ಭಾಷಣದ ವೇಳೆ ಮಾವನನ್ನ ನೆನೆದು ಕಣ್ಣೀರಿಟ್ಟ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ್

news18
Updated:February 14, 2018, 9:38 PM IST
ಭಾಷಣದ ವೇಳೆ ಮಾವನನ್ನ ನೆನೆದು ಕಣ್ಣೀರಿಟ್ಟ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ್
ವೀಣಾ ಕಾಶಪ್ಪನವರ್
news18
Updated: February 14, 2018, 9:38 PM IST
- ಆನಂದ್ ಡಿ., ನ್ಯೂಸ್ 18 ಕನ್ನಡ

ಬಾಗಲಕೋಟೆ(ಫೆ. 14):  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರು ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿ, ಗದ್ಗದಿಸುತ್ತಾ ಮಾತನಾಡಿದ ಘಟನೆ ಇಳಕಲ್ ಪಟ್ಟಣದಲ್ಲಿ ನಡೆಯಿತು.

ಇಳಕಲ್​ನ ನೂತನ ತಾಲೂಕು ಕೇಂದ್ರದ ಪ್ರಾರಂಭೋತ್ಸವಕ್ಕೆ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿತ್ತು.  ಜ್ಯೋತಿ ಬೆಳಗಿದ ನಂತರ  ಮಾತನಾಡಿದ ಅವರು,  ಮಾವನವರಾದ ದಿವಗಂತ ಎಸ್​.ಆರ್ ಕಾಶಪ್ಪನವರ ಅವರ ನೆನೆಪು ತೆಗೆದು, ಅವರು ಸಚಿವರಾದ ಕಾಲದಲ್ಲಿ ಇಲಕಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ತಾಲೂಕು ಕೇಂದ್ರದ ಘೋಷಣೆ ಮಾಡಿಕೊಂಡು ಬರುವುದಾಗಿ ಹೇಳಿ ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟರು. ಅವರ ಆಸೆಯಂತೆ ಈಗ ಇಲಕಲ್ಲ ಪಟ್ಟಣ ತಾಲೂಕ ಕೇಂದ್ರವಾಗಿದೆ ಎಂದು ಪ್ರಸಂಗವೊಂದನ್ನು ನೆನೆದು ಕಣ್ಣೀರು ಹಾಕಿ ಗದ್ಗದಿತರಾದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ, ಸ್ಥಳೀಯ ವಿಜಯ ಮಹಾಂತ ಶ್ರೀಗಳು ಇತರರು ಉಪಸ್ಥಿತಿರಿದ್ದು, ಕೆಲ ಸಮಯ ಸಮಾರಂಭದಲ್ಲಿ ಮೌನ ಆವರಿಸಿದಂತಾಗಿತು.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ