ಬೆಳಗಾವಿ (ಜನವರಿ,24): ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲ. ಸಚಿವ ಉಮೇಶ್ ಕತ್ತಿ (Minister Umesh Katti) ಟೀಮ್ ನಡೆಸಿದ ಸಭೆ ಈಗ ಬಿಜೆಪಿ ಜಿಲ್ಲೆ ಅಷ್ಟೇ ಅಲ್ಲಾ ರಾಜ್ಯ ರಾಜಕಾರಣದಲ್ಲೂ ಸಂಚಲನ ಸೃಷ್ಟಿಸಿದೆ. ಸಚಿವ ಉಮೇಶ್ ಕತ್ತಿ ಟೀಮ್ ಗೌಪ್ಯಸಭೆ (Secret meeting) ನಡೆಸುತ್ತಿದ್ದಂತೆ ಬೆಳಗಾವಿ ರಾಜಕಾರಣದ ಚಿತ್ರಣವೇ ಬದಲಾಗಿದೆ. ಕತ್ತಿ ಟೀಮ್ ಸಭೆ ಬೆನ್ನಲ್ಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಸಹ ತೀರುಗೇಟು ನೀಡುವ ಕೆಲಸವನ್ನ ಮಾಡಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಖಾರವಾಗಿಯೇ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವ ಉಮೇಶ್ ಕತ್ತಿ ಟೀಮ್ ಗೆ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸಭೆ ಬಿಜೆಪಿ ಅಧಿಕೃತ ಪಕ್ಷದ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ. ಈ ಸಭೆಯಲ್ಲಿ ಯಾರನ್ನ ಹೊರಗಿಟ್ಟಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಜಿಲ್ಲೆಯಲ್ಲಿ ಯಾರು ಎಷ್ಟು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತ ಹೋದರೆ ಅದಕ್ಕೆಲ್ಲ ಉತ್ತರಿಸುವ ಗೋಜಿಗೆ ಗೆ ಹೋಗಲ್ಲ. 2008 ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಗೆ ಕೆಲಸ ಮಾಡುತ್ತೇವೆ. ಈಗ ನಡೆದಿರುವ ವಿದ್ಯಮಾನಗಳನ್ನ ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಪೋಸ್ಟ್ ಹಾಕುವ ಮೂಲಕ ಕತ್ತಿ ಟೀಮ್ ಗೆ ಟಾಂಗ್ ಕೊಟ್ಟಿದ್ದಾರೆ.
ಜಾರಕಿಹೊಳಿ ಸಹೋದರರ ಬ್ರದರಸ್ ಸೈಡ್ಲೈನ್ ಮಾಡುವ ತಂತ್ರ
ಸಚುವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಸಭೆ ಜಾರಕಿಹೊಳಿ ಬ್ರದರ್ಸ್ ಅನ್ನ ಸೈಡಲೈನ್ ಮಾಡಲು ರಣತಂತ್ರ ಹೆಣೆಯಲಾಗಿದೆ. ಜಾರಕಿಹೊಳಿ ಬ್ರದರ್ಸ್, ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಈ ಸಭೆಯಿಂದ ದೂರವೇ ಇಡಲಾಗಿತ್ತು. ಗೌಪ್ಯಸಭೆ ಬಗ್ಗೆ ಕಡೆಗೂ ಉಮೇಶ್ ಕತ್ತಿ ಮೌನ ಮುರಿದಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದು, ವಿಧಾನಪರಿಷತ್ ಸೋಲಿನ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಆಗಿದೆ. ನಾನು ಯಾರನ್ನೂ ಸಹ ಆಹ್ವಾನ ಮಾಡಿರಲಿಲ್ಲ.
ಇದನ್ನು ಓದಿ: ಹರದನಹಳ್ಳಿ ಗ್ರಾಮಪಂಚಾಯ್ತಿ ಸಭೆಯಲ್ಲಿಯೇ ನಡೆಯಿತು ಮದುವೆ
ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಭೆ
ಯಾರನ್ನು ಕರೆಯಬೇಡ ಅಂತಾನೂ ಹೇಳಿಲ್ಲ. ಕಳೆದ ಎಂ ಎಲ್ ಸಿ ಚುನಾವಣೆಯಲ್ಲಿ ಸೋತಂತ ಅಭ್ಯರ್ಥಿ ಎಲ್ಲರನ್ನೂ ಕೂಡಿಸಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರೂ ಕೂಡಲು ಕಾರಣ ಮಹಾಂತೇಶ್ ಕವಟಗಿಮಠ. ನಾನು ಯಾರನ್ನೂ ಹೊರಗಿಡುವ ಪ್ರಯತ್ನ ಮಾಡಿಲ್ಲ. ಮಹಾಂತೇಶ ಕವಟಗಿಮಠ ಯಾರನ್ನ ಕರೆದ್ರು ಯಾರನ್ನ ಬಿಟ್ರು ಎಂದು ನನಗೆ ಗೊತ್ತಿಲ್ಲ. ಬರವದರು ದೊಡ್ಡವರಲ್ಲ ಸಣ್ಣವರಲ್ಲ. ಬಂದವರು ದೊಡ್ಡವರಲ್ಲ ಸಣ್ಣವರಲ್ಲ. ಮುಂಬರುವ ತಾಪಂ ಜಿ ಪಂ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ ಎಂದು ಹೇಳುವ ಮೂಲಕ ಉಮೇಶ್ ಕತ್ತಿ ಜಾರಕಿಹೊಳಿ ಬ್ರದರ್ಸ್ ಟಾಂಗ್ ನೀಡಿದ್ದಾರೆ.
ಇದನ್ನು ಓದಿ: ಪದೇ ಪದೇ ಅನಾರೋಗ್ಯವೇ; ಈ ವಾಸ್ತು ಬದಲಾವಣೆ ಮಾಡಿ ನೋಡಿ
ಇದು ಗೌಪ್ಯ ಸಭೆ ಅಲ್ಲ ಎಂದ ಕತ್ತಿ
ಆದ್ರೆ ಇದು ಯಾವುದೆ ಗುಪ್ತ ಸಭೆ ಅಲ್ಲಾ ನಾನು ಯಾರನ್ನು ಸಹ ಸಭೆಗೆ ಕರೆದಿಲ್ಲಾ ಎನ್ನುವ ಮೂಲಕ ಜಾರಿಕೊಳ್ಳುವ ಪ್ರಯತ್ನವನ್ನ ಸಚಿವ ಉಮೇಶ್ ಕತ್ತಿ ನಡೆಸಿದ್ದಾರೆ.
ಹೌದು ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನೀರಾವರಿ ಇಲಾಖೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೋತೆ ಮಾತನಾಡಿರುವ ಉಮೇಶ್ ಕತ್ತಿ ನಮ್ಮ ಮನೆಯಲ್ಲಿ ನಡೆದಿದ್ದು ಯಾವುದೆ ಗುಪ್ತ ಸಭೆ ಅಲ್ಲಾ ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತ ಕುರಿತು ಸವಿಸ್ತಾರ ಚರ್ಚೆ ನಡೆಸಿದ್ದೇವೆ ಜೋತೆಗೆ ಮುಂದೆ ಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಕುರಿತು ಚರ್ಚೆ ಮಾಡಲು ಸಭೆ ಸೇರಿದ್ದೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ