ರಮೇಶ್ ಜಾರಕಿಹೊಳಿ ಲಾಬಿಗೆ ಅಸಮಾಧಾನ: ಬೆಳಗಾವಿ ಬೆನ್ನಲ್ಲೇ, ಬಳ್ಳಾರಿಯಲ್ಲೂ ಭುಗಿಲೆದ್ದ ಭಿನ್ನಮತ!


Updated:September 19, 2018, 9:22 AM IST
ರಮೇಶ್ ಜಾರಕಿಹೊಳಿ ಲಾಬಿಗೆ ಅಸಮಾಧಾನ: ಬೆಳಗಾವಿ ಬೆನ್ನಲ್ಲೇ, ಬಳ್ಳಾರಿಯಲ್ಲೂ ಭುಗಿಲೆದ್ದ ಭಿನ್ನಮತ!
  • Share this:
ಶರಣು ಹಂಪಿ, ನ್ಯೂಸ್​ 18 ಕನ್ನಡ

ಬಳ್ಳಾರಿ(ಸೆ.19): ಇತ್ತ ಬೆಳಗಾವಿಯಲ್ಲಿ ಭಿನ್ನಮತ ಭುಗಿಲೆದ್ದ ಬೆನ್ನಲ್ಲೇ, ಬಳ್ಳಾರಿ ರಾಜಕೀಯದಲ್ಲೂ ಇಂತಹುದೇ ಬೆಳವಣೆಗೆ ಕಂಡು ಬರುತ್ತಿದೆ. ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಬಳ್ಳಾರಿ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದೇ ಇದಕ್ಕೆ ಕಾರಣವಾಗಿದೆ. ಬೆಳಗಾವಿ ಗಾಳಿ ಗಣಿನಾಡಿಗೂ ಬೀಸಲಾರಂಭಿಸಿದೆ.

ಹೌದು ಕಳೆದ ಕೆಲ ದಿನಗಳಿಂದ ಜಾರಕಿಹೊಳಿ ಸಹೋದರರ​ ನಡೆ ಕಾಂಗ್ರೆಸ್​ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಇದು ಮೈತ್ರಿ ಸರ್ಕಾರಕ್ಕೆ ಸಂಚಾಕಾರ ತಂದೊಡ್ಡುವ ಮಟ್ಟಕ್ಕೆ ಬೆಳೆದು ನಿಂತಿತ್ತು ಎಂದರೂ ತಪ್ಪಾಗುವುದಿಲ್ಲ. ಆದರೀಗ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡೋ ವಿಚಾರದಲ್ಲಿ ಬಳ್ಳಾರಿಯಲ್ಲೂ ಭಿನ್ನಮತದ ಹೊಗೆ ತೀವ್ರಗೊಳ್ಳುವಂತೆ ಭಾಸವಾಗಿದೆ.

ನಾಗೇಂದ್ರಗೆ ಸಚಿವ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ಲಾಬಿ ನಡೆಸಿದ್ದರು. ಇದು ಬಳ್ಳಾರಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸದಾಗಿ ಬಂದವರಿಗೆ ಸಚಿವ ಸ್ಥಾನ ಹೇಗೆ ಕೊಡ್ತೀರಿ? ಎಂದು ಪ್ರಶ್ನಿಸುವ ಮೂಲಕ ಕೈ ಪಕ್ಷದ ಬಳ್ಳಾರಿ ನಾಯಕರಾದ ಶಾಸಕರಾದ ತುಕಾರಾಂ, ಭೀಮಾನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ ಗರಂ ಅಗಿದ್ದಾರೆ.

ಇದನ್ನೂ ಓದಿ: ಜಾರಕಿಹೊಳಿ ಬ್ರದರ್ಸ್​​ ಬಂಡಾಯ, ಆಪರೇಷನ್​ ಕಮಲ; ರಾಹುಲ್​ ಗಾಂಧಿ ಸಭೆಯಲ್ಲಿ ಸಿಗಲಿದೆಯೇ ತಾರ್ಕಿಕ ಅಂತ್ಯ

ಇಷ್ಟೇ ಅಲ್ಲದೇ ಡಿಕೆಶಿಗೆ ಬೆಳಗಾವಿಗೆ ಸಂಬಂಧವಿಲ್ಲ ಎನ್ನುತ್ತಾರೆ. ಹಾಗಾದರೆ ರಮೇಶ್ ಜಾರಕಿಹೊಳಿ ಹಾಗೂ ಬಳ್ಳಾರಿಗೆ ಏನು ಸಂಬಂಧ..? ಎನ್ನುವ ಮೂಲಕ ಆಪ್ತರ ಮುಂದೆ ಈ ನಾಯಕರು ಅಸಮಾಧಾನ ತೋಡಿಕೊಂಡಿದ್ದಾರೆ ಹಾಗೂ ದೆಹಲಿಗೆ ಹೊರಡಲೂ ಪ್ಲ್ಯಅನ್​ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಸಮಾಧಾನಗೊಳಿಸಿರುವುದರ ಬೆನ್ನಲ್ಲೇ ಬಳ್ಳಾರಿ ನಾಯಕರು ಸಿಡಿದೆದ್ದಿರುವುದು ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಕ್ಕೆ ಮತ್ತೊಂದು ತಲೆ ನೋವಾಗಲಿದೆ.
First published: September 19, 2018, 9:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading