ನೂರು ಟಿಎಂಸಿ ನೀರು ಜಲಾಶಯಕ್ಕೆ ಹರಿದುಬಂದಿದ್ದು, ಇದರಲ್ಲಿ 33 ಟಿಎಂಸಿ ನೀರು ಸಂಗ್ರಹಿಸುವ ಜಾಗವನ್ನು ಜಲಾಶಯದ ಹೂಳು ಆವರಿಸಿಕೊಂಡಿದೆ. ಹಲವು ದಶಕಗಳ ಸಮಸ್ಯೆಯಾದ ಜಲಾಶಯ ಹೂಳಿನ ಪ್ರಮಣ ಪ್ರತಿ ವರ್ಷ ಹೆಚ್ಚಾಗುತ್ತಿದೆ.

ಡ್ಯಾಂನಲ್ಲಿ ಹೂಳೆತ್ತುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ತುಂಗಭದ್ರ ರೈತ ಸಂಘಟನೆ ಸೇರಿದಂತೆ ರೈತರು ಮಾಡಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳ ರೈತರಿಗೆ ನೀರುಣಿಸುವ ತುಂಗಭದ್ರ ಜಲಾಶಯದಲ್ಲಿ ಒಂದು ಟಿಎಂಸಿ ನೀರು ಪ್ರಮುಖವಾದುದು. ಬೇಸಿಗೆ ಸಂದರ್ಭದಲ್ಲಿ ಡ್ಯಾಂನಲ್ಲಿ ಕುಡಿಯುವ ಹನಿ ಹನಿ ನೀರಿಗೂ ತತ್ವಾರ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ ಅನ್ಯಾಯವಾಗಿ 176 ಟಿಎಂಸಿ ನೀರು ಹರಿದು ಸಮುದ್ರ ಪಾಲಾಗಿದೆ

ಜಲಾಶಯದ ನೀರನ್ನೇ ನಂಬಿ ಎರಡುವರೆ ಲಕ್ಷಕ್ಕೂ ಹೆಚ್ಚು ರೈತರು ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಕಬ್ಬು, ಬಾಳೆ ಸೇರಿದಂತೆ ನೀರಾವರಿ ಬೆಳೆ ಬೆಳೆದಿದ್ದಾರೆ. ಮಳೆಗಾಲದಲ್ಲಿ ಜಲಾಶಯಕ್ಕೆ ಅನಾಯಾಸವಾಗಿ ಹರಿದುಬರುವ ನೀರನ್ನು ಸಂಗ್ರಹಿಸಿ, ಅದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಪರ್ಯಾಸದ ಸಂಗತಿಯೆಂದರೆ ಬಳ್ಳಾರಿ ಜಿಲ್ಲೆಯ ಬಹುತೇಕ ಕೆರೆಗಳು ಮಳೆಯಿಲ್ಲದೆ ತುಂಬಿಲ್ಲ.
Loading...

ಜಲಾಶಯದ ಹೂಳು ತೆಗೆದು ಸಮಾನಾಂತರ ಜಲಾಶಯ ನಿರ್ಮಿಸಿದ್ದರೆ ಕಣ್ಣೆದುರಿಗೆ ಹರಿದುಹೋದ 176 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿರುವುದನ್ನು ತಪ್ಪಿಸಬಹುದಿತ್ತು ಎನ್ನುವುದು ರೈತರ ಒತ್ತಾಸೆಯಾಗಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ