ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಕಗ್ಗಂಟು; ಕಾರ್ಖಾನೆ ಎದುರು ರೈತರು ಪ್ರತಿಭಟನೆ

ಬಾದಾಮಿ ತಹಶೀಲ್ದಾರ್ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬಾಕಿ ಬಿಲ್ ಇತ್ಯರ್ಥವಾಗದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು‌.

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

  • Share this:
ಬಾಗಲಕೋಟೆ(ಅಕ್ಟೋಬರ್ 12): ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಬಿಲ್ ಗೆ ಆಗ್ರಹಿಸಿ ಸಕ್ಕರೆ ಕಾರ್ಖಾನೆ ಎದುರು ರೈತರು  ಅಮರಣಾಂತ ಉಪವಾಸ ಸತ್ಯಾಗ್ರಹದ ವೇಳೆ ರೈತರು ಕಾರ್ಖಾನೆ ಒಳ ಪ್ರವೇಶಿಸಲು ಮುಂದಾದಾಗ ರೈತರು, ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ಕೇದಾರನಾಥ ಸಕ್ಕರೆ ಕಾರ್ಖಾನೆಗೆ 2010-11ರಲ್ಲಿ ಕಬ್ಬು ಪೂರೈಸಿದ ರೈತರಿಗೆ 14.59ಕೋಟಿ ಬಾಕಿ ಬಿಲ್ ಕೊಡಬೇಕಿದೆ. ಕಳೆದ 10ವರ್ಷಗಳಿಂದ ಕಾರ್ಖಾನೆ ಬಂದ್ ಆಗಿತ್ತು. ಈಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯು ಮುಂಬೈ ಕೋರ್ಟ್ ಆದೇಶದಂತೆ ಖರೀದಿಸಿದ್ದು, ಕಾರ್ಖಾನೆ ಪುನರಾರಂಭಕ್ಕೆ ಸಿದ್ಧತೆ ನಡೆದಿದೆ. 10ವರ್ಷದ ಹಿಂದೆ ಕಬ್ಬು ಪೂರೈಸಿದ ರೈತರು ಬಾಕಿ ಬಿಲ್ ಗಾಗಿ ಸೋಮವಾರದಿಂದ ಕಾರ್ಖಾನೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು.

ಬೆಳಿಗ್ಗೆಯಿಂದ  ಬಾದಾಮಿ  ತಹಶೀಲ್ದಾರ್ ಎಸ್ ಎಸ್ ಇಂಗಳೆ  ರೈತರ ಮನವೊಲಿಸಲು ಕಸರತ್ತು ನಡೆಸಿದ್ರೂ ಯಶಸ್ವಿಯಾಗಿರಲಿಲ್ಲ. ಸಂಜೆ  ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಸ್ಥಳಕ್ಕಾಗಮಿಸಿ ಕೋರ್ಟ್ ಆದೇಶದಂತೆ ಬಾಕಿ ಬಿಲ್ ಕೋರ್ಟ್ ನಲ್ಲಿ ಭರಿಸುತ್ತೇವೆ. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಬಾಕಿ ಬಿಲ್ ಕೊಡುವ ವ್ಯವಸ್ಥೆ ಆಗಲಿದೆ ಎಂದಿದ್ದಾರೆ. ಈ ವೇಳೆ ಬಾದಾಮಿ ತಹಶೀಲ್ದಾರ್ ಎಸ್ ಎಸ್ ಎರಡ್ಮೂರು ದಿನದೊಳಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ ಬಳಿಕ  ರಾತ್ರಿ 7ಗಂಟೆಗೆ ರೈತರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಇನ್ನು ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಬಿಲ್ ಕಗ್ಗಂಟು ಮುಂದುವರೆದಿದ್ದು.ಬಾಕಿ ಬಿಲ್ ಕೊಡುವವರಿಗೆ ಸಕ್ಕರೆ ಕಾರ್ಖಾನೆ ಪುನರಾರಂಭ, ದುರಸ್ತಿ ಕಾರ್ಯ ಮಾಡಬೇಡಿ. ಸಕ್ಕರೆ ಕಾರ್ಖಾನೆ ಮಾರಾಟದ ಬಗ್ಗೆ ದಾಖಲೆ ಕೊಡಿ ಎಂದು ರೈತರ ಪಟ್ಟು ಹಿಡಿದಿದ್ದರು. ರೈತರಿಗೆ ಬಾಕಿ ಬಿಲ್  ಕೊಟ್ಟ ಬಳಿಕ ಕಾರ್ಖಾನೆ ಪುನರಾರಂಭಿಸಲಿ ಎಂದು ಇದೇ ವೇಳೆ ರೈತರು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಯ ಶೂಟೌಟ್ ಪ್ರಕರಣ; ಆರೋಪಿಗಳ ಬಂಧನ – ಕೊಲೆಯ ಹಿಂದಿದೆಯಾ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ?

2010-11ರಲ್ಲಿ ಕೇದಾರನಾಥ ಸಕ್ಕರೆ ಕಾರ್ಖಾನೆ, ಅಗ್ರೋ ಪ್ರೊಡೆಕ್ಟ್ ಲಿ. ಮಾಲೀಕರಾಗಿದ್ದ ವಿಕ್ರಮ ಸಿಂಹ ಅಪರಾಧ ಕೌಟುಂಬಿಕ ಕಲಹ, ಕಾರ್ಖಾನೆ ಆರ್ಥಿಕ ಮುಗ್ಗಟ್ಟು, ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಕ್ಕೆ ಆಡಳಿತ ಮಂಡಳಿ ಬಿಕ್ಕಟ್ಟಿನಿಂದ ಬಂದ್ ಆಗಿತ್ತು. ಕಾರ್ಖಾನೆಗೆ 10ವರ್ಷದ ಹಿಂದೆ ಕಬ್ಬು ಪೂರೈಸಿದ ರೈತ ಮಹಿಳೆ ಬಿಲ್ ಗಾಗಿ ಅಳಲು ತೋಡಿಕೊಂಡಳು. ತನ್ನ ಪತಿ ಕಾರ್ಖಾನೆ ಬಿಲ್ ಕೊಡದೇ ಬಂದ್ ಆಗಿರುವ ವಿಚಾರ ಕೇಳಿ ಅಸುನೀಗಿದ್ದರು.

ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೂ ಸಕಾಲಕ್ಕೆ ಬಿಲ್ ಬರುತ್ತಿಲ್ಲ.ಕಾರ್ಖಾನೆಯವರು ಬಿಲ್ ಕೊಡುವವರೆಗೆ ಹೋರಾಡುತ್ತೇವೆ ಎಂದರು. ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಬಿಲ್ ಕೊಟ್ಟು ಸಕ್ಕರೆ ಕಾರ್ಖಾನೆ ಆರಂಭಿಸಲಿ, ರೈತರು ಸಹಕಾರ ಕೊಡುತ್ತೇವೆ  ಎಂದು ರೈತ ಮುಖಂಡ ಈರಪ್ಪ ಹಂಚಿನಾಳ ಹೇಳಿದರು.

ಬಾದಾಮಿ ತಹಶೀಲ್ದಾರ್ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬಾಕಿ ಬಿಲ್ ಇತ್ಯರ್ಥವಾಗದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು‌.

ಒಟ್ಟಿನಲ್ಲಿ  ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಬಿಲ್ ಕಗ್ಗಂಟು ಬಗೆಹರಿದು, ಸಕ್ಕರೆ ಕಾರ್ಖಾನೆ ಆರಂಭವಾದರೆ ನಿರುದ್ಯೋಗಿ ಯುವಕರಿಗೆ ಉದ್ಯೋಗ, ಜೊತೆಗೆ ಕಬ್ಬು ಬೆಳೆದ ರೈತರಿಗೆ ಅನುಕೂಲವಾಗಲಿದೆ.ಆದಷ್ಟು ಬೇಗ ಬಾಕಿ ಬಿಲ್ ಬಗೆಹರಿಲಿ ಎನ್ನುವುದು ಕಬ್ಬು ಪೂರೈಸಿದ ರೈತರ ಆಶಯ.
Published by:Latha CG
First published: