ಕೆಎಂಎಫ್​ ಅಧ್ಯಕ್ಷ ಸ್ಥಾನದ ಮೇಲೆ ಬಾಲಚಂದ್ರ ಜಾರಕಿಹೊಳಿ ಕಣ್ಣು?

ಆಗಸ್ಟ್​ 31ರಂದು ನಡೆಯಲಿರುವ ಕೆಎಂಎಫ್​ ಹುದ್ದೆಗೆ ಈಗಾಗಲೇ ರೇಸ್​ ಶುರುವಾಗಿದ್ದು, ಈ ಹುದ್ದೆ ಮೇಲೆ ಈಗಾಗಲೇ ಎಚ್​.ಡಿ ರೇವಣ್ಣ, ಭೀಮಾ ನಾಯ್ಕ್​ ಕಣ್ಣಿಟ್ಟಿದ್ದಾರೆ. ಈಗ ಈ ಸ್ಥಾನಕ್ಕೆ ಚಾಲಚಂದ್ರ ಜಾರಕಿಹೊಳಿ ಕಣ್ಣಿಟ್ಟಿದ್ದಾರೆ.

Seema.R | news18-kannada
Updated:August 24, 2019, 10:18 PM IST
ಕೆಎಂಎಫ್​ ಅಧ್ಯಕ್ಷ ಸ್ಥಾನದ ಮೇಲೆ ಬಾಲಚಂದ್ರ ಜಾರಕಿಹೊಳಿ ಕಣ್ಣು?
ಬಾಲಚಂದ್ರ ಜಾರಕಿಹೊಳಿ
  • Share this:
ಬೆಳಗಾವಿ (ಆ.24): ಸಚಿವ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಬೆಳಗಾವಿ ಸಾಹುಕಾರ ಬಾಲಚಂದ್ರ ಜಾರಕಿಹೊಳಿ ಈಗ ಕೆಎಂಎಫ್​ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಎರಡು ದಿನಗಳ ಹಿಂದೆ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತನಾಡಿದ್ದ ಅವರು, ಸಿಎಂ ಭೇಟಿ ಹಿಂದಿನ ಉದ್ದೇಶ ಏನೆಂಬುದನ್ನು ಇನ್ನೆರಡು ದಿನದಲ್ಲಿ ತಿಳಿಸುವುದಾಗಿ ಹೇಳಿದ್ದರು. ಆ ಭೇಟಿ ಹಿಂದಿನ ಸಸ್ಪೆನ್ಸ್​ ಈಗ ಬಹಿರಂಗವಾಗಿದೆ.

ಆಗಸ್ಟ್​ 31ರಂದು ನಡೆಯಲಿರುವ ಕೆಎಂಎಫ್​ ಹುದ್ದೆಗೆ ಈಗಾಗಲೇ ರೇಸ್​ ಶುರುವಾಗಿದ್ದು, ಈ ಹುದ್ದೆ ಮೇಲೆ ಈಗಾಗಲೇ ಎಚ್​.ಡಿ ರೇವಣ್ಣ, ಭೀಮಾ ನಾಯ್ಕ್​ ಕಣ್ಣಿಟ್ಟಿದ್ದಾರೆ. ಈಗ ಈ ಸ್ಥಾನಕ್ಕೆ ಚಾಲಚಂದ್ರ ಜಾರಕಿಹೊಳಿ ಕಣ್ಣಿಟ್ಟಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ; ಅನರ್ಹ ಶಾಸಕ ಎಚ್​ ವಿಶ್ವನಾಥ್

ಈಗಾಗಲೇ ಕೆಎಂಎಫ್​​ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಮನಿರ್ದೇಶನ ಮಾಡಿರುವುದು ಮಾಡಲಾಗಿದೆ.

ಚುನಾವಣೆಯಲ್ಲಿ 16 ಜನರು ಮತದಾನದ ಹಕ್ಕು ಪಡೆದಿದ್ದು, ಅದರಲ್ಲಿ 12 ಜನರು ವಿವಿಧ ಒಕ್ಕೂಟಗಳ ಆಡಳಿತ ಮಂಡಳಿಯ ಸದಸ್ಯರಿದ್ದು, ಒಬ್ಬರು ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಇಬ್ಬರು ಅಧಿಕಾರಿಗಳು ಮತ್ತು ಒಬ್ಬರು ಎನ್‌ಡಿಡಿಬಿ ಸದಸ್ಯರು ಇದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದ ಎಲ್ಲ ಸದಸ್ಯರು ಬಾಲಚಂದ್ರ ಜಾರಕಿಹೊಳಿ  ಬೆಂಬಲ ನೀಡಲಿದ್ದಾರೆ ಎನ್ನಲಾಗಿದೆ.

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ