Bagalkot: 6.5 ಲಕ್ಷಕ್ಕೆ ಹರಾಜಾದ ಮಾಲಿಂಗರಾಯ ದೇವರ ಗದ್ದುಗೆ ತೆಂಗಿನಕಾಯಿ

ಮಾಲಿಂಗರಾಯ (Malingaraya) ದೇವರನ್ನು ಶಿವನ ನಂದಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಈ ತೆಂಗಿನಕಾಯಿಯನ್ನು ಈ ದೇವರ 'ಗದ್ದುಗೆ'ಯಲ್ಲಿ ಇಟ್ಟಿರಲಾಗಿರುತ್ತದೆ, ಈ ಕಾಯಿಗೆ ಪ್ರತಿ ವರ್ಷ ಭಕ್ತರಿಗೆ ಸಾಕಷ್ಟು ಪೈಪೋಟಿ ನಡೆಯುತ್ತದೆ. ಈ ತೆಂಗಿನಕಾಯಿಯನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಯಾರು ಪಡೆದರೂ ಅದು ಅವರ ಬಾಳಿನಲ್ಲಿ, ವ್ಯವಹಾರದಲ್ಲಿ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Bagalkot: ಭಕ್ತಿ ಮತ್ತು ನಂಬಿಕೆ ಮನುಷ್ಯನ ಆಳದಲ್ಲಿ ಬೇರು ಬಿಟ್ಟಿರುವ ಒಂದು ಸಂಗತಿ. ನಮ್ಮ ಪುರಾಣಗಳಲ್ಲಿ ಇಂತಹದೇ ಸಾಕಷ್ಟು ನಿದರ್ಶನಗಳನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಭಕ್ತಿಗೆ ಹಾಗೂ ನಂಬಿಕೆಗೆ ಏನು ಬೇಕಾದರೂ ಮಾಡುವಷ್ಟಟ ಮಟ್ಟಕ್ಕೆ ಮನುಷ್ಯ ಹೋಗುತ್ತಾನೆ ಎನ್ನುವುದು ಸಹ ಸಾಕಷ್ಟು ನಿದರ್ಶನಗಳಿಂದ ಸಾಬೀತಾಗಿದೆ.

  ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂತಹದೊಂದು ಘಟನೆ ಇದಕ್ಕೆ ಸಾಕ್ಷಿಯಾಗಿದ್ದು,  ಭಕ್ತನೊಬ್ಬನು ಅದೃಷ್ಟದ ತೆಂಗಿನಕಾಯಿಯನ್ನು  ಪಡೆಯಲು ಅವಕಾಶಗಿಟ್ಟಿಸಿಕೊಂಡ ವಿಚಾರ ಎಲ್ಲರನ್ನು ಬೆರಗಾಗಿಸಿದೆ.   ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಚಿಕ್ಕಲಕಿ ಗ್ರಾಮದಲ್ಲಿರುವ 12 ನೇ ಶತಮಾನದ ದೇವಸ್ಥಾನದ ಮಾಲಿಂಗರಾಯ ದೇವರಿಗೆ ಅರ್ಪಿಸಿರುವ ಪೂಜೆಯ ಕಾಯಿಯನ್ನು 6.5 ಲಕ್ಷ ರೂಪಾಯಿ ಕೊಟ್ಟು ಭಕ್ತನೊಬ್ಬನು ಪಡೆದುಕೊಂಡಿದ್ದಾನೆ.

  ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಶ್ರೀ ಬೀಲನಿಂಗೇಶ್ವರ ಜಾತ್ರೆಯ ಅಂಗವಾಗಿ ಶ್ರಾವಣದ (Shravana ) ಕೊನೆಯ ದಿನದಂದು ದೇವಾಲಯ ಸಮಿತಿಯು ತೆಂಗಿನಕಾಯಿಯನ್ನು ಹರಾಜು ಹಾಕಿತು. ಹರಾಜಿನಲ್ಲಿ ಅನೇಕ ಭಕ್ತರು ಭಾಗವಹಿಸಿದ್ದರೂ, ವಿಜಯಪುರ ಜಿಲ್ಲೆಯ (Vijaypura district) ಹಣ್ಣು ಮಾರಾಟಗಾರರಾದ ಮಹಾವೀರ (Mahavir )ಅವರು ಈ ಹರಕೆಯ ಕಾಯಿಗೆ ಕೂಗಿದ ಇಷ್ಟು ದೊಡ್ಡ ಮೊತ್ತದ ಹರಾಜು ಮೊತ್ತವನ್ನು ಕೇಳಿ ಗಾಬರಿಗೊಂಡರು, ಅಷ್ಟೇ ಅಲ್ಲದೇ ಈ ಹಣದ ಮೇಲೆ ಮತ್ತೆ ಯಾರೂ ಕೂಡ ಹರಾಜು ಕೂಗಲೇ ಇಲ್ಲ ಎಮದು ವರದಿಯಾಗಿದೆ.

  ಮಾಲಿಂಗರಾಯ (Malingaraya) ದೇವರನ್ನು ಶಿವನ ನಂದಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಈ ತೆಂಗಿನಕಾಯಿಯನ್ನು ಈ ದೇವರ 'ಗದ್ದುಗೆ'ಯಲ್ಲಿ ಇಟ್ಟಿರಲಾಗಿರುತ್ತದೆ, ಈ ಕಾಯಿಗೆ ಪ್ರತಿ ವರ್ಷ ಭಕ್ತರಿಗೆ ಸಾಕಷ್ಟು ಪೈಪೋಟಿ ನಡೆಯುತ್ತದೆ. ಈ ತೆಂಗಿನಕಾಯಿಯನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಯಾರು ಪಡೆದರೂ ಅದು ಅವರ ಬಾಳಿನಲ್ಲಿ, ವ್ಯವಹಾರದಲ್ಲಿ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

  ದೇವಸ್ಥಾನ ಸಮಿತಿಯು ಬಹಳ ಹಿಂದಿನಿಂದಲೂ 'ಗದ್ದುಗೆ' ತೆಂಗಿನಕಾಯಿಯನ್ನು ಹರಾಜು ಹಾಕುತ್ತಿದೆ ಆದರೆ ಇಷ್ಟು ದಿನ ನಡೆಯುತ್ತಿದ್ದ ಹರಾಜಿನಲ್ಲಿ ಎಂದೂ ಸಹ  10,000 ರೂಪಾಯಿಗಳನ್ನು ದಾಟಿರಲಿಲ್ಲ. ಆದರೆ ಈ ವರ್ಷ ಎಂದಿನ ವರ್ಷದಂತೆ ಇರಲಿಲ್ಲ, ಈ ಬಾರಿಯ ಹರಾಜು 1000 ರೂಪಾಯಿಗೆ ಆರಂಭವಾಯಿತು. ಆದರೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಶೀಘ್ರದಲ್ಲೇ 1 ಲಕ್ಷ ದಾಟಿತು ನಂತರ ಭಕ್ತರು 3 ಲಕ್ಷಕ್ಕೆ ಏರಿಸಿದರು. ದೇವಸ್ಥಾನ ಸಮಿತಿಯ ಸದಸ್ಯರು ಈ ದಾಖಲೆಯುತ ಬೆಲೆಯು ಇಲ್ಲಿಗೆ ಮುಗಿಯುತ್ತದೆ ಎಂದು ಬಹುತೇಕ ಹರಾಜನ್ನು ಕೊನೆಗೊಳಿಸಲು ಪ್ರಾರಂಬಿಸಿದರು. ಏಕೆಂದರೆ ಇಷ್ಟು ದೊಡ್ಡ ಮೊತ್ತವನ್ನು ಹಿಂದೆಂದೂ ಯಾರೂ ಸಹ ಒಂದು ಕಾಯಿಗೆ ಕೂಗಿರಲಿಲ್ಲ, ಆದರೆ ಮಹಾವೀರ ಎನ್ನುವವರು ಈ ಎಲ್ಲವನ್ನು ತಲೆಕೆಳಗು ಮಾಡಿ ಬೆಲೆಯನ್ನು ದ್ವಿಗುಣಗೊಳಿಸಿದರು ಮತ್ತು ತೆಂಗಿನಕಾಯಿಯನ್ನು ಹರಾಜಿನಲ್ಲಿ ಪಡೆಯಲು 6.5 ಲಕ್ಷ ಪಾವತಿಸಿದರು.


  ತೆಂಗಿನಕಾಯಿ ಹರಾಜಿನಿಂದಗಳಿಸಿದ ಹಣವನ್ನು ದೇವಾಲಯದ ಅಭಿವೃದ್ಧಿ ಮತ್ತು ಇತರ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುವುದು ಎಂದು ಸಮಿತಿ ಹೇಳಿದೆ.


  ಇದನ್ನೂ ಓದಿ: Oscar fernandes: ಕಾಂಗ್ರೆಸ್​ನಲ್ಲಿ ಇದ್ದ ಕರ್ನಾಟಕದ ದನಿ; ಗಾಂಧಿ ಕುಟುಂಬದ ಆಪ್ತ ಆಸ್ಕರ್​ ಫರ್ನಾಂಡಿಸ್​​
  ಈ ವರ್ಷ ಹರಾಜಿನಲ್ಲಿ ತೆಂಗಿನಕಾಯಿ ಪಡೆದುಕೊಂಡ, ಮಹಾವೀರ ಅವರ ನಿರ್ಧಾರವನ್ನು ಅನೇಕ ಜನರು ಹುಚ್ಚು ಮತ್ತು ಕುರುಡು ನಂಬಿಕೆ ಎಂದು ಕರೆಯಬಹುದಾದರೂ, ಈ ಕುರಿತು ಮಹಾವೀರ ಅವರನ್ನು ಮಾತನಾಡಿಸಿದಾಗ ’’ಇದು ನನ್ನ ಭಕ್ತಿ ಮತ್ತು ನಂಬಿಕೆಯ ವಿಷಯವಾಗಿದೆ’’ ಎಂದು ಹೇಳಿದರು.  ಮಾಲಿಂಗರಾಯರ ದೇವರ ಮೇಲಿನ ಈ ಬಲವಾದ ನಂಬಿಕೆಯ ಹಿಂದಿನ ಕಾರಣವನ್ನೂ ಅವರು ಹಂಚಿಕೊಂಡರು. ನಾನು ಒಂದು ಕಾಲದಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಮತ್ತು ವ್ಯಾಪಾರ ನಷ್ಟದಿಂದ ಬಳಲುತ್ತಿದ್ದಾಗ, ಈ ದೇವರನ್ನು ವಿವಿಧ ರೀತಿಯ ಪ್ರಾರ್ಥನೆ ಮಾಡಿದೆ. ನನ್ನ ಕಷ್ಟಗಳೆಲ್ಲಾ ಕೆಲವು ತಿಂಗಳುಗಳಲ್ಲೇ ಬದಲಾಯಿತು, ಆದ ಕಾರಣ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: