• Home
  • »
  • News
  • »
  • state
  • »
  • PFI, SDPI ಮುಖಂಡರಿಗೆ ಷರತ್ತು ಬದ್ಧ ಜಾಮೀನು ಮಂಜೂರು; ಪೊಲೀಸರ ಬಲೆಗೆ ಬೀಳದ ನವೀದ್ ಕಟಗಿ

PFI, SDPI ಮುಖಂಡರಿಗೆ ಷರತ್ತು ಬದ್ಧ ಜಾಮೀನು ಮಂಜೂರು; ಪೊಲೀಸರ ಬಲೆಗೆ ಬೀಳದ ನವೀದ್ ಕಟಗಿ

ಷರತ್ತು ಬದ್ಧ ಜಾಮೀನು ಮಂಜೂರು

ಷರತ್ತು ಬದ್ಧ ಜಾಮೀನು ಮಂಜೂರು

ಈ ಏಳು ಜನರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾದಿ.  ಅಲ್ಲದೇ ತಲಾ ಒಬ್ಬರಿಗೆ 50 ಸಾವಿರ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.

  • Share this:

ಬೆಳಗಾವಿ: ದೇಶಾದ್ಯಂತ ಪಿಎಫ್ಐ (PFI Ban) ಸೇರಿ ಹಲವು ಸಂಘಟನೆಗಳ ಬ್ಯಾನ್ ಬಳಿಕ ಮತ್ತೆ ಮಂಗಳೂರಿನಲ್ಲಿ (Mangaluru) ಬರಹ ಸಂಚಲನ ಮೂಡಿಸಿದೆ. ಈ ಮಧ್ಯೆ ಬೆಳಗಾವಿಯಲ್ಲಿ (Belagavi) ಅರೆಸ್ಟ್ ಆಗಿದ್ದ ಏಳು ಜನರಿಗೂ ಈಗ ಜಾಮೀನು (Bail) ಮಂಜೂರಾಗಿದೆ. ಆದ್ರೆ ಈವರೆಗೂ ಪಿಎಫ್​​ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ (Naveed Katagi) ಬಂಧಿಸುವಲ್ಲಿ ಬೆಳಗಾವಿ ಪೊಲೀಸರು (Belagavi Police) ಸಫಲರಾಗಿಲ್ಲ. ದೇಶದ ಆಂತರಿಕ ಭದ್ರತೆ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ (Central Government) ಪಿಎಫ್ಐ ಸೇರಿ ಅದರ ಅಂಗ ಸಂಸ್ಥೆಗಳನ್ನ ಐದು ವರ್ಷ ಬ್ಯಾನ್ ಮಾಡಿದೆ.


ದೇಶಾದ್ಯಂತ NIA ಅಂದ್ರೆ ರಾಷ್ಟ್ರೀಯ ಭದ್ರತಾದಳ ಕಾರ್ಯಾಚರಣೆ ನಡೆಸಿ ಅನೇಕ ಪಿಎಫ್ಐ ಸಂಘಟನೆಗಳ ಮುಖಂಡರನ್ನ ಬಂಧಿಸಿ, ತೀವ್ರ ವಿಚಾರಣೆ ಮುಂದುವರಿಸಿದೆ. ಅದರಲ್ಲೂ ರಾಜ್ಯದಲ್ಲಿ NIA ದಾಳಿ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಪೊಲೀಸರು ಸಹ ಸೆಪ್ಟೆಂಬರ್24 ರಂದು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಮುಖಂಡರು, ಕಾರ್ಯಕರ್ತರನ್ನ ಬಂಧಿಸಿ ಜೈಲಿಗೆ ಅಟ್ಟಿದ್ದರು.


ಏಳು ಜನರಿಗೆ ಜಾಮೀನು ಮಂಜೂರು


ಬೆಳಗಾವಿ ನಗರ ಪೊಲೀಸರು ಸಹ ಪಿಎಫ್ಐ ಮತ್ತು ಎಸ್ ಡಿ ಪಿ ಐ ಸಂಘಟನೆ ಒಟ್ಟು 7 ಜನರನ್ನ ಬಂಧಿಸಿದ್ದರು.  ಬೆಳಗಾವಿ ಜಿಲ್ಲಾ ಪೊಲೀಸರು ಓರ್ವನನ್ನ ಬಂಧಿಸಿದ್ದರು.  ಒಂದು ವಾರದ ಬಳಿಕ  ನಿಷೇಧಿತ ಪಿಎಫ್ಐ ಕಾರ್ಯಕರ್ತರಿಗೆ ಜಾಮೀನು ಮಂಜೂರಾಗಿದೆ.


ಈ ಏಳು ಜನರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾದಿ.  ಅಲ್ಲದೇ ತಲಾ ಒಬ್ಬರಿಗೆ 50 ಸಾವಿರ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.


ಸಿಆರ್‌ಪಿಸಿ 110 ಸೆಕ್ಷನ್ ಅಡಿ ಬಂಧನ ಆಗಿತ್ತು


ಬೆಳಗಾವಿಯಲ್ಲಿ ಅರೆಸ್ಟ್ ಆದ ಆಜಂ ನಗರ ನಿವಾಸಿ PFI ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ ಮತ್ತು ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ ಹಾಗೂ ಮುಖಂಡರಾದ ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ,  ಬೆಳಗಾವಿಯ ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ಬೆಳಗಾವಿಯ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಅವರನ್ನ ಸಿಆರ್‌ಪಿಸಿ 110 ಸೆಕ್ಷನ್ ಅಡಿ ಬಂಧಿಸಿ ಜೈಲಿಗಟ್ಟಿದ್ದರು.


ಇದನ್ನೂ ಓದಿ: VR Sudarshan Resign: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ ಆರ್ ಸುದರ್ಶನ್ ರಾಜೀನಾಮೆ, ಕಾರಣ ಏನು?


ನವೀದ್ ಕಟಗಿ ಬಂಧನಕ್ಕಾಗಿ ಪೊಲೀಸರ ಬಲೆ


ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ದಾಳಿ ನಡೆಸಿ ಸಮಾಜ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮವನ್ನ ಪೊಲೀಸರು ಕೈಗೊಂಡಿದ್ದರು. ಆದರೆ ಈ ದಾಳಿ ಸುಳಿವು ಸಿಕ್ಕಿದ್ದರಿಂದ ಎಸ್ಕೇಪ್ ಆಗಿದ್ದ ನಿಷೇಧಿತ ಪಿಎಫ್ಐ ‌ಜಿಲ್ಲಾಧ್ಯಕ್ಷ ನವೀದ್ ‌ಕಟಗಿಯನ್ನ ಈವರೆಗೂ ಬಂಧಿಸಲು ಪೊಲೀಸರಿಂದ ಸಾಧ್ಯವಾಗಿಲ್ಲ.


ಜಾಮೀನು ಸಿಕ್ರೂ ಎಲ್ಲರ ಮೇಲೆ ಪೊಲೀಸರ ಹದ್ದಿನ ಕಣ್ಣು


ಮಹಾರಾಷ್ಟ್ರ ಇಲ್ಲವೇ ಗೋವಾ ರಾಜ್ಯದಲ್ಲಿ ತಲೆ ಮರೆಸಿಕೊಂಡಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಈಗ ಪಿಎಫ್ಐ ಸಂಘಟನೆ ಬ್ಯಾನ್ ಆಗಿದೆ. NIA ತನ್ನ ತನಿಖೆಯನ್ನ ಮುಂದುವರಿಸಿದ್ದು, ಈ ಮಧ್ಯೆ ಬೆಳಗಾವಿ ಪೊಲೀಸರು ಬಂಧಿಸಿದ ಪಿಎಫ್ಐ ಮತ್ತು ಎಸ್​ಡಿಪಿಐ ಸಂಘಟನೆ ಮುಖಂಡರಿಗೆ ಜಾಮೀನು ಸಿಕ್ಕಿದೆ. ಆದ್ರು ಇವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.


ಇದನ್ನೂ ಓದಿ:  Chikkamagaluru: ಸರ್ಕಾರಕ್ಕೆ ಸೆಡ್ಡು ಹೊಡೆದು ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ; ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೇ ಅನ್ನದ ಜನಪ್ರತಿನಿಧಿಗಳು!


PFI ಪುಂಡರ ಎಚ್ಚರಿಕೆ


ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ ಮೇಲೆ ಪಿಎಫ್ಐ ಹೆಸರಿನಲ್ಲಿ ಎಚ್ಚರಿಕೆಯ ಬರಹ ಬರೆಯಲಾಗಿದೆ. ಚಡ್ಡಿಗಳೇ ಎಚ್ಚರ, ಪಿಎಫ್ಐ ನಾವು ಮರಳಿ ಬರುತ್ತದೆ ಅಂತಾ ಬರೆಯಲಾಗಿದೆ. ತಡ ರಾತ್ರಿ ಈ ಬರಹ ಬರೆಯಲಾಗಿದ್ದು, ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಪೂಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಬರಹವನ್ನು ಅಳಿಸಿ ಹಾಕಿದ್ದಾರೆ.

Published by:Mahmadrafik K
First published: