Womens Day: ಗ್ರಾಮೀಣ ಮಹಿಳೆಯರ ಮಾನಸಿಕ ಸ್ವಾಸ್ಥ ಕಾಪಾಡಲು ಸದ್ದಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ ಈ ಆಪ್ತ ಸಮಾಲೋಚಕಿ ಶೈಲಜಾ!!

ಇಲ್ಲೊಬ್ಬರು ಮಹಿಳೆ ಕೂಡ ಗ್ರಾಮೀಣ ಪ್ರದೇಶದ ಮಹಿಳೆಯರ ಮಾನಸಿಕ ಆರೋಗ್ಯಕ್ಕಾಗಿ ಸದ್ದಿಲ್ಲದಂತೆ ಕೆಲಸ ಮಾಡುತ್ತಾ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ

ಇಲ್ಲೊಬ್ಬರು ಮಹಿಳೆ ಕೂಡ ಗ್ರಾಮೀಣ ಪ್ರದೇಶದ ಮಹಿಳೆಯರ ಮಾನಸಿಕ ಆರೋಗ್ಯಕ್ಕಾಗಿ ಸದ್ದಿಲ್ಲದಂತೆ ಕೆಲಸ ಮಾಡುತ್ತಾ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ

ಇಲ್ಲೊಬ್ಬರು ಮಹಿಳೆ ಕೂಡ ಗ್ರಾಮೀಣ ಪ್ರದೇಶದ ಮಹಿಳೆಯರ ಮಾನಸಿಕ ಆರೋಗ್ಯಕ್ಕಾಗಿ ಸದ್ದಿಲ್ಲದಂತೆ ಕೆಲಸ ಮಾಡುತ್ತಾ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ

  • Share this:
ಬಾಗಲಕೋಟೆ (ಮಾ,08): ಮಹಿಳೆರ ಸಬಲೀಕರಣದಲ್ಲಿ ಅತಿ ಮುಖ್ಯವಾದ ಅಂಶ ಅವರ ಮಾನಸಿಕ ಆರೋಗ್ಯವನ್ನು ಸ್ಥಿರವಾಗಿಡುವುದು. ಇಂತಹ ಕೆಲಸ ನಡೆದಾಗಲೇ ಮಹಿಳೆ ಮತ್ತಷ್ಟು ಗಟ್ಟಿಯಾಗಲು ಸಾಧ್ಯ. ಇದೇ ರೀತಿ ಇಲ್ಲೊಬ್ಬರು ಮಹಿಳೆ ಕೂಡ ಗ್ರಾಮೀಣ ಪ್ರದೇಶದ ಮಹಿಳೆಯರ ಮಾನಸಿಕ ಆರೋಗ್ಯಕ್ಕಾಗಿ ಸದ್ದಿಲ್ಲದಂತೆ ಕೆಲಸ ಮಾಡುತ್ತಾ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಈ ಮೂಲಕ ನೊಂದ ಹೆಣ್ಣುಮಕ್ಕಳ ಪಾಲಿನ ಆಶಾಕಿರಣವಾಗಿದ್ದಾರೆ. ಅವರೇ ಆಪ್ತ ಸಮಾಲೋಚಕಿ ಶೈಲಜಾ ಜಿ.ಕೆ.  ಜಿಲ್ಲೆಯ ರೀಚ್ ಸಂಸ್ಥೆಯ ಆಪ್ತ ಸಮಾಲೋಚಕಿಯಾಗಿ ಶೈಲಜಾ ಜಿ ಕೆ,  ಕಳೆದ ಮೂರು ವರ್ಷಗಳಿಂದ  ಜಿಲ್ಲೆಯ ಸುತ್ತಮುತ್ತ  ತಾಲೂಕಿನ ಹಳ್ಳಿಗಳಲ್ಲಿ ಶಾಲಾ ಮಕ್ಕಳು, ಶಾಲೆಯಿಂದ ಹೊರಗುಳಿದ ಕಿಶೋರಿಯರು, ಹಾಗೂ ಮಹಿಳೆಯರಿಗೆ ಪ್ಯಾಡ್ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಬಾಲ್ಯವಿವಾಹ ತಡೆಗಟ್ಟುವಿಕೆ, ಪೋಷಕರಿಗೆ ಬಾಲಕಿಯರ ಕಲಿಕೆ ಮುಂದುವರಿಕೆಗೆ ಪ್ರೋತ್ಸಾಹ ನೀಡುತ್ತಾರೆ .ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು. ಜೊತೆಗೆ ಮಹಿಳೆ, ಬಾಲಕಿಯರ ವೈಯಕ್ತಿಕ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ  ಜಿಲ್ಲೆಯಲ್ಲಿ  32ಕಿಶೋರಿಯರ ಸಂಘ, 15ಮಹಿಳಾ ಸಂಘ ಸೇರಿ 600ಕ್ಕೂ ಕುಟುಂಬಗಳ ಮಹಿಳೆಯರು, ಕಿಶೋರಿಯರಿಗೆ ವೈಯಕ್ತಿಕ ಶುಚಿತ್ವ, ಮುಟ್ಟಿನ ಸಮಯದಲ್ಲಾಗುವ ಸಮಸ್ಯೆಗಳಿಗೆ ಸಭೆ ಮೂಲಕ ತಿಳಿಸಿಕೊಟ್ಟಿದ್ದಾರೆ. ಪ್ರತಿ ತಿಂಗಳು ನಡೆಯುವ ಕಿಶೋರಿಯರ ಗುಂಪುಗಳ  ಸಭೆಯಲ್ಲಿ ಕಿಶೋರಿಯರು, ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಾಗುವ ಸಮಸ್ಯೆ ಹಂಚಿಕೊಳುತ್ತಾರೆ. ಆಗ ಶೈಲಜಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಇನ್ನು ಮುಟ್ಟಿನ ವಿಚಾರವಾಗಿ ಹಳ್ಳಿಯಲ್ಲಿ  ಮೂಢನಂಬಿಕೆಗಳಿವೆ. ಅವುಗಳನ್ನು ಹೋಗಲಾಡಿಸುವಲ್ಲಿ ಕಿಶೋರಿಯರಿಗೆ, ಮಹಿಳೆಯರಿಗೆ  ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮುಟ್ಟು ಏನಿದರ ಗುಟ್ಟು ಎನ್ನುವ ಪುಸ್ತಕ ನೀಡಿ ಅದರ ಮೂಲಕ ಜಾಗೃತಿ ಮೂಡಿಸುತ್ತಾರೆ.

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆ, ಕಿಶೋರಿಯರಿಗೆ ಶುಚಿತ್ವ ಪ್ಯಾಡ್ ದೊರೆತಿರಲಿಲ್ಲ. ಆಗ ಶೈಲಜಾ ರೀಚ್ ಸಂಸ್ಥೆಯ ಮೂಲಕ ಪುನರ್ ಬಳಕೆ ಪ್ಯಾಡ್ ಗಳನ್ನು ಉಚಿತವಾಗಿ ಕಿಶೋರಿಯರಿಗೆ  ವಿತರಿಸಿದ್ದಾರೆ. ಶೈಲಜಾ ಅವರಿಗೆ ರೀಚ್ ಸಂಸ್ಥೆಯ ಸಿಬ್ಬಂದಿ ಕೂಡ ಬೆಂಬಲ ನೀಡುತ್ತಾರೆ. ಇನ್ನು ಹಳ್ಳಿಗಾಡಿನಲ್ಲಿನ ವೈಯಕ್ತಿಕ ಶುಚಿತ್ವ, ಹಾಗೂ ಬಾಲ್ಯ ವಿವಾಹ ತಡೆಗಟ್ಟುವಿಕೆ ಬಗ್ಗೆ ಕಾರ್ಯ ಮಾಡುತ್ತಿರುವುದು ಖುಷಿಯಿದೆ ಎನ್ನುತ್ತಾರೆ  ಆಪ್ತ ಸಮಾಲೋಚಕಿ ಶೈಲಜಾ ಜಿ ಕೆ.

ಇದನ್ನು ಓದಿ: ಟ್ವಿಟ್ಟರ್‌ನಲ್ಲಿ ಭಾರತೀಯ ಮಹಿಳೆಯರು ಚರ್ಚಿಸಲು ಇಷ್ಟಪಡುವ ವಿಚಾರಗಳು ಯಾವುವು ಗೊತ್ತಾ..?

ಇನ್ನು ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ದೊಡ್ಡವರಾದಾಗ ಆಚರಿಸುವ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಹೆಣ್ಣು ಮಕ್ಕಳಿಗೂ ಕೂಡ ಈ ಸಮಯದಲ್ಲಿ ಆಗುವ ದೇಹದಲ್ಲಿನ ಬದಲಾವಣೆ, ಅವರು ಯಾವ ರೀತಿ ಇದನ್ನು ಎದುರಿಸಬೇಕು ಎಂಬ ಬಗ್ಗೆ ಸಮಾಲೋಚನೆ ನೀಡುತ್ತಾರೆ. ಜೊತೆಗೆ ಪ್ಯಾಡ್​ ಬಳಕೆಗೆ ಉತ್ತೇಜನ ನೀಡುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ಸೀಮಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬರ್ನರ್ ಅಳವಡಿಸಿ, ಅದನ್ನು ಹೇಗೆ ಬಳಸಬೇಕು ಎಂಬುದನ್ನು ಶೈಲಜಾ ವಿದ್ಯಾರ್ಥಿಗಳಿಗೆ ಡೆಮೋ ಮೂಲಕ ತಿಳಿಸಿಕೊಟ್ಟಿದ್ದಾರೆ. ಇ

ಇಷ್ಟೇ ಅಲ್ಲದೇ, ನೂರಾರು ಬಾಲ್ಯ ವಿವಾಹ ತಡೆದು ಬಾಲಕಿಯರಿಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಮುಂದುವರೆಯಲು ಪೋಷಕರಿಗೆ ಮನವೊಲಿಸಿದ್ದಾರೆ.ಇನ್ನು ಶಾಲಾ ಬಾಲಕೀಯರು ಲೈಂಗಿಕ ದೌರ್ಜನ್ಯದಿಂದ ಪಾರಾಗಲು ರಕ್ಷಣಾ ತಂತ್ರ ತಿಳಿ ಹೇಳುತ್ತಾರೆ.ಇನ್ನು ಸಹಾಯವಾಣಿಗೆ ಕರೆ ಮೂಲಕ ಸಹಾಯ ಪಡೆಯಬಹುದಾಗಿದೆ ಎಂದು ಶಾಲಾ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
Published by:Seema R
First published: