• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Manifesto: ನಾವು ಬಜರಂಗದಳದವರು, ಮನೆ ಮುಂದೆ ಬೋರ್ಡ್ ಹಾಕಿಕೊಂಡ ಕಾರ್ಯಕರ್ತರು

Congress Manifesto: ನಾವು ಬಜರಂಗದಳದವರು, ಮನೆ ಮುಂದೆ ಬೋರ್ಡ್ ಹಾಕಿಕೊಂಡ ಕಾರ್ಯಕರ್ತರು

ವೈರಲ್ ಫೋಟೋ

ವೈರಲ್ ಫೋಟೋ

ಇದು ಬಜರಂಗದಳದವರ ಮನೆ. ಕಾಂಗ್ರೆಸ್​ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ ಎಂದು ಬೋರ್ಡ್​ನಲ್ಲಿ ಬರೆಯಲಾಗಿದೆ.

  • Share this:

ಬೆಂಗಳೂರು: ಕರ್ನಾಟಕ ಚುನಾವಣೆ (Karnataka Election) ಹಿನ್ನೆಲೆ ಮಂಗಳವಾರ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು (Congress Manifesto) ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದೂ ಸಂಘಟನೆಯಾದ ಬಜರಂಗದಳ (Bajrang dal) ನಿಷೇಧದ ಪ್ರಸ್ತಾಪ ಇರಿಸಿರೋದು ವಿವಾದಕ್ಕೆ ಗುರಿಯಾಗಿದೆ. ಕಾಂಗ್ರೆಸ್ ನೀಡಿರುವ ಈ ಭರವಸೆಗೆ ಬಿಜೆಪಿ (BJP) ಸೇರಿದಂತೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೀಗ ಹಿಂದೂ ಸಂಘಟನೆಗಳು (Hindu Organizations) ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಾರ್ಯಕರ್ತರು ತಮ್ಮ ಮನೆಗಳ ಮುಂದೆ ನಾನು ಬಜರಂಗದಳದವನು ಎಂದು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಈ ರೀತಿ ಮನೆ ಮುಂದೆ ಬೋರ್ಡ್ ಹಾಕಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


ಮನೆ ಮುಂದೆ ಹಾಕಿರುವ ಬೋರ್ಡ್​ನಲ್ಲಿ ಏನಿದೆ?


ಇದು ಬಜರಂಗದಳದವರ ಮನೆ. ಕಾಂಗ್ರೆಸ್​ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ.


ನಾನು ಬಜರಂಗಿ ಅಭಿಯಾನ


ಭಜರಂಗದಳ ನಿಷೇಧಿಸುವ ಕಾಂಗ್ರೆಸ್ ನಿಲುವನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಜರಂಗಿ ಎಂಬ ಅಭಿಯಾನ ಶುರು ಮಾಡಲಾಗಿದೆ.


Bajrang Dal activist s warning to Congress leaders mrq
ಮನೆ ಮುಂದೆ ಬೋರ್ಡ್ ಹಾಕಿರೋದು


ಬಿಎಲ್ ಸಂತೋಷ್, ಕಟೀಲ್, ಪ್ರತಾಪಸಿಂಹ, ತೇಜಸ್ವಿ ಸೂರ್ಯ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿಯಲ್ಲಿ ಭಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಆಕ್ರೋಶ ಹೊರಹಾಕಿದ್ರು.




ಇದನ್ನೂ ಓದಿ:  PM Modi Campaign: ಕರಾವಳಿ, ಕಿತ್ತೂರು ಕರ್ನಾಟಕದಲ್ಲಿಂದು ಮೋದಿ ಮತಬೇಟೆ


ಕಾಂಗ್ರೆಸ್ ಹೇಳಿದ್ದೇನು?

top videos


    ಧರ್ಮ, ಜಾತಿ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಪಸಂಖ್ಯಾತ, ಬಹುಸಂಖ್ಯಾತ ಸಂವಿಧಾನ ವಿಧಿ ಉಲ್ಲಂಘಿಸುವ ಎಲ್ಲಾ ಸಂಘಟನೆಗಳನ್ನೂ ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆ.

    First published: