ರಾಜ್ಯದಲ್ಲಿ KMFನಿಂದಲೇ ಬ್ಯಾಂಕ್ ಸ್ಥಾಪನೆ ಮಾಡಲು ಚಿಂತನೆ: Balachandra Jarkiholi

ರಾಜ್ಯದಲ್ಲಿ 14 ಒಕ್ಕೂಟ, ಕೆಎಂಎಫ್ ನಿಂದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ. ಹಾಲಿನ ಮೊತ್ತ ರೈತರ ಹಣ ಪಾವತಿ ಮಾಡಲು ಬ್ಯಾಂಕ್ ನಿಂದ ಅನಕೂಲ ಆಗಲಿದೆ‌. ರಾಜ್ಯದಲ್ಲಿ ಏಕರೂಪ ದರ ನಿಗದಿ ಬಗ್ಗೆ ಡಿಸೆಂಬರ್ ನಡೆಯುವ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ

ಬಾಲಚಂದ್ರ ಜಾರಿ

ಬಾಲಚಂದ್ರ ಜಾರಿ

  • Share this:
ಬೆಳಗಾವಿ:‌ ರಾಜ್ಯದ ಕೆಎಂಎಫ್ ಉತ್ಪನ್ನಗಳು (KMF Products) ರಾಜ್ಯ‌ ಅಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಖ್ಯಾತಿ ಗಳಿಸಿವೆ. ಇದೀಗ‌ ಮತ್ತೊಂದು ಹೆಜ್ಜೆ ಇಡಲು ಕೆಎಂಎಫ್ (KMF) ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಪ್ರತಿ ವರ್ಷ ಕೆಎಂಎಫ್ 17 ಸಾವಿರ‌ ಕೋಟಿ‌ ವಹಿವಾಟು ನಡೆಸುತ್ತದೆ. ಜತಗೆ ರಾಜ್ಯ(Karnataka0ದಲ್ಲಿ ಹಾಲಿನ ಏಕರೂಪ ದರ (Uniform rate) ನಿಗದಿ ಮಾಡಲು ಚಿಂತನೆ ನಡೆಸಿದೆ. ಮುಂಬರುವ‌ ಡಿಸೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ‌ಬಾಲಚಂದ್ರ ಜಾರಕಿಹೊಳಿ (Balchandra Jarkiholi) ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಬ್ಯಾಂಕ್ ಮಾಡುವಂತೆ ಸಲಹೆ ನೀಡಿದ್ದಾರೆ ಎಂದರು.

ಬೆಳಗಾವಿ ಕೆಎಂಎಫ್ ಆವರಣದಲ್ಲಿ ಮಕ್ಕಳಿಗಾಗಿ ವಸತಿ ನಿಲಯ ಉದ್ಘಾಟನೆ ನಡೆಯಿತು. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಮಕ್ಕಳಿಗೆ‌ ಇದರಿಂದ ಅನಕೂಲ ಆಗಲಿದೆ. ರೈತರ‌‌ ಪ್ರತಿಭಾನ್ವಿತ ಮಕ್ಕಳಗೆ ಹಾಸ್ಟೆಲ್ ನಲ್ಲಿ ಓದಿಕೊಳ್ಳಲು ಅವಕಾಶ ಸಿಗಲಿದೆ.‌ ವರ್ಷಾಂತ್ಯದಲ್ಲಿ ಹಾಸ್ಟೆಲ್ ಕಾಮಗಾರಿ ‌ಪೂರ್ಣಗೊಳ್ಳಲಿದೆ. 1400 ಮಕ್ಕಳಿಗೆ ಇದರಿಂದ ಉಪಯೋಗ ಆಗಲಿದೆ.

ಇದನ್ನೂ ಓದಿ:  Ramanagara; ಬಾ ಗುರು ಎಣ್ಣೆ ಪಾರ್ಟಿ ಮಾಡೋಣ ಅಂದ್ರು: ಹೋದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ರು!

ಹಾಸ್ಟೆಲ್ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ,‌ ಬೆಳಗಾವಿಯಲ್ಲಿ ಹೈವೆ ಪಕ್ಕದಲ್ಲಿ 40-50 ಎಕರೆ ಜಮೀನು ಹುಡುಕುತ್ತಿದ್ದೇವೆ. ಸಿಕ್ಕ ಬಳಿಕ ಭಾರತದಲ್ಲಿ ಬೆಸ್ಟ್ ಪ್ಲ್ಯಾಂಟ್ ಮಾಡೊ ಉದ್ದೇಶ ಇದೆ. ಇದರಿಂದ ಬೆಳಗಾವಿ ಜನರಿಗೆ ಅನಕೂಲ ಆಗಲಿದೆ. ಜತಗೆ ಉದ್ಯೋಗ ಸೃಷ್ಟಿ ಸಹ ಆಗಲಿದೆ. ಕೆಎಂಎಫ್ ನಿಂದ ಒಂದು ಹಸು ಮೃತಪಟ್ಟರೇ ತಲಾ 50 ಸಾವಿರ ಪರಿಹಾರ ನೀಡಲಾಗುತ್ತಿದೆ. ಹೈನುಗಾರಿಕೆಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಯನ್ನು ಒದಗಿಸಿದ್ದೇವೆ ಎಂದರು.

KMF Bank ಆರಂಭಿಸಲು ಸಿಎಂ ಸಲಹೆ

ಒಂದು ವರ್ಷಕ್ಕೆ ಕೆಎಂಎಫ್ 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಹೊಂದಿದೆ.  ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಬ್ಯಾಂಕ್ ಮಾಡುವಂತೆ ಸಲಹೆ ನೀಡಿದ್ದಾರೆ. ಜತಗೆ‌ ನೂರು ಕೋಟಿ ರೂಪಾಯಿ ಠೇವಣಿ ನೀಡುವ ಭರವಸೆ ಸಹ‌ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಬ್ಯಾಂಕ್ (KMF Bank)ನಿರ್ಮಾಣಕ್ಕೆ ಗಂಭೀರವಾಗಿ ‌ಚಿಂತನೆ ನಡೆಸಿದೆ.

ಇದನ್ನೂ ಓದಿ:  ಅಮುಲ್ ಜೊತೆ ಸ್ಪರ್ಧೆ ಮಾಡುತ್ತೇವೆ; ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬ್ಯಾಂಕ್ ಆರಂಭಿಸಿದ್ರೆ ಲಾಭ ಏನು?

ರಾಜ್ಯದಲ್ಲಿ 14 ಒಕ್ಕೂಟ, ಕೆಎಂಎಫ್ ನಿಂದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ. ಹಾಲಿನ ಮೊತ್ತ ರೈತರ ಹಣ ಪಾವತಿ ಮಾಡಲು ಬ್ಯಾಂಕ್ ನಿಂದ ಅನಕೂಲ ಆಗಲಿದೆ‌. ರಾಜ್ಯದಲ್ಲಿ ಏಕರೂಪ ದರ ನಿಗದಿ ಬಗ್ಗೆ ಡಿಸೆಂಬರ್ ನಡೆಯುವ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸಮಾರಂಭದಲ್ಲಿ ಮಾತನಾಡಿ‌ ಸ್ಥಳೀಯ ‌ಶಾಸಕ ಅನಿಲ್ ಬೆನಕೆ(MLA Anil Benake), ಆಂಜನೇಯ ನಗರ ಇರೋ ವಾರ್ಡ್ ಅನ್ನು ಕೆಎಂಎಫ್ ದತ್ತು ಪಡೆಯಬೇಕು. ಈ ಮೂಲಕ  ಸ್ವಚ್ಚತೆ ಕಾಪಾಡಲು ಕಾರ್ಯಕ್ರಮ ರೂಪಿಸಿ ಮಾದರಿ ವಾರ್ಡ್ ಮಾಡಬೇಕು. ಕೆಎಂಎಫ್ ಗೆ ಪಾಲಿಕೆ, ಸ್ಮಾರ್ಟ್ ಸಿಟಿಯಿಂದ ಎಲ್ಲಾ‌ ಅನಕೂಲ ‌ಮಾಡಲಾಗಿದೆ. ವಾರ್ಡ್ ದತ್ತು ಸ್ವೀಕಾರದಿಂದ ಜನರಿಗೆ ಅನಕೂಲ ಆಗಲಿದೆ ಎಂದರು.

ಸಿಎಂ  ಬೊಮ್ಮಾಯಿ ಸಲಹೆ

ಸಹಕಾರ ಕ್ಷೇತ್ರದ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕಿದೆ. ಹಾಲು ಉತ್ಪಾದಕರ ಬ್ಯಾಂಕ್ (Milk Producer Bank) ತೆರೆಯಿರಿ. ಇದು ನನ್ನ ಹಾಗೂ ಸಚಿವರ ಮನದಾಸೆಯಿದೆ. ಈಗಾಗಲೇ ಕೆಎಂಎಫ್ ಗೆ ಎಲ್ಲ ಅರ್ಹತೆಯಿದೆ. ಈ ಕುರಿತು ಮುಂದೆ ಕಾರ್ಯೋನ್ಮುಖರಾಗಿ. ಆಗ ಸರ್ಕಾರಕ್ಕೆ ಪದೇ ಪದೇ ಅನುದಾನ ಕೇಳುವುದು ತಪ್ಪುತ್ತದೆ. ಈ ರೀತಿ ಮಾಡಿದರೆ 100 ಕೋಟಿ ಕ್ಯಾಪಿಟಲ್ ಸರ್ಕಾರ ನೀಡಲಾಗುತ್ತದೆ ಎಂದು ಕೆಎಂಎಎಫ್​ಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಸಲಹೆ ನೀಡಿದ್ದರು.
Published by:Mahmadrafik K
First published: