ಮಂಗಳೂರು: ಹೋಳಿ (Holi) ಸಂಭ್ರಮದ ಡಿಜೆ ಪಾರ್ಟಿ (DJ Party) ಮೇಲೆ ಭಜರಂಗದಳ (Bajrang Dal) ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಮಂಗಳೂರು (Mangaluru) ನಗರದ ಮರೋಳಿ ಎಂಬಲ್ಲಿ ನಡೆದಿದೆ. ರಂಗ್ ದೇ ಬರ್ಸಾ (Rang De Barsa) ಹೆಸರಿನಲ್ಲಿ ನಡೆಯುತ್ತಿದ್ದ ಹೋಲಿ ಆಚರಣೆ ವೇಳೆ ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಸಂಭ್ರಮಿಸುತ್ತಿದ್ದ ಯುವಕ-ಯುವತಿಯರನ್ನು ಸ್ಥಳದಿಂದ ಖಾಲಿ ಮಾಡಿಸಿದ್ದು, ಸ್ಥಳದಲ್ಲಿ ಪಾರ್ಟಿಗೆ ಅಳವಡಿಸಿದ್ದ ಬ್ಯಾನರ್ (Banner) ಸೇರಿದಂತೆ ಇತರೇ ವಸ್ತುಗಳನ್ನು ಪುಡಿ ಮಾಡಿ ದಾಂಧಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ (Moral Policing) ಘಟನೆ ವರದಿಯಾಗಿದೆ.
ಅಶ್ಲೀಲವಾಗಿ ವರ್ತನೆ ಆರೋಪ
ಭಜರಂಗದಳದ ಕಾರ್ಯಕರ್ತರು ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ-ಯುವತಿಯರು ಅಶ್ಲೀಲವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ದಾಳಿ ಮಾಡಿದ್ದಾರೆ. ಅಲ್ಲದೆ ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಮಾಡುತ್ತಿದ್ದಾರೆ ಎಂದು ಸ್ಥಳದ ಮೇಲೆ ದಾಳಿ ಮಾಡಿದ್ದು, ಈ ವೇಳೆ ಹೋಳಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನ ಪುಡಿಗೈದು ದಾಂಧಲೆ ಮಾಡಿದ್ದಾರೆ.
ಇದನ್ನೂ ಓದಿ: Basangouda Patil Yatnal: ನಾನು ಸಿಎಂ ಆದ್ರೆ ನಂಬರ್ 1 ರಾಜ್ಯ ಮಾಡುವೆ ಎಂದ ಯತ್ನಾಳ್; ಬೊಮ್ಮಾಯಿಗೆ ಪರೋಕ್ಷ ಟಾಂಗ್!
ಭಜರಂಗದಳದ ಕಾರ್ಯಕರ್ತರು ವಶಕ್ಕೆ
ಘಟನೆಯ ಸಂದರ್ಭದಲ್ಲಿ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಆಯೋಜಕರು ಮತ್ತು ಕೆಲವರ ಮೇಲೆ ಹಲ್ಲೆಗೂ ಭಜರಂಗದಳದ ಕಾರ್ಯಕರ್ತರು ಯತ್ನಿಸಿದರು ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಲಿಕಾನ್ಸಿಟಿಯಲ್ಲಿ ವೀಲ್ಹಿಂಗ್ ಹಾವಳಿ
ಸಿಲಿಕಾನ್ ಸಿಟಿಯಲ್ಲಿ ಪುಂಡರ ವೀಲ್ಹಿಂಗ್ ಹಾವಳಿ ಹೆಚ್ಚಾಗಿದೆ. ವಾಹನ ದಟ್ಟಣೆಯ ನಡುವೆಯೂ ಏರ್ಪೋರ್ಟ್ ಹಾಗೂ ಹೊಸೂರು ರಸ್ತೆಯಲ್ಲಿ ಪುಂಡರು ವೀಲ್ಹಿಂಗ್ ಮಾಡಿ ತೊಂದರೆ ನೀಡುತ್ತಿದ್ದಾರೆ. ನಿನ್ನೆ ತಡರಾತ್ರಿ ಪುಂಡರ ಗುಂಪೊಂದು ಚಿಕ್ಕಜಾಲ ಬಳಿ ವೀಲ್ಹಿಂಗ್ ಮಾಡಿದ್ದಾರೆ. ಬಳಿಕ ಯುವಕನೊಬ್ಬ ವೀಲ್ಹಿಂಗ್ ಮಾಡಿದ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುಂಡರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ