KMF: ಕೆಎಂಎಫ್​ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

KMF New President: ಈ ಹಿಂದೆಯೇ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಎಚ್​ಡಿ ರೇವಣ್ಣ, ಒಕ್ಕೂಟಕ್ಕೆ ಪತ್ರ ಬರೆಯುವ ಮೂಲಕ ಚುನಾವಣೆಯಿಂದ ಹಿಂದೆ ಸರಿದ ಹಿನ್ನೆಲೆ ಬಾಲಚಂದ್ರ ಜಾರಕಿಹೊಳಿ ಒಕ್ಕೂಟದ 15ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Seema.R | news18-kannada
Updated:August 31, 2019, 2:40 PM IST
KMF: ಕೆಎಂಎಫ್​ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
  • Share this:
ಬೆಂಗಳೂರು (ಆ.31): ಕರ್ನಾಟಕ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಅರಂಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆಯೇ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಎಚ್​ಡಿ ರೇವಣ್ಣ, ಒಕ್ಕೂಟಕ್ಕೆ ಪತ್ರ ಬರೆಯುವ ಮೂಲಕ ಚುನಾವಣೆಯಿಂದ ಹಿಂದೆ ಸರಿದ ಹಿನ್ನೆಲೆ ಬಾಲಚಂದ್ರ ಜಾರಕಿಹೊಳಿ ಒಕ್ಕೂಟದ 15ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಸದ್ಯ ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾವನೆ ಇಲ್ಲ.  ಕೆಎಂಎಫ್​​ನಲ್ಲಿ ಪ್ರತಿದಿನ 75 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ 10 ದಿನದಲ್ಲಿ ಸಬ್ಸಿಡಿ ಹಣ ನೀಡುವ ಬಗ್ಗೆ ಪ್ರಯತ್ತಿಸುತ್ತೇನೆ. ಹಾಲು ಉತ್ಪನ್ನ ಹೊರಗೆ ಮಾರಲು ಪ್ರಯತ್ನ ಮಾಡಲಾಗುವುದು. ಈ ಮೂಲಕ ಕೆಎಂಎಫ್​ ಲಾಭವನ್ನು 300 ಕೋಟಿಗೆ ಏರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಇದನ್ನು ಓದಿ: ಕರ್ನಾಟಕದ ಹಾಲು ಕ್ರಾಂತಿಕಾರ ದೇವೇಗೌಡರು; ತಂದೆಯನ್ನು ಹಾಡಿಹೊಗಳಿದ ಎಚ್​ಡಿ ರೇವಣ್ಣ

ದೇಶದಲ್ಲಿ ಅಮೂಲ್​ ಮೊದಲ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಕೆಎಂಎಫ್​ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಪಣತೊಡುತ್ತೇನೆ. ಒಕ್ಕೂಟದಲ್ಲಿನ ಅಕ್ರಮಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಸೆಪ್ಟೆಂಬರ್​ 2ರ ಬಳಿಕ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದರು.

ಅಧ್ಯಕ್ಷರಾಗಲು ನಿರ್ದೇಶಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಲಾಬಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ನಾಲ್ಕು ಜನ ನಿರ್ದೇಶಕರು ಬೆಳಗಾವಿಯರಾಗಿದ್ದು ನನ್ನ ಗೆಲುವಿಗೆ ಸಹಾಯಕವಾಯಿತು ಎಂದರು.

ಸಿಎಂ ಅಭಿನಂದನೆಕೆ.ಎಂ.ಎಫ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದರು.
ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕೆ.ಎಂ.ಎಫ್, ರೈತ ಪರವಾದ ಯೋಜನೆಗಳನ್ನು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಾರೆ ಎಂದು ನಂಬಿರುವುದಾಗಿ ಅವರು ತಿಳಿಸಿದರು

First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ