• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಧರ್ಮ ಒಡೆದ ಬಗ್ಗೆ ಸಿದ್ದರಾಮಯ್ಯ ಪಶ್ಚಾತಾಪ ? ರಂಭಾಪುರೀ ಶ್ರೀಗಳ ಹೇಳಿಕೆ, ರಾಜಕೀಯದಲ್ಲಿ ಸಂಚಲನ

Siddaramaiah: ಧರ್ಮ ಒಡೆದ ಬಗ್ಗೆ ಸಿದ್ದರಾಮಯ್ಯ ಪಶ್ಚಾತಾಪ ? ರಂಭಾಪುರೀ ಶ್ರೀಗಳ ಹೇಳಿಕೆ, ರಾಜಕೀಯದಲ್ಲಿ ಸಂಚಲನ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಇನ್ಯಾವತ್ತು ಧರ್ಮದ ವಿಷಯಕ್ಕೆ ಹೋಗುವುದಿಲ್ಲ ಎಂದು ಸಿದ್ಧರಾಮಯ್ಯ ಅವರು ಪಶ್ವಾತಾಪ ವ್ಯಕ್ತಪಡಿಸಿದರು ಎಂದು ರಂಭಾಪುರೀ ಶ್ರೀ ಪ್ರಸನ್ನರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು.

  • Share this:

ಚಿಕ್ಕಮಗಳೂರು: ಮಳೆಹಾನಿ ಪ್ರದೇಶ (Flood Area Visit) ಭೇಟಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaaih) ಅವರು ಶೃಂಗೇರಿ ಶಾರದಾಂಭೆ (Sringeri Temple) ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭೇಟಿ ಆಶೀರ್ವಾದ ಪಡೆದರು. ಅಲ್ಲಿಂದ ರಂಭಾಪುರೀ ಪೀಠಕ್ಕೆ ತೆರಳಿ ಶ್ರೀ ಪ್ರಸನ್ನರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರನ್ನು (Rambhapuri Swamiji) ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡರು. ಧರ್ಮ ಒಡೆಯುವುದು ನನ್ನ ಉದ್ದೇಶವಾಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಇನ್ಯಾವತ್ತು ಧರ್ಮದ ವಿಷಯಕ್ಕೆ ಹೋಗುವುದಿಲ್ಲ ಎಂದು ಸಿದ್ಧರಾಮಯ್ಯ ಅವರು ಪಶ್ವಾತಾಪ ವ್ಯಕ್ತಪಡಿಸಿದರು ಎಂದು ರಂಭಾಪುರೀ ಶ್ರೀ ಪ್ರಸನ್ನರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು. ರಾಜ್ಯ, ಜನರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆಂದು ಸ್ವಾಮೀಜಿ ಹೇಳಿದರು.


ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಭಯ ಬಿಜೆಪಿಯವರನ್ನು ಕಾಡುತ್ತಿದ್ದು, ಇದರಿಂದ ಹತಾಶರಾಗಿ ಸರ್ಕಾರದ ಪ್ರಯೋಜಕತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.


ಶುಕ್ರವಾರ ನರಸಿಂಹರಾಜಪುರ ತಾಲ್ಲೂಕು ಕಡವಂತಿಯಲ್ಲಿರುವ ಶಾಸಕ ಟಿ.ಡಿ.ರಾಜೇಗೌಡ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಧಿಕಾರ ಕಳೆದುಕೊಳ್ಳುವ ಭಯ ಬಿಜೆಪಿಯವರನ್ನು ಆವರಿಸಿದ್ದು, ಜನರ ಭಾವನೆಗಳನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.


ಹತಾಷರಾಗಿ ಬಿಜೆಪಿ ಪ್ರತಿಭಟನೆ


ಕೊಡಗಿನಲ್ಲಿ ಬಹಳ ವರ್ಷಗಳಿಂದ ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಗೆಲುವಿನ ವಾತವರಣ ಸೃಷ್ಟಿಯಾಗಿದೆ. ಇದರಿಂದ ಹತಾಷರಾಗಿ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಜನರನ್ನು ಸೇರಿಸಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ನಮಗೂ ಗೊತ್ತಿದೆ. ಕಪ್ಪು ಬಾವುಟ ಪ್ರದರ್ಶಿಸುವುದು ಹೇಡಿತನದ ಲಕ್ಷಣ ಎಂದು ಮಡಕೇರಿ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ನಾನು ಮಡಿಕೇರಿಗೆ ಭೇಟಿ ನೀಡಿದ್ದು ರೈತರ ಸಮಸ್ಯೆಗಳನ್ನು ಆಲಿಸಲು ಗೋಬ್ಯಾಕ್ ಎಂದರೇ ಎಲ್ಲಿಗೆ ಹೋಗಬೇಕು. ಈ ರಾಜ್ಯ ಅವರ ಸ್ವತ್ತಾ ಎಂದು ಪ್ರಶ್ನಿಸಿದ ಅವರು ನಮ್ಮ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೋಬ್ಯಾಕ್ ಎನ್ನುತ್ತಾರೆ ಮುಖ್ಯಮಂತ್ರಿಗಳು ಅದಕ್ಕೇನು ಉತ್ತರಿಸುತ್ತಾರೆ. ವಿರೋಧ ಪಕ್ಷದ ನಾಯಕರಿಗೆ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ ಎಂದರು.


ಇದನ್ನೂ ಓದಿ:  Veer Savarkar: ಸಾವರ್ಕರ್ ವಿವಾದಕ್ಕೆ ಬಿಗ್ ಟ್ವಿಸ್ಟ್; ಈ ಸುದ್ದಿಯಿಂದ ಕಾಂಗ್ರೆಸ್​ಗೆ ತೀವ್ರ ಮುಖಭಂಗ


ಸರ್ಕಾರ ಆಡಳಿತದಲ್ಲಿ ವಿಫಲ


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿ ಸರ್ಕಾರದ ವಿರುದ್ಧ ಅವರ ಕಾರ್ಯಕರ್ತರೇ ಪ್ರತಿಭಟನೆ ಮಾಡುತ್ತಾರೆ. ಸಚಿವ ಮಾಧುಸ್ವಾಮಿ ಈ ಸರ್ಕಾರ ನಡೆಯುತ್ತಿಲ್ಲ, ತಳ್ಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿಬೇಕ ಎಂದು ಪ್ರಶ್ನಿಸಿದರು.


40 ಪರ್ಸೆಂಟ್ ಸರ್ಕಾರ


ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲೂಟಿ ಹೊಡೆಯಲು ಬಂದಿದೆ. ರಾಜ್ಯದ ಇತಿಹಾಸದಲ್ಲಿ 40 ಪಾರ್ಸೆಂಟ್ ಸರ್ಕಾರ ಕಂಡಿರಲಿಲ್ಲ. ಈ ಸರ್ಕಾರ ಅತ್ಯಂತ ಭ್ರಷ್ಟ, ಕೆಟ್ಟ ಮತ್ತು ಕೋಮುವಾದಿ ಸರ್ಕಾರ ಎಂದ ಅವರು, ದಲಿತರು ಮತ್ತು ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಕರಾವಳಿಯಲ್ಲಿ ಸರಣಿ ಹತ್ಯೆ ನಡೆಯಿತು. ಮುಖ್ಯಮಂತ್ರಿಗಳು ಪ್ರವೀಣ್ ನೆಟ್ಯಾರ್ ಮನೆಗೆ ಭೇಟಿ ನೀಡಿ ಪರಿಹಾರ ಘೋಷಣೆ ಮಾಡಿದರು. ಇಬ್ಬರು ಮುಸ್ಲಿಂ ಯುವಕರ ಹತ್ಯೆ ನಡೆಯಿತು ಅವರ ಮನೆಗೆ ಏಕೆ ಮುಖ್ಯಮಂತ್ರಿಗಳು ಭೇಟಿ ನೀಡಲಿಲ್ಲ. ಪರಿಹಾರ ಘೋಷಣೆ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಪೂರ್ವ ನಿಯೋಜನೆ ಪ್ರತಿಭಟನೆ


ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಮಡಕೇರಿಯಲ್ಲಿ ನಾಲ್ಕು ಕಡೆಗಳಲ್ಲಿ ಪ್ರತಿಭಟನೆಗೆ ಪೂರ್ವ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶಿಸಿದರು. ಮೂರು ಕಡೆ ಪೊಲೀಸರು ತಡೆಯಬಹುದಿತ್ತು. ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲು ಇವರು ಬಿಡುತ್ತಾರೆಯೇ ಪ್ರತಿಭಟನಕಾರರನ್ನು ಬಂದಿಸಲು ಮಡಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಏನು ರೋಗ ಬಂದಿತ್ತು ಎಂದು ಪೊಲೀಸ್ ಇಲಾಖೆ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಮಡಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುರುದ್ದೇಶದಿಂದ ಆರ್​ಎಸ್‍ಎಸ್, ಬಜರಂಗದಳ, ಸಂಘ ಪರಿವಾರದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು ಆ.26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕುವುದಾಗಿ ತಿಳಿಸಿದರು.


ದಪ್ಪ ಚರ್ಮದ ಸರ್ಕಾರ


ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಾಜ್ಯದ 18 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದ್ದು, 5 ಲಕ್ಷ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಹಾಗೂ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.


ರಾಜ್ಯ ಬಿಜೆಪಿ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದ್ದು, 2019-20ನೇ ಸಾಲಿನಲ್ಲಿ ಸಂಭವಿಸಿದ ಹಾನಿಗೆ ಸರಿಯಾದ ಪರಿಹಾರ ನೀಡಿಲ್ಲ ಎಂದ ಅವರು, ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದೇವೆ ಎನ್ನುತ್ತಾರೆ. ಆ ಪರಿಹಾರ ಸಂತ್ರಸ್ತರ ಕೈ ಸೇರಿಲ್ಲ, ಅತಿವೃಷ್ಟಿ ಹಾನಿ ಪ್ರದೇಶದಲ್ಲಿ ನಡೆದಿರುವ ಕಾಮಗಾರಿಯೂ ಕಳಪೆಯಾಗಿದೆ ಎಂದು ದೂರಿದರು.


ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|ಕೆ.ಪಿ.ಅಂಶುಮಂತ್, ಡಾ|ಡಿ.ಎಲ್.ವಿಜಯಕುಮಾರ್ ಸೇರಿದಂತೆ ಅನೇಕರು ಇದ್ದರು.


ಕಪ್ಪು ಬಾವುಟ ಪ್ರದರ್ಶನ


ಶುಕ್ರವಾರ ಶೃಂಗೇರಿ ಭಾಗದ ಮಳೆಹಾನಿ ಪ್ರದೇಶಕ್ಕೆ ತೆರಳುವ ವೇಳೆ ಜಯಪುರ ಸಮೀಪ ಮಕ್ಕಿಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಫೋಟೋ ಹಾಗೂ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಕಾರು ಅಡ್ಡ ಹಾಕಲು ಪ್ರತಿಭಟನಕಾರರು ಯತ್ನಿಸಿದರು. ಈ ವೇಳೆ ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಕಾರರನ್ನು ನಿಯಂತ್ರಿಸಿದರು.


ಇದನ್ನೂ ಓದಿ:  Siddaramiah: ಸಿದ್ದರಾಮಯ್ಯ, ಯತೀಂದ್ರ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು!


ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಶೃಂಗೇರಿ ಸಮೀಪ ಮೆಣಸೆ ಗ್ರಾಮದಲ್ಲಿ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲೇ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ತಡೆದರು. ರಸ್ತೆ ಮಧ್ಯೆ ಎರಡು ಪಕ್ಷಗಳ ಕಾರ್ಯಕರ್ತರು ಮುಖಾಮುಖಿಯಾಗಿದ್ದು, ಎರಡು ಪಕ್ಷದ ಕಾರ್ಯಕರ್ತರು ಪೊಲೀಸರ ಎದುರೇ ತಳ್ಳಾಟ ನೂಕಾಟ ನಡೆಸಿದರು. ಒಂದು ಹಂತದಲ್ಲಿ ಪೊಲೀಸರು ಮೂಖಪ್ರೇಕ್ಷಕರಾಗಿ ನಿಂತರು.


ಕೈ- ಕಮಲ ಕಾರ್ಯಕರ್ತರ ತಳ್ಳಾಟ ನೂಕಾಟ


ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಪೊಲೀಸರು ಮುಂದಾದರೂ ಪ್ರಯೋಜನವಾಗಲಿಲ್ಲ. ಕೈಕೈ ಮೀಲಾ ಯಿಸುವ ಹಂತ ತಲುಪಿದ್ದು, ಪೊಲೀಸರು ಹರಸಾಹಸಪಟ್ಟು ಕಾರ್ಯಕರ್ತರನ್ನು ಕಳಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಎರಡು ಬದಿಗಳಲ್ಲಿ ಹಗ್ಗವನ್ನು ಬಳಸಿ ಗುಂಪನ್ನು  ಪೊಲೀಸರು ಚದುರಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ನಾಲಾಯತ್ ಪೊಲೀಸರು ಎಂದು ಹಿಯಾಳಿಸಿದರು. ಹಿಂದೂ ವಿರೋಧಿ ಸಿದ್ದರಾಮಯ್ಯ ಗೋಬ್ಯಾಕ್ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.


ಸಿದ್ದರಾಮಯ್ಯರವರು ಶೃಂಗೇರಿ ಶಾರದಾಂಭೆ ಮತ್ತು ಗುರುಗಳ ದರ್ಶನ ಪಡೆಲು ತೆರಳಿದಾಗ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸ್ ಇಲಾಖೆ ಶಾಸಕ ಟಿ.ಡಿ. ರಾಜೇಗೌಡ ಅಣತಿಯಂತೆ ನಡೆಯುತ್ತಿದೆ. ಗೋಬ್ಯಾಕ್ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಫಿನಾಡಿಗೆ ಆಗಮಿಸಿದ ಸಿದ್ಧರಾಮಯ್ಯರವರಿಗೆ ಕಪ್ಪುಬಟ್ಟೆ ಪ್ರದರ್ಶನ ಮತ್ತು ಪ್ರತಿಭಟನೆ ಬಿಸಿ ತಟ್ಟಿತು.


ಬಿಗಿ ಪೊಲೀಸ್ ಬಂದೋಬಸ್ತ್


ಮಡಿಕೇರಿಯಲ್ಲಿ ನಡೆದ ಘಟನೆ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆಯ ಮಳೆಹಾನಿ ಪ್ರದೇಶ ಗಳಿಗೆ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು.


ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಂಡಿದ್ದು, ಸಿದ್ದರಾಮಯ್ಯ ಬೆಂಗಾವಲು ಪಡೆಯ ಜೊತೆಗೆ ರಾಜ್ಯ ಮೀಸಲು ಪೊಲೀಸ್ ಪಡೆ, ಅಡಿಷನಲ್ ಎಸ್‍ಪಿ, ಡಿವೈಎಸ್‍ಪಿ, ಪಿಎಸ್‍ಐ ಹಾಗೂ ಇತರೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಿದ್ಧರಾಮಯ್ಯ ಅವರ ಕಾರು ಚಲಿಸುವ ಮಾರ್ಗದ್ದೂದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.


ಗಾಂಧೀಜಿಯವರನ್ನು ಕೊಂದವರು ನನ್ನನ್ನು ಬಿಡುತ್ತಾರಾ?


ಬಿಜೆಪಿಯವರಿಗೆ ಸತ್ಯ ಹೇಳುವವರನ್ನು ಕಂಡರೇ ಆಗುವುದಿಲ್ಲ, ಬಿಜೆಪಿಯವರ ಭ್ರಷ್ಟಾಚಾರ, ಜನವಿರೋಧಿ ನೀತಿಗಳ ಬಗ್ಗೆ ನಾನು ಬಿಚ್ಚಿಡುತ್ತಿದ್ದೇನೆ. ಬಿಜೆಪಿಯವರಿಗೆ ನನ್ನ ಮೇಲೆ ಕೋಪ, ಸಿಟ್ಟು, ಸತ್ಯ ಹೇಳುವವರನ್ನು ಕಂಡರೇ ಬಿಜೆಪಿಯವರಿಗೆ ಆಗುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದ ಗಾಂಧೀಜಿಯವರನ್ನು ಅವರು ಬಿಡಲಿಲ್ಲ ಗಾಂಧೀಜಿಯ ವರನ್ನು ಕೊಂದವರು ನನ್ನನ್ನು ಬಿಡುತ್ತಾರಾ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.


ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸ್ವಾತಂತ್ರ್ಯ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಗೌರವಿಲ್ಲ ಅವರಿಗೆ ಆರ್‍ಎಸ್‍ಎಸ್ ಸಿದ್ಧಾಂತದ ಮೇಲೆ ಮಾತ್ರ ಗೌರವ. ನಾನು ಸತ್ಯ ಹೇಳಿದರೇ ಬಿಜೆಪಿಯವರು ಮೈ ಪರಚಿಕೊಳ್ಳು ತ್ತಾರೆ. ಸತ್ಯವನ್ನು ಉಸಿರಾಗಿಸಿಕೊಂಡಿದ್ದ ಗಾಂಧೀಜಿಯವರನ್ನು ಬಿಡದ ಸಂಘ ಪರಿವಾರದವರು ನನ್ನನ್ನು ಬಿಡುತ್ತಾರಾ ಎಂದರು.

Published by:Mahmadrafik K
First published: