ಸಿಎಂ ಭೇಟಿ ಮಾಡಿರುವುದರ ಹಿಂದಿನ ಸಸ್ಪೆನ್ಸ್​ ಇನ್ನೆರಡು ದಿನದಲ್ಲಿ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಯಾವುದೇ ಅಸಮಾಧಾನ ಕೂಡ ನನಗೆ ಇಲ್ಲ. ಸಿಎಂ ಅವರನ್ನು ಯಾಕೆ ಭೇಟಿಯಾದೆ ಎಂಬುದು ಸಸ್ಪೆನ್ಸ್​. ಇನ್ನೆರಡು ದಿನದಲ್ಲಿ ಎಲ್ಲಾ ಗೊತ್ತಾಗುತ್ತೆ ನೋಡಿ ಎಂದು ಶಾಕಿಂಗ್​ ಹೇಳಿಕೆ ನೀಡಿದರು.

Seema.R | news18-kannada
Updated:August 22, 2019, 9:25 AM IST
ಸಿಎಂ ಭೇಟಿ ಮಾಡಿರುವುದರ ಹಿಂದಿನ ಸಸ್ಪೆನ್ಸ್​ ಇನ್ನೆರಡು ದಿನದಲ್ಲಿ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
  • Share this:
ಬೆಂಗಳೂರು (ಆ.21): ಸಚಿವ ಸ್ಥಾನ ಸಿಗದ ಹಿನ್ನೆಲೆ ಸಿಟ್ಟಾಗಿರುವ ಅರಂಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಹೊಸ ಬಾಂಬ್​ ಸಿಡಿಸಿದ್ದಾರೆ.

ಮಂತ್ರಿ ಸ್ಥಾನದಿಂದ ವಂಚಿತರಾಗಿರುವ ಜಾರಕಿಹೊಳಿಯನ್ನು ಸಿಎಂ ಬಿಎಸ್​ವೈ ಓಲೈಕೆ ಮಾಡುವ ಯತ್ನದಿಂದ ಕರೆಸಿಕೊಂಡಿದ್ದರು. ಭೇಟಿ ಬಳಿಕ ಮಾತನಾಡಿದ ಜಾರಕಿಹೊಳಿ, ಸಿಎಂ ಭೇಟಿ ಔಪಚರಿಕ.  ರಾಜ್ಯದ ಮುಖ್ಯಮಂತ್ರಿಗಳು ಎಂದ ಮೇಲೆ ಅವರನ್ನು ಭೇಟಿ ಮಾಡಬೇಕು. ಅದಕ್ಕೆ ಬರುತ್ತೇವೆ. ಇದರಲ್ಲಿ ಏನು ವಿಶೇಷತೆ ಇಲ್ಲ ಎಂದರು.

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಯಾವುದೇ ಅಸಮಾಧಾನ ಕೂಡ ನನಗೆ ಇಲ್ಲ. ಸಿಎಂ ಅವರನ್ನು ಯಾಕೆ ಭೇಟಿಯಾದೆ ಎಂಬುದು ಸಸ್ಪೆನ್ಸ್​. ಇನ್ನೆರಡು ದಿನದಲ್ಲಿ ಎಲ್ಲಾ ಗೊತ್ತಾಗುತ್ತೆ ನೋಡಿ ಎಂದು ಶಾಕಿಂಗ್​ ಹೇಳಿಕೆ ನೀಡಿದರು.

ಬಹಳ ವರ್ಷಗಳ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಇದರಿಂದ ಈ ಮೂರೂವರೆ ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಉತ್ತಮ ಕೆಲಸ ಮಾಡುವುದು ನಮ್ಮ ಉದ್ದೇಶ. ನಮ್ಮ ಅಸಮಾಧಾನಗಳೆಲ್ಲಾ ಎರಡು ದಿನದಲ್ಲಿ ಬಗೆಹರಿಯಲಿದೆ ಎಂದರು.

ಇದನ್ನು ಓದಿ: ನಾಳೆ ದೆಹಲಿಗೆ ನಳಿನ್​ ಕುಮಾರ್​ ಕಟೀಲ್​; ಪಕ್ಷ ಸಂಘಟನೆ ಕುರಿತು ಅಮಿತ್​ ಶಾ ಜೊತೆ ಚರ್ಚೆ ಸಾಧ್ಯತೆ

15 ವರ್ಷದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಾರಕಿಹೊಳಿ ಕುಟುಂಬ ಸಚಿವ ಸ್ಥಾನದಿಂದ ವಂಚಿತವಾಗಿದೆ. ಇನ್ನು ಪ್ರವಾಹ ಪರಿಶೀಲನೆ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ