NEET Exam Result: ರಾಜ್ಯಕ್ಕೆ ಕೀರ್ತಿ ತಂದ ಬಾಗಲಕೋಟೆ ವೈದ್ಯ ಡಾ. ಚಿದಾನಂದ.. ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ!

ರಾಷ್ಟ್ರಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. 2021-2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳಿಸಿದ್ದಾರೆ. ಡಾ. ಚಿದಾನದ ಕುಂಬಾರ ಬೆಳಗಲಿ ಹುಬ್ಬಳ್ಳಿ ಕಿಮ್ಸ್​ನಲ್ಲಿ ಎಮ್​ಬಿಬಿಎಸ್​(MBBS) ಮುಗಿಸಿದ್ದರು.

ಡಾ. ಚಿದಾನಂದ ಕಲ್ಲಪ್ಪ ಕುಂಬಾರ

ಡಾ. ಚಿದಾನಂದ ಕಲ್ಲಪ್ಪ ಕುಂಬಾರ

  • Share this:
ಮನಸ್ಸಿದ್ದರೆ ಮಾರ್ಗ..ಈ ಮಾತು ಇವರ ವಿಚಾರದಲ್ಲಿ ನೂರಕ್ಕೆ ನೂರು ಸತ್ಯ. ದೇಶ ಸುತ್ತಿ ನೋಡು ಕೋಶ ಓದಿ ನೋಡಿ ಎಂಬಂತೆ ಈ ವೈದ್ಯ ಕೂಡ ತಮ್ಮ ಕಠಿಣ ಶ್ರಮದಿಂದ ಇಂದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದೇಶದಲ್ಲಿ ಕರ್ನಾಟಕದ ಹೆಸರನ್ನು ಪಸರಿಸುವಂತೆ ಮಾಡಿದ್ದಾರೆ. ನೀಟ್ ( NEET) ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ.ಚಿದಾನಂದ ಕುಂಬಾರ (Dr, Chidananda Kallappa Kumbara) ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. 2021-2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳಿಸಿದ್ದಾರೆ. ಡಾ. ಚಿದಾನದ ಕುಂಬಾರ ಬೆಳಗಲಿ ಹುಬ್ಬಳ್ಳಿ ಕಿಮ್ಸ್​ನಲ್ಲಿ ಎಮ್​ಬಿಬಿಎಸ್​ (MBBS) ಮುಗಿಸಿದ್ದರು. ಒಂದು ವರ್ಷದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್​ನಲ್ಲಿ ಎಂಡಿ ಮುಗಸಿದ್ದಾರೆ. ಸೂಪರ್​ ಸ್ಪೆಷಾಲಿಟಿ (Super Specialty) ನೀಟ್  ಪರೀಕ್ಷೆಯಲ್ಲಿ ಚಿದಾನಂತ ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಚಾರ ತಿಳಿದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಡೈಜೆಸ್ಟಿವ್ ಸಿಸ್ಟಮ್ ಸ್ಪೆಷಲಿಸ್ಟ್ (Digestive System Specialist) ವಿಷಯದಲ್ಲಿ 400ಕ್ಕೆ 340 ಅಂಕ ಪಡೆದಿದ್ದು, ಡಿಎಮ್ ಹೆಪೊಟಾಲಜಿ (ಲಿವರ್ ಸ್ಪೆಷಲಿಸ್ಟ್) 400 ಕ್ಕೆ 330 ಅಂಕ ಪಡೆದಿದ್ದಾರೆ. ಈ ಸಾಧನೆಯನ್ನು ನಮ್ಮ ಬಾಗಲಕೋಟೆಯ ವೈದ್ಯ ಮಾಡಿರುವುದು ಇಡೀ ಕರುನಾಡಿಗೆ ಸಂತಸ ಮೂಡಿಸಿದೆ. 

ಜನವರಿ 10 ರಂದು ನಡೆದಿದ್ದ ನೀಟ್​ ಪರೀಕ್ಷೆ!

ಜನವರಿ 10, 2022ರಲ್ಲಿ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಜನವರಿ 31 ರಂದು ರಾತ್ರಿ ಬಂದಿದೆ. ಸದ್ಯ ಹೈದರಾಬಾದ್​ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯ ಡಾ, ಚಿದಾನಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿಚಾರ ತಿಳಿದ ಮುಧೋಳ ಶಾಸಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಅವರು, ಡಾ.ಚಿದಾನಂದ ಕುಂಬಾರ ಬೆಳಗಲಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಮನೆಗೆ ಬಂದ ಗ್ರಾಮಸ್ಥರು ಡಾ. ಚಿದಾನಂದ ಕುಂಬಾರ ಅವರ ಮನೆಗೆ ಬಂದು ಶುಭಾಶಯ ತಿಳಿಸಿದ್ದಾರೆ.


ಇದನ್ನೂ ಓದಿ : ಮಲಯಾಳಂ ಚಿತ್ರನಟ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್, ಸರ್ಕಾರಿ ಕೆಲಸ ಕೊನೆಗೂ ಸಿಕ್ತು ಎಂದ ಬೋಬನ್!

ರೈತನ ಮಗ ಡಾ.ಚಿದಾನಂದ ಕುಂಬಾರ!

ನಮ್ಮ ತಂದೆ ಒಬ್ಬ ರೈತ ನಾನೊಬ್ಬ ರೈತನ ಮಗ ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆಯಿದೆ. ನನ್ನ ತಂದೆ ಸಹಕಾರ, ಕುಟುಂಬಸ್ಥರ ಪ್ರೋತ್ಸಾಹದಿಂದ ನಾನು ವೈದ್ಯಕೀಯ ಕ್ಷೇತ್ರಕ್ಕೆ ಬಂದು ಇಂತಹ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಇನ್ನು ನಮ್ಮ ಕ್ಷೇತ್ರದ ಶಾಸಕರು, ಸದ್ಯ ಸಚಿವರು ಆದ ಗೋವಿಂದ ಕಾರಜೋಳ ಅವರು ಕೂಡ ಎಂಬಿಬಿಎಸ್​​ ಓದುವಾಗ ಪ್ರೋತ್ಸಾಹ ನೀಡಿದ್ದು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಡಾ. ಚಿದಾನಂದ ಕುಂಬಾರ ಹೇಳಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಡಾ.ಚಿದಾನಂದ ತಂದೆಯ ಆಶ್ರಯದಲ್ಲೇ ಬೆಳೆದು ದೊಡ್ಡ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪನ ಬೈಕ್​ಗಾಗಿ 25 ವರ್ಷ ಹುಡುಕಾಡಿದ ಬೆಂಗಳೂರಿನ ಟೆಕ್ಕಿ, ಅದು ಸಿಕ್ಕ ಕತೆಯೇ ರೋಚಕ!

ಎಷ್ಟೇ ಕಷ್ಟಗಳು ಬಂದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಗುರಿಯನ್ನು ಮುಟ್ಟಿ ಇತರರಿಗೆ ಮಾದರಿಯಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರನ್ನ ಬೆಳಗಲಿ ಗ್ರಾಮದಲ್ಲಿ ಮುಗಿಸಿದ ಚಿದಾನಂದ ಕುಂಬಾರ, ವಿಜಯಪುರ ಬಿಎಲ್​ಡಿಇ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಕಲಿತು ಇಂದು ಕರುನಾಡಿಗೆ ಕೀರ್ತಿ ತರುವ ಕೆಲಸವನ್ನು ಡಾ. ಚಿದಾನಂದ ಕುಂಬಾರ ಅವರು ಮಾಡಿದ್ದಾರೆ.
Published by:Vasudeva M
First published: