news18-kannada Updated:December 24, 2020, 10:07 PM IST
ಸಾವಯವ ಕೃಷಿ ಮಾಡಿದ ಬೈಲಹೊಂಗಲ ಎಎಸ್ಪಿ
ಬೆಳಗಾವಿ(ಡಿಸೆಂಬರ್. 24): ಬಂದೋಬಸ್ತ್, ರೌಂಡ್ಸ್, ಸ್ಟೇಷನ್ ಡ್ಯೂಟಿ, ವಿಐಪಿ ಭದ್ರತೆ ಹೀಗೆ ವರ್ಷವಿಡಿ ಪೊಲೀಸ್ ಸಿಬ್ಬಂದಿ ಬ್ಯೂಸಿ ಇರುತ್ತಾರೆ. ಜತೆಗೆ ಹಬ್ಬ, ಉತ್ಸವ ಬಂದ್ರೆ ಇವರ ಕೆಲಸ ಮತ್ತಷ್ಟು ಜಾಸ್ತಿ ಆಗುತ್ತೆ. ಇಷ್ಟೆಲ್ಲ ಬ್ಯೂಸಿ ನಡುವೆ ಓರ್ವ ಅಧಿಕಾರಿ ಮಾತ್ರ ಸಮಯ ಮಾಡಿಕೊಂಡು ಪೊಲೀಸ್ ಕ್ವಾರ್ಟರ್ಸ್ ಬಳಿಯಲ್ಲಿ ಕೃಷಿ ಮಾಡಿದ್ದಾರೆ. ಅಲ್ಲಿ ಸಾವಯವ ತರಕಾರಿ ಬೆಳೆಯುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅಧಿಕಾರ ಈ ಉತ್ಸಹಕ್ಕೆ ಸಿಬ್ಬಂದಿ ಸಾಥ್ ನೀಡಿದ್ದು ವಿಶೇಷ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಎಎಸ್ಪಿ ಆಗಿ ಪ್ರದೀಪ್ ಗುಂಟಿ ಕಳೆದ ಅನೇಕ ತಿಂಗಳಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಕರ್ತವ್ಯ ಜತೆಗೆ ಸಾವಯವ ಕೃಷಿಯ ಮೂಲಕ ಎಲ್ಲಾರಿಗೂ ಮಾದರಿಯಾಗಿದ್ದಾರೆ. ಕಳೆದ ಆರು ತಿಂಗಳಿಂದ ವಸಗಿ ಗೃಹ ಬಳಿಯ ಒಂದೂವರೆ ಎಕರೆ ಪ್ರದೇಶದಲ್ಲಿ ಕೃಷಿ ಆರಂಭಿಸಿದ್ದಾರೆ. ಪ್ರಮುಖವಾಗಿ ಸಾವಯವ ತರಕಾರಿ ಬೆಳೆಯಲು ಆರಂಭಿಸಿದ್ದಾರೆ. ಕಡಿಮೆ ಜಮೀನಿನಲ್ಲಿ 8 ಭಾಗ ಮಾಡಿದ್ದು, ಬೇರೆ ಬೇರೆ ತರಕಾರಿ ಬೆಳೆಯಲು ಆರಂಭಿಸಿದ್ದಾರೆ.
ಇದೀಗ ಬದನೆಕಾಯಿ, ಟೊಮೇಟೊ, ಈರುಳ್ಳಿ, ಬೆಂಡೆಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಮೆಣಸಿನಕಾಯಿ ಬೆಳೆ ಬಂದಿದೆ. ಇಲ್ಲಿ ಬೆಳದ ತರಕಾರಿಗಳನ್ನು ಎಎಸ್ಪಿ ಹಾಗೂ ಸಿಬ್ಬಂದಿ ಕುಟುಂಬದ ಸದಸ್ಯರು ಬಳಸುತ್ತಿದ್ದಾರೆ. ಯಾವುದೇ ರಾಸಾಯನಿಕ ವಸ್ತು ಬಳಸದೇ ಇಲ್ಲಿ ಕೃಷಿ ಮಾಡಲಾಗುತ್ತಿದೆ. ಈಗಾಗಲೇ ಹಲವು ಸಲ ತರಕಾರಿ ಕಟಾವ್ ಮಾಡಲಾಗಿದೆ. ಜತೆಗೆ ಬೇರೆ ತರಕಾರಿ ಬೆಳೆಯುವ ಪ್ರಯೋಗ ಸಹ ಮಾಡಲಾಗಿದೆ. ಇಡೀ ವಸತಿ ಗೃಹದ ಬಡಾವಣೆ ಪ್ರದೀಪ್ ಹೊಸ ರೂಪ ಕೊಟ್ಟಿದ್ದಾರೆ. ಇದು ಸಹಜವಾಗಿ ಸಿಬ್ಬಂದಿಯ ಸಂತೋಷಕ್ಕೆ ಕಾರಣವಾಗಿದೆ.
ಇದನ್ನೂ ಓದಿ :
ಅವಿರೋಧ ಆಯ್ಕೆಯಾಗುವ ಗ್ರಾ.ಪಂ.ಗೆ 1 ಕೋಟಿ : ಕೆಕೆಆರ್ಡಿಬಿ ಅಧ್ಯಕ್ಷ ರೇವೂರ ವಿರುದ್ಧ ಎಫ್ಐಆರ್
ಎಎಸ್ಪಿ ಪ್ರದೀಪ್ ಗುಂಟಿಗೆ ಅವರ ಹೆಂಡತಿ ಸಹ ಕೃಷಿ ಕೆಲಸದಲ್ಲಿ ಸಾಥ್ ನೀಡಿದ್ದಾರೆ. ಪಾಳು ಬಿದ್ದಿದ್ದ ಜಮೀನನ್ನು ಜೆಸಿಬಿ ಮೂಲಕ ಹದಗೊಳಿಸಿ ಕೃಷಿ ಕೆಲಸ ಆರಂಭಿಸಿದ್ದಾರೆ ಸಾವಯವ ಕೃಷಿಗೆ ಸ್ಥಳೀಯ ಸಿಪಿಐ ಹಾಗೂ ಪಿಎಸ್ಐ ಸೇರಿ ಅನೇಕ ಸಿಬ್ಬಂದಿ ಸಾಥ್ ನೀಡಿದ್ದಾರೆ. ಸಿಬ್ಬಂದಿಗಳ ಸಹ ತಮ್ಮ ಮನೆ ಸುತ್ತಮುತ್ತ ಪ್ರದೇಶದಲ್ಲಿ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ. ಪೊಲೀಸ್ ಸಿಬ್ಬಂದಿ ಕುಟುಂಬಸ್ಥರು ಸಹ ಸಾಥ್ ನೀಡುತ್ತಿದ್ದಾರೆ. ಅಲ್ಪ ಬಿಡುವಿನ ಸಮಯದಲ್ಲಿ ಕೈತೋಟದಲ್ಲಿ ಕೆಲಸ ಮಾಡುವ ಮೂಲಕ ತೃಪ್ತಿ ಪಡುತ್ತಿದ್ದಾರೆ.
ಸಾವಯವ ಆಹಾರ ಬಳಕೆಯಿಂದ ಅನೇಕ ಉಪಯೋಗ ಮನಷ್ಯನಿಗೆ ಇದೆ. ಇದನ್ನು ತಿಳಿದ ಎಎಸ್ಪಿ ತಾವು ಅಷ್ಟೇ ಅಲ್ಲದೆ ತಮ್ಮ ಎಲ್ಲಾ ಸಿಬ್ಬಂದಿಗು ಉತ್ತಮ ಆಹಾರದ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಸದಾ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದುಡಿಯುವ ಪೊಲೀಸರು ಸಹ ಯಶಸ್ವಿ ಕೃಷಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
Published by:
G Hareeshkumar
First published:
December 24, 2020, 9:22 PM IST