ಕೊಡಗು (ಏ. 25): ರಾಜ್ಯದಲ್ಲಿ ಹಿಂದೂ ದೇವಾಲಯಗಳ (Hindu Temple) ಜಾತ್ರಾ ಮಹೋತ್ಸವದ ವ್ಯಾಪಾರದಲ್ಲಿ ಹೊತ್ತಿಕೊಂಡಿದ್ದ ಧರ್ಮದ ಕಿಡಿ ಈಗ ಕೊಡಗು ಜಿಲ್ಲೆಯಲ್ಲೂ ಹೊತ್ತಿಕೊಂಡಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ (Shanivarsante) ಸಮೀಪದ ಅಂಕನಹಳ್ಳಿಯ ಮನೆಹಳ್ಳಿ ಮಠದಲ್ಲಿ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ (Cow) ಸಮ್ಮೇಳನ ನಡೆಯುತ್ತಿದೆ.ಈ ಜಾತ್ರಾ ಮಹೋತ್ಸವದಲ್ಲಿ ತಿಂಡಿ ತಿನಿಸು, ಆಟಿಕೆಗಳು ಮತ್ತು ಕಬ್ಬಿನ ಹಾಲಿನ ಅಂಗಡಿಗಳನ್ನು ಮುಸ್ಲಿಂ ವ್ಯಾಪಾರಿಗಳು (Muslim Shopers) ಹಾಕಿದ್ದರು. ಆದರೆ, ಸ್ಥಳಕ್ಕೆ ಬಂದ ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಘಟನೆ ನಡೆದಿದೆ.
ಗೋ ಸಮ್ಮೇಳನದಲ್ಲಿ ವ್ಯಾಪಾರ ಮಾಡುವ ಅಗತ್ಯವೇನು?
ಈ ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಮುಸ್ಲಿಂ ವ್ಯಾಪಾರಿಗಳು ಅನಿವಾರ್ಯವಾಗಿ ಅಂಗಡಿಗಳನ್ನು ಗಂಟು ಮೂಟೆ ಕಟ್ಟಿ ಅಲ್ಲಿಂದ ಖಾಲಿ ಮಾಡಿದರು. ಈ ವೇಳೆ ಮಾತನಾಡಿದ ಬಜರಂಗ ದಳದ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್ ಗೋವನ್ನು ಹತ್ಯೆ ಮಾಡಿ ತಿನ್ನುವವರಿಗೆ ಗೋ ಸಮ್ಮೇಳನದಲ್ಲಿ ವ್ಯಾಪಾರ ಮಾಡುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅವರು ಅವರ ಕಾರ್ಯಕ್ರಮಗಳಲ್ಲಿ ಬೇಕಾದರೆ ವ್ಯಾಪಾರ ಮಾಡಿಕೊಳ್ಳಲಿ. ಹಿಜಬ್ ಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು ವಿರೋಧಿಸಿ ಮುಸ್ಲಿಂರು ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟಿಸಿದರು. ಅಂತಹವರಿಗೆ ಹಿಂದೂ ದೇವಾಲಯಗಳ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ಯಾಕೆ ಬೇಕು ಎಂದು ಕೇಳಿದರು
ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ
ಹಿಂದೂಗಳು ಕೇವಲ ಸಂತೆಯಲ್ಲಿಯೇ ಸರಿಯಾಗಿ ವ್ಯಾಪಾರ ಮಾಡುವುದಕ್ಕೆ ಮುಸಲ್ಮಾನರು ಬಿಡುವುದಿಲ್ಲ. ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಬಿಡುವುದಿಲ್ಲ. ಇದು ಹೀಗೆ ಮುಂದುವರಿದರೆ ನಾವು ಬೇರೆಯದ್ದೇ ರೀತಿಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೃತ ಅಣ್ಣನ ಹೆಸರಿನಲ್ಲಿ 24 ವರ್ಷ ಕೆಲಸ ಮಾಡಿದ ಶಿಕ್ಷಕ ಅರೆಸ್ಟ್! ಕಳ್ಳಾಟವಾಡಿ ಸಿಕ್ಕಿಬಿದ್ದ ಮಾಸ್ಟರ್
ಸಿದ್ದರಾಮಯ್ಯ ಹೇಳಿಕೆಗೆ ಕಿಡಿ
ಇನ್ನು ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ಕನ್ನೇರಿಸಿದ್ಧಗಿರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಈಗ ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಅಂತಹ ಸರ್ಕಾರ ಅಥವಾ ವ್ಯಕ್ತಿಯನ್ನು ದೇವರು ಎಂದಿಗೂ ಕ್ಷಮಿಸಲಾರ ಎಂದಿದ್ದಾರೆ ಈ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿಗಳ ವಸ್ತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ; ಸಿದ್ದು ವಿರುದ್ಧ ಸಿಡಿದೆದ್ದ ಮಠಾಧೀಶರು
ಯಾರ ಸ್ವಭಾವ ಹೇಗೋ ಯಾರಿಗೆ ಗೊತ್ತು
ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಯಾರ ಯಾರ ಸ್ವಭಾವ ಹೇಗಿದೆಯೋ ಯಾರಿಗೆ ಗೊತ್ತು. ಹಸುವಿನ ಹಾಲು ತುಪ್ಪ ತಿನ್ನಬೇಕೆ ಹೊರತ್ತು ಹಸುವನ್ನೇ ಕೊಂದು ತಿನ್ನಬಾರದು. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡ್ತೇವೆ ಎನ್ನುವವರು ಇದನ್ನು ತಿಳಿದುಕೊಳ್ಳಬೇಕು. ದೇವರು ನಮಗೆ ಗಿಡ ಕೊಟ್ಟಿದ್ದು ಹಣ್ಣು ತಿನ್ನೋದಕ್ಕೆ. ಆದ್ದರಿಂದ ನಾವು ಹಣ್ಣು ತಿನ್ನಬೇಕೆ ಹೊರತ್ತು ಗಿಡವನ್ನೇ ತಿನ್ನಬಾರದು. ದೇವರು ಹಸುವನ್ನು ಕೊಟ್ಟಿದ್ದು ಹಾಲು ತುಪ್ಪ ತಿನ್ನೋದಕ್ಕೆ. ಇದನ್ನು ಅರ್ಥ ಮಾಡಿಕೊಳ್ಳದೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬಾರದು. ಹಾಗೆ ರದ್ದು ಮಾಡುವವರನ್ನು ಯಾವ ದೇವರು ಕ್ಷಮಿಸಲಾರ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ