• Home
  • »
  • News
  • »
  • state
  • »
  • Cyber Crime: ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿರೋ ಗ್ರಾಹಕರೇ ಹುಷಾರ್​​! ಬರೋಬ್ಬರಿ 14 ಲಕ್ಷ ಹಣ ವಂಚಿಸಿದ ಆರೋಪಿ ಅರೆಸ್ಟ್​

Cyber Crime: ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿರೋ ಗ್ರಾಹಕರೇ ಹುಷಾರ್​​! ಬರೋಬ್ಬರಿ 14 ಲಕ್ಷ ಹಣ ವಂಚಿಸಿದ ಆರೋಪಿ ಅರೆಸ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪೊಲೀಸರು ಜನಸಾಮಾನ್ಯರಿಗೆ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಈ ನಡುವೆ ವಂಚಕರು ಬೇರೆ ಬೇರೆ ಮಾರ್ಗಗಳನ್ನು ಬಳಸಿಕೊಂಡು ವಂಚನೆ ಮಾಡುವತ್ತಿದ್ದಾರೆ.

  • Share this:

ಬೆಂಗಳೂರು: ಸೈಬರ್ ವಂಚನೆ (Cyber Crime) ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪೊಲೀಸರು (Police) ಜನಸಾಮಾನ್ಯರಿಗೆ ವಂಚನೆಗಳ ಬಗ್ಗೆ ಜಾಗೃತಿ (Cyber Crime Awareness) ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಈ ನಡುವೆ ವಂಚಕರು ಬೇರೆ ಬೇರೆ ಮಾರ್ಗಗಳನ್ನು ಬಳಸಿಕೊಂಡು ವಂಚನೆ ಮಾಡುವತ್ತಿದ್ದಾರೆ. ಅದರಲ್ಲೂ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಕೆಲಸ ಕಂಪನಿಗಳ ಕೆಲಸಗಾರರೇ ಸಂಸ್ಥೆಗೆ ತಿಳಿಯದಂತೆ ವಂಚನೆಗೆ ಇಳಿದಿದ್ದು, ಲಕ್ಷ ಲಕ್ಷ ಹಣವನ್ನು ದೋಚುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇಂತಹದ್ದೇ ಒಂದು ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಸೈಬರ್​​ ಪೊಲೀಸರು (Bangalore Cyber Crime Division) ಆರೋಪಿಯೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಯ ಖತರ್ನಾಕ್​​​ ಪ್ಲ್ಯಾನ್ ಕೇಳಿ ಪೊಲೀಸರಿಗೆ ಶಾಕ್​ ಆಗಿದ್ದಾರೆ.


ಹೌದು, ವಿಕಾಸ್​ ಬಂಧಿತ ಆರೋಪಿಸಿದ್ದಾನೆ. ಈ ಬಜಾಜ್​​ ಫೈನಾನ್ಸ್​ ಕಾರ್ಡ್​​ನಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಪೊಲೀಸರಿಂದ ಖತರ್ನಾಕ್ ಆರೋಪಿ ಬಂಧನ ಮಾಡಿದ್ದಾರೆ. ಆ ಮೂಲಕ ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿರುವ ಗ್ರಾಹಕರೇ ಎಚ್ಚರವಾಗಿರಿ ಅಂತ ತಿಳಿಸಿದ್ದಾರೆ.


ಬಂಧಿತ ಆರೋಪಿ ವಿಕಾಸ್​


ಇದನ್ನೂ ಓದಿ: Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು


ಖತರ್ನಾಕ್​ ವಂಚಕನ ಕೃತ್ಯ ಹೇಗಿತ್ತು ಗೊತ್ತಾ?


ಬಜಾಜ್ ಫೈನಾನ್ಸ್ ಕಾರ್ಡ್ ಕೆಲಸಗಾರ ವಿಕಾಸ್ ಬಂಧಿತ ಆರೋಪಿಯಾಗಿದ್ದು, ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನು ಟಾರ್ಗೆಟ್​ ಮಾಡುತ್ತಿದ್ದ. ಹಳೆಯ ಗ್ರಾಹಕರ ಡಿಟೇಲ್ಸ್​​ ಕೊಟ್ಟು ಹೊಸ ಸಿಮ್ ಖರೀದಿ ಮಾಡುತ್ತಿದ್ದ. ನಂತರ ಅದೇ ಸಿಮ್ ಕಾರ್ಡ್ ಬಳಸಿ ಬಜಾಜ್ ಕಾರ್ಡ್ ಖರೀದಿ ಮಾಡ್ತಿದ್ದನಂತೆ. ಈ ಕಾರ್ಡ್​ ಬಳಕೆ ಮಾಡಿಕೊಂಡು ಅಮೆಜಾನ್​​ ನಲ್ಲಿ ಬೆಲೆಬಾಳುವ ಮೊಬೈಲ್​ ಖರೀದಿ ಮಾಡುತ್ತಿದ್ದನಂತೆ.


ಬರೋಬ್ಬರಿ 14 ಲಕ್ಷ ರೂಪಾಯಿಗೂ ಅಧಿಕ ಹಣ ವಂಚನೆ


ಮೊಬೈಲ್​​ ಖರೀದಿ ಮಾಡಿದ ಬಳಿಕ ಬೆಲೆಬಾಳುವ ಮೊಬೈಲ್​ಗಳನ್ನು ಓಎಲ್​ಎಕ್ಸ್ ನಲ್ಲಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಬರೊಬ್ಬರಿ 14 ಲಕ್ಷ ರೂಪಾಯಿ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಕುರಿತಂತೆ ಬಜಾಜ್ ಕಂಪನಿಯೇ ದೂರು ನೀಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿ ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ. ಇನ್ನು ಆರೋಪಿಯ ವಿಚಾರಣೆ ವೇಳೆ ಆತನ ವಿರುದ್ಧ ಪುಣೆಯ ವಿಮಂತಲ ಠಾಣೆಯಲ್ಲೂ ಪ್ರಕರಣ ದಾಖಲಾಗಿರುವ ಕುರಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.


ಇದನ್ನೂ ಓದಿ: Cyber Crime: ಹುಡುಗರೇ ಎಚ್ಚರ! ಸುಂದರವಾದ ಹುಡುಗಿಯ ಫೋಟೋ ನೋಡಿ ಮೆಸೇಜ್​ ಮಾಡಿದ್ರೆ ಬ್ಯಾಂಕ್​ನಲ್ಲಿದ್ದ ಹಣ ಗುಳುಂ


ಪುಣೆಯಲ್ಲೂ ಖತರ್ನಾಕ್​ ಕಳ್ಳತನ ಕರಾಮತ್ತು


ಪುಣೆಯಲ್ಲಿ ಇದೇ ರೀತಿ ವಂಚನೆ ಮಾಡುತ್ತಿದ್ದ ಆರೋಪಿ ವಿಕಾಸ್, ಬೆಂಗಳೂರಿಗೆ ಬಂದು ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಲ್ಲಿ ತನ್ನ ವಂಚನೆ ಜಾಲವನ್ನು ವಿಸ್ತರಿಸಿದ್ದನಂತೆ. ಸದ್ಯ ಕೇಂದ್ರ ವಿಭಾಗದ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾರೆ.


ಕಾಟನ್ ಪೇಟೆ ಪೊಲೀಸ್ ಠಾಣೆ


ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿ ಸಾವು


ಬೆಂಗಳೂರಿನ ‌ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿ ಬಂದಿದ್ದು, ಕಾಟನ್ ಪೇಟೆ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ವಿನೋದ್ ಎಂಬಾತ ಪೊಲೀಸ್ ಠಾಣೆಯಲ್ಲಿ ಮೃತ್ತಪಟ್ಟಿದ್ದಾನೆ. ಆರೋಪಿ ವಿರುದ್ಧ NBW ಜಾರಿ ಹಿನ್ನಲೆ ನಿನ್ನೆ ಸಂಜೆ ಠಾಣೆಗೆ ಆತನನ್ನು ಪೊಲೀಸರು ಕರೆತಂದಿದ್ದರು. ಮುಂಜಾನೆ ಸಮಯದಲ್ಲಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆರೋಪಿ ಕಂಡು ಬಂದಿದ್ದಾನೆ.


ಕೂಡಲೇ ಪೊಲೀಸರು, ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪರಿಶೀಲನೆ ವೇಳೆ ಆತನ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಕಸ್ಟೋಡಿಯಲ್ ಡೆತ್ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣವನ್ನ ಸಿಐಡಿಗೆ ಹಂಸ್ತಾತರಿಸಿದ್ದಾರೆ ಎಂದು ಪಶ್ಚಿಮ ವಿಭಾಗ‌ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

Published by:Sumanth SN
First published: