• Home
  • »
  • News
  • »
  • state
  • »
  • ಬಳ್ಳಾರಿ ಜಿಲ್ಲೆ ಜನತೆಗೆ ಕರೆಂಟ್ ಬಿಲ್ ಶಾಕ್; ಅಷ್ಟಕ್ಕೂ ಮನೆಗೆ ಕರೆಂಟ್ ಬಿಲ್ ಬಂದಿದ್ದು ಎಷ್ಟು ಗೊತ್ತಾ?

ಬಳ್ಳಾರಿ ಜಿಲ್ಲೆ ಜನತೆಗೆ ಕರೆಂಟ್ ಬಿಲ್ ಶಾಕ್; ಅಷ್ಟಕ್ಕೂ ಮನೆಗೆ ಕರೆಂಟ್ ಬಿಲ್ ಬಂದಿದ್ದು ಎಷ್ಟು ಗೊತ್ತಾ?

ಕರೆಂಟ್​ ಬಿಲ್​.

ಕರೆಂಟ್​ ಬಿಲ್​.

ನಿಜ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ನಿವಾಸಿಗಳಿಗೆ ನಿಜವಾಗಿಯೂ ಗುಲಬರ್ಗಾ ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಅಕ್ಷರಶಃ ಕರೆಂಟ್ ಶಾಕ್ ನೀಡಿದೆ. ಕಳೆದ ತಿಂಗಳ ಬಿಲ್ ಕೊಡುವ ಮೂಲಕ ದುಡ್ಡಿನ ಶಾಕ್ ನೀಡಿದೆ.

  • Share this:

ಬಳ್ಳಾರಿ; -ಮನೆಯೊಂದಕ್ಕೆ ಕರೆಂಟ್ ಬಿಲ್ ಎಷ್ಟು ಬರುತ್ತೆ ಹೇಳಿ? ಐನೂರು ಇಲ್ಲವೇ ಸಾವಿರ ರೂಪಾಯಿ ಅಬ್ಬಬ್ಬ ಅಂದರೆ ಮನೆಗೆ ಹೆಚ್ಚು ಬಳಕೆ ಮಾಡಿದರೆ ಎರಡು ಸಾವಿರ ಬರಬಹುದು. ಆದರೆ ಈ ಮನೆಗೆ ಬರೋಬ್ಬರಿ ಐದುವರೆ ಲಕ್ಷ ಕರೆಂಟ್ ಬಿಲ್ ಬಂದಿದೆ. ಹಾಗಂತ ಇದೊಂದೇ ಮನೆಗೆ ಹೀಗೆ ಜೆಸ್ಕಾಂ ಕರೆಂಟ್ ಬಿಲ್ ಶಾಕ್ ಕೊಟ್ಟಿಲ್ಲ. ಬದಲಾಗಿ ಬಳ್ಳಾರಿಯ ಸಿರುಗುಪ್ಪ ಪಟ್ಟಣದ ನೂರಕ್ಕೂ ಹೆಚ್ಚು ಮನೆಗಳಿಗೆ ಕರೆಂಟ್ ಬಿಲ್ ನೋಡಿದ ಜನತೆ ಗಾಬರಿಗೊಂಡಿದ್ದಾರೆ. ಜೆಸ್ಕಾಂ ಕರೆಂಟ್ ಬಿಲ್ ಶಾಕ್ ಕುರಿತು ಗ್ರಾಹಕರಿಗೆ ಶಾಕಿಂಗ್ ನೀಡಿದ ಸ್ಟೋರಿ ಇಲ್ಲಿದೆ ನೋಡಿ.


ಏನ್ರೀ ಇದು, ಇಷ್ಟೊಂದು ಕರೆಂಟ್ ಬಿಲ್ಲಾ? ನೂರು ರೂಪಾಯಿನೋ, ಇನ್ನೂರು, ಹೋಗಲಿ ಐನೂರು ರೂಪಾಯಿ, ಇಲ್ಲವೇ ಸಾವಿರ ರೂಪಾಯಿ ಬಿಲ್ ಬರಲಿ! ಬೇಡವೇ ಬೇಡ ಮನೇಲಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಕ್ಕೆ ಎರಡು ಸಾವಿರ ಕರೆಂಟ್ ಬರಲಿ. ಅದು ಬಿಟ್ಟು ಇದೇನ್ರಿ? ಒಂದು ತಿಂಗಳಿಗೆ ಐದುವರೆ ಲಕ್ಷ ರೂಪಾಯಿ ಕರೆಂಟ್ ಬಿಲ್?.


ನಿಜ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ನಿವಾಸಿಗಳಿಗೆ ನಿಜವಾಗಿಯೂ ಗುಲಬರ್ಗಾ ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಅಕ್ಷರಶಃ ಕರೆಂಟ್ ಶಾಕ್ ನೀಡಿದೆ. ಕಳೆದ ತಿಂಗಳ ಬಿಲ್ ಕೊಡುವ ಮೂಲಕ ದುಡ್ಡಿನ ಶಾಕ್ ನೀಡಿದೆ. ಸಿರುಗುಪ್ಪ ಪಟ್ಟಣದ ಕೆಇಬಿ ಕಚೇರಿಯ ಹಿಂಭಾಗದ ಪ್ರದೇಶದಲ್ಲಿ ಕಳೆದ ತಿಂಗಳು ಬಿಲ್ ಕೊಡಲು ಬಂದ ಜೆಸ್ಕಾಂ ಆಪರೇಟರ್ ಬಿಲ್ ತೆಗೆಯಲು ಬಂದವರೇ ಅಲ್ಲಿ ಬಂದ ಕರೆಂಟ್ ಬಿಲ್ ನೋಡಿ ಅವಕ್ಕಾಗಿದ್ದಾರೆ.


ಆದರೆ, ಮನೆ ರೀಡಿಂಗ್ ನೋಡಿ ಬಿಲ್ ತೆಗೆದ ಮೇಲೆ ಅನಿವಾರ್ಯವಾಗಿ ಮನೆಯವರಿಗೆ ಕರೆಂಟ್ ಬಿಲ್ ರಶೀದಿ ಕೊಟ್ಟು ಹೋಗಿದ್ದಾರೆ. ಆ ಕರೆಂಟ್ ಬಿಲ್ ನೋಡಿದ ಗ್ರಾಹಕ ಸತ್ಯನಾರಾಯಣ ಎನ್ನುವವರು ಕಂಗಾಲಾಗಿದ್ದಾರೆ. ಯಾಕೆಂದರೆ ಅಲ್ಲಿ ಕರೆಂಟ್ ಬಿಲ್ ಬಂದಿದ್ದು ಬರೋಬ್ಬರಿ 5.78 ಲಕ್ಷ. ಮೂರು ಫ್ಯಾನ್, ನಾಲ್ಕು ಲೈಟ್ ಇರುವ ಮನೆಗೆ ತಿಂಗಳೊಂದು ಕರೆಂಟ್ ಬಳಕೆಗೆ ಇಷ್ಟು ಬಿಲ್ ನೋಡಿ ಶಾಕ್ ಆಗಿದ್ದಾರೆ.


ಬಳ್ಳಾರಿ ಜಿಲ್ಲೆ ಸಿರುಗುಪ್ಪ ಪಟ್ಟಣದಲ್ಲಿ ಈ ಹಿಂದೆ ಇಂಥ ಎರ್ರಾಬಿರ್ರಿ ಕರೆಂಟ್ ಬಿಲ್ ಬಂದಿದ್ದಿಲ್ಲ. ಸಾಮಾನ್ಯವಾಗಿ ಮನೆಗಳಿಗೆ ಇನ್ನೂರು ರೂಪಾಯಿಯಿಂದ ಒಂದುವರೆ, ಎರಡು ಸಾವಿರ ಬಿಲ್ ಬಳಕೆ ಮಾಡಿದಂತೆ ಬರುತ್ತಿತ್ತು. ಆದರೆ ಕಳೆದ ತಿಂಗಳು ಕೆಇಬಿ ಕಚೇರಿ ಹಿಂಭಾಗದಲ್ಲಿರುವ ಪ್ರದೇಶದ ಮನೆಗಳಿಗೆ ಬಿಲ್ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಕರೆಂಟ್ ಬಿಲ್ ಹಿಡಿದು ಜೆಸ್ಕಾಂ ಕಚೇರಿಗೆ ಹೋಗಿ ‘ಏನ್ ಸರ್ ಇಷ್ಟು ಕರೆಂಟ್ ಬಿಲ್ ಬಂದಿದೆಯಲ್ಲಾ’ ಎಂದು ಕೇಳಿದರೆ ಚೆಕ್ ಮಾಡಿ ಹೇಳ್ತೇವೆ ಎಂದು ಸಾಗಹಾಕಿದ್ದಾರೆ.


ಈ ಹಿಂದೆಯೂ ಬಳ್ಳಾರಿಯ  ತಾಲೂಕಿನ ರೂಪನಗುಡಿ ಗ್ರಾಮದ ಮನೆಗಳಿಗೆ ಲಕ್ಷಗಟ್ಟಲೆ ಕರೆಂಟ್ ಬಿಲ್ ಬಂದಿತ್ತು. ಆಗಾಗ ಜೆಸ್ಕಾಂ ಗ್ರಾಹಕರಿಗೆ ಕರೆಂಟ್ ನಲ್ಲಿ ಮಾತ್ರವಲ್ಲ ಡಬಲ್ ತ್ರಿಬಲ್ ಮಾತ್ರವಲ್ಲ ಲಕ್ಷಗಟ್ಟಲೆ ಬಿಲ್ ಕೊಡುವ ಮೂಲಕ ಶಾಕ್ ನೀಡುತ್ತಲೇ ಇದೆ. ಇತ್ತೀಚೆಗೆ ಹೊಸ ರೀಡಿಂಗ್ ಮೆಷಿನ್ ಬಂದಿದೆಯಲ್ಲಾ, ಅದಕ್ಕೆ ಹಳೆಯ ರೀಡಿಂಗ್ ತೆಗೆದುಕೊಂಡಿರಬೇಕು. ಇದರಿಂದ ಕರೆಂಟ್ ಬಿಲ್ ಜಾಸ್ತಿ ಬಂದಿದೆ. ಯಾರಿಗೆ ಹೆಚ್ಚು ಬಿಲ್ ಬಂದಿದೆಯೋ ಅವರು ಕಚೇರಿಗೆ ಬಂದು ಸರಿಪಡಿಸಿಕೊಳ್ಳಬೇಕು ಎಂದು ಸಿರುಗುಪ್ಪ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಘವೇಂದ್ರ ಪ್ರತಿಕ್ರಿಯೆ ನೀಡುತ್ತಾರೆ.


ಜೆಸ್ಕಾಂ ಸಮರ್ಪಕವಾಗಿ 24 ಗಂಟೆ ಕರೆಂಟ್ ನೀಡುವುದಿಲ್ಲ. ಆದರೆ ಕರೆಂಟ್ ಬಿಲ್ ಮಾತ್ರ ಹೀಗೆ ಲಕ್ಷಗಟ್ಟಲೆ ಹಾಕಿ ಗ್ರಾಹಕರಿಗೆ ಹೆದರಿಸಿದರೆ ಹೇಗೆ? ಹಾರ್ಟ್ ವೀಕ್ ಇದ್ದೋರು ಈ ಕರೆಂಟ್ ಬಿಲ್ ನೋಡಿ ಏನಾದ್ರೂ ಆದರೆ ಯಾರು ಗತಿ? ಜೆಸ್ಕಾಂ ಕರೆಂಟ್ ಬಿಲ್ ಕೊಡುವ ಮುನ್ನವಾದ್ರೂ ಇದನ್ನು ಒಮ್ಮೆ ಆಪರೇಟರ್ ಪರಿಶೀಲಿಸಬೇಕು. ಹೀಗೆ ಲಕ್ಷಗಟ್ಟಲೆ ಕರೆಂಟ್ ಬಿಲ್ ಕೊಟ್ಟುಹೋದರೆ ಹೇಗೆ ಎಂಬ ಗ್ರಾಹಕರ ಪ್ರಶ್ನೆಗೆ ಸಿರುಗುಪ್ಪ ಜೆಸ್ಕಾಂ ಇಲಾಖೆ ಸಿಬ್ಬಂದಿ ಅವರನ್ನ ಕಳೆದೊಂದು ತಿಂಗಳಿನಿಂದ ಸಮಾಧಾನ ಮಾಡುವುದೇ ಇವರಿಗೆ ದೊಡ್ಡ ಕೆಲಸವಾಗಿಬಿಟ್ಟಿದೆ.


ಇದನ್ನೂ ಓದಿ : ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿPublished by:MAshok Kumar
First published: