ಬಾಗಲಕೋಟೆಯಲ್ಲಿ ರಂಗೇರುತ್ತಿದೆ ಲೋಕಲ್ ಎಲೆಕ್ಷನ್; ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಮೇಲೆ ಎಲ್ಲರ ಕಣ್ಣು

news18
Updated:August 27, 2018, 4:08 PM IST
ಬಾಗಲಕೋಟೆಯಲ್ಲಿ ರಂಗೇರುತ್ತಿದೆ ಲೋಕಲ್ ಎಲೆಕ್ಷನ್; ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಮೇಲೆ ಎಲ್ಲರ ಕಣ್ಣು
news18
Updated: August 27, 2018, 4:08 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಬಾಗಲಕೋಟೆ (ಆ.27): ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆಯಲ್ಲೂ  ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಲೋಕಲ್ ಫೈಟ್ ಪ್ರತಿಷ್ಠೆಯಾಗಿದ್ದರೇ, ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಶತಾಯಗತಾಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 07  ಕ್ಷೇತ್ರಗಳಲ್ಲಿ ಬಿಜೆಪಿ 5 ಕ್ಷೇತ್ರದಲ್ಲಿ ಗೆಲುವು ಕಂಡಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್. ಸ್ಥಳೀಯ ಸಂಸ್ಥೆಗಳ ಚುನಾವಣಾ ಅಖಾಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ರಂಗು ಪಡಿದುಕೊಂಡಿದೆ. ಅದರಲ್ಲೂ ಮಾಜಿ ಸಿಎಂ  ಸಿದ್ಧರಾಮಯ್ಯ ಕ್ಷೇತ್ರ ಬಾದಾಮಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 5 ನಗರಸಭೆ, 5 ಪುರಸಭೆ ಹಾಗೂ 2 ಪಟ್ಟಣ ಪಂಚಾಯತ್​​ಗಳು ಸೇರಿ ಒಟ್ಟು 12 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. 12 ಸ್ಥಳೀಯ ಸಂಸ್ಥೆಗಳ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್​​,  ಬಿಜೆಪಿ ನಡುವೆ ನೇರ ಹಣಾಹಣಿ, ಜೊತೆಗೆ ಕೆಲವೆಡೆ ಜೆಡಿಎಸ್ ಪೈಪೋಟಿ ನಡೆಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಮೈತ್ರಿಯಾಗಿಲ್ಲ.ಇನ್ನು  ನಗರಸಭೆ ಚುನಾವಣೆಯಲ್ಲಿ ವಾರ್ಡ್ ನಂಬರ್ 2 ರಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಮುಚಖಂಡಿ ಅವಿರೋಧ ಆಯ್ಕೆ ಆಗಿದ್ದಾರೆ. ತೇರದಾಳ ಪುರಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗೀತಾ ಪಾಟೀಲ ಹಾಗೂ ಗುಳೇದಗುಡ್ಡ ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಮನ್ನಿಕೇರಿ ಅವಿರೋಧ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಿಲ್ಲೆಯಲ್ಲಿ 12 ಸ್ಥಳೀಯ ಸಂಸ್ಥೆಗಳಲ್ಲಿ ನಗರಸಭೆಗಳಾದ ಬಾಗಲಕೋಟೆ, ಇಳಕಲ್, ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ, ಪುರಸಭೆಗಳಾದ ಬಾದಾಮಿ, ಗುಳೇದಗುಡ್ಡ, ಮಹಾಲಿಂಗಪುರ, ತೇರದಾಳ, ಹುನಗುಂದ ಹಾಗೂ ಪಟ್ಟಣ ಪಂಚಾಯ್ತಿಗಳಾದ ಕೆರೂರು, ಬೀಳಗಿ ಸೇರಿ ಒಟ್ಟು 12 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಜ್ಜಾಗಿದೆ. ಪಕ್ಷಗಳಿಗೆ ಕೆಲವು ಕಡೆಗಳಲ್ಲಿ ಪಕ್ಷೇತರರು ಮಗ್ಗಲು ಮುಳ್ಳಾಗಿದ್ದಾರೆ. ಜೊತೆಗೆ ಲೋಕಸಭೆ ಚುನಾವಣೆಗೆ ಈಗ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ದಿಕ್ಸೂಚಿ. ಹಾಗಾಗಿ ಮೂರು ಪಕ್ಷಗಳು ಗೆಲುವಿಗಾಗಿ ಶತಾಯಗತಾಯವಾಗಿ ಪ್ರಯತ್ನ ನಡೆಸಲಿವೆ.

ಅಖಾಡದಲ್ಲಿ ಉಳಿದ ಅಭ್ಯರ್ಥಿಗಳು

ಸ್ಥಳೀಯ ಸಂಸ್ಥೆಗಳು  -   12 

ಒಟ್ಟು ವಾರ್ಡ್​ಗಳು    -  312

ಬಿಜೆಪಿ                          -      301

ಕಾಂಗ್ರೆಸ್                     -    297

ಜೆಡಿಎಸ್ ​​                    -    134

ಪಕ್ಷೇತರರು                -   166

ಬಿಎಸ್ ಪಿ                   -     1

ಪಿಪಿಪಿ                        -       2

ಎಐಎಂಎಎಂ         -    3

ಒಟ್ಟು ಅಭ್ಯರ್ಥಿಗಳು  904 

ಬಾಗಲಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿವೆ.  ಕಾಂಗ್ರೆಸ್-35, ಬಿಜೆಪಿ-34, ಜೆಡಿಎಸ್-13, ಪಿಪಿಪಿ-02, ಎಐಎಂಐಎಂ-01 ಹಾಗೂ ಪಕ್ಷೇತರರು- 11 ಸೇರಿದಂತೆ ಒಟ್ಟು 96 ಅಭ್ಯರ್ಥಿಗಳಿದ್ದಾರೆ.ಇಳಕಲ್ ನಗರಸಭೆ ಒಟ್ಟು 31 ವಾರ್ಡ್‌ಗಳಿವೆ.ಕಾಂಗ್ರೆಸ್-30, ಬಿಜೆಪಿ-31, ಜೆಡಿಎಸ್-19, ಎಐಎಂಐಎಂ-02, ಪಕ್ಷೇತರರು-18 ಸೇರಿದಂತೆ ಒಟ್ಟು 100 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಮುಧೋಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಕಾಂಗ್ರೆಸ್-31, ಬಿಜೆಪಿ-31, ಜೆಡಿಎಸ್-08 ಪಕ್ಷೇತರರು-05 ಸೇರಿದಂತೆ ಒಟ್ಟು 75  ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಮಖಂಡಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಕಾಂಗ್ರೆಸ್-31, ಬಿಜೆಪಿ-31, ಜೆಡಿಎಸ್-11,  ಪಕ್ಷೇತರರು-32 ಸೇರಿದಂತೆ ಒಟ್ಟು 105 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ರಬಕಬಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಒಟ್ಟಾರೆ ಕಾಂಗ್ರೆಸ್-29 ಬಿಜೆಪಿ-31, ಜೆಡಿಎಸ್-12 ಪಕ್ಷೇತರರು-18 ಸೇರಿದಂತೆ ಒಟ್ಟು 90 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಬಾದಾಮಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಒಟ್ಟಾರೆ ಕಾಂಗ್ರೆಸ್-23, ಬಿಜೆಪಿ-23, ಜೆಡಿಎಸ್-15, ಪಕ್ಷೇತರರು- 21 ಸೇರಿದಂತೆ ಒಟ್ಟು 82 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಗುಳೇದಗುಡ್ಡ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಒಟ್ಟಾರೆ ಕಾಂಗ್ರೆಸ್-22 ಬಿಜೆಪಿ-20, ಜೆಡಿಎಸ್-17, ಪಕ್ಷೇತರರು-05 ಸೇರಿದಂತೆ ಒಟ್ಟು 64 ಅಖಾಡದಲ್ಲಿ ಉಳಿದಿದ್ದಾರೆ.

ಮಹಾಲಿಂಗಪೂರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಕಾಂಗ್ರೆಸ್-22 ಬಿಜೆಪಿ-22, ಜೆಡಿಎಸ್-12 ಪಕ್ಷೇತರರು- 8 ಸೇರಿದಂತೆ ಒಟ್ಟು 64  ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಕಾಂಗ್ರೆಸ್-17, ಬಿಜೆಪಿ-23, ಜೆಡಿಎಸ್-07, ಪಕ್ಷೇತರರು- 13 ಸೇರಿದಂತೆ ಒಟ್ಟು 60 ಅಭ್ಯರ್ಥಿಗಳು. ಹಾಗೂ ಹುನಗುಂದ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ.  ಕಾಂಗ್ರೆಸ್-23, ಬಿಜೆಪಿ-23, ಜೆಡಿಎಸ್-08 ಪಕ್ಷೇತರರು- 6 ಮಂದಿ ಸೇರಿದಂತೆ ಒಟ್ಟು 60 ಅಭ್ಯರ್ಥಿಗಳು ಅಖಾಡದಲ್ಲಿ ದ್ದಾರೆ.

ಬೀಳಗಿ ಪಟ್ಟಣ ಪಂಚಾಯ್ತಿ

ಬೀಳಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 18 ವಾರ್ಡ್‌ಗಳಿವೆ.  ಕಾಂಗ್ರೆಸ್-17, ಬಿಜೆಪಿ-18, ಜೆಡಿಎಸ್-02, ಪಕ್ಷೇತರರು- 6ಸೇರಿದಂತೆ ಒಟ್ಟು 43 ಅಭ್ಯರ್ಥಿಗಳಿದ್ದಾರೆ.

ಕೆರೂರು ಪಟ್ಟಣ ಪಂಚಾಯ್ತಿ

ಕೆರೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 20 ವಾರ್ಡ್‌ಗಳಿವೆ. ಒಟ್ಟಾರೆ ಕಾಂಗ್ರೆಸ್-17, ಬಿಜೆಪಿ-14, ಜೆಡಿಎಸ್-10, ಬಿಎಸ್ಪಿ-01, ಪಕ್ಷೇತರರು- 23 ಸೇರಿದಂತೆ ಒಟ್ಟು 65 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಇನ್ನು 5 ನಗರಸಭೆಗಳಲ್ಲಿ ಜಮಖಂಡಿ ಹೊರತುಪಡಿಸಿದರೆ ಮುಧೋಳ, ಬಾಗಲಕೋಟೆ,ಇಳಕಲ್, ರಬಕವಿ-ಬನಹಟ್ಟಿಗಳಲ್ಲಿ  ಬಿಜೆಪಿ ಶಾಸಕರೆ ಇದ್ದಾರೆ‌. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹುಮ್ಮಸ್ಸಿನಲ್ಲಿದೆ.

ಬಾದಾಮಿ ಶಾಸಕ ಸಿದ್ಧರಾಮಯ್ಯರಿಗೆ ಇದು ಮೊದಲ ಅಗ್ನಿಪರೀಕ್ಷೆ  ಎಂದು ಹೇಳಲಾಗುತ್ತಿದೆ. ಶಾಸಕರಾದ ಬಳಿಕ ಬಾದಾಮಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಪುರಸಭೆಗಳಾಗಿರೋ ಬಾದಾಮಿ, ಗುಳೇದಗುಡ್ಡ ಹಾಗೂ ಪಟ್ಟಣ ಪಂಚಾಯಿತಿ ಕೆರೂರು ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಈಗಾಗಲೇ ಚುನಾವಣಾ ಪೂರ್ವ ಭಾವಿ ಸಭೆ ನಡೆಸಿದ್ದಾರೆ. ಇದೀಗ ಬಾದಾಮಿ ಕ್ಷೇತ್ರ ದ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಮತದಾರರು ಸಿದ್ಧರಾಮಯ್ಯರ ಕೈ ಹಿಡಿಯುತ್ತಾರಾ ಎಂಬ ಕುತೂಹಲ ಕೆರಳಿಸಿದೆ. ಅಲ್ಲದೇ ಜಿಲ್ಲೆಯ ಸಂಸ್ಥೆಗಳ ಚುನಾವಣೆ ಮೇಲೆ ಸಿದ್ಧರಾಮಯ್ಯ ರಾಜಕೀಯ ಪ್ರಭಾವ ಯಾವ ರೀತಿ ಬೀರುತ್ತದೆ ಎಂಬುದನ್ನು ಕಾದುನೋಡಬೇಕು. ಆದರೆ ಬಿಜೆಪಿ ನಾಯಕರು ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ನಮ್ಮದೆ ಎನ್ನುತ್ತಿದ್ದಾರೆ.

ಕಳೆದ ಬಾರಿ ನಗರಸಭೆಯಲ್ಲಿ ಯಾವ ಪಕ್ಷ  ಅಧಿಕಾರ ಹಿಡಿದಿತ್ತು?

ಬಾಗಲಕೋಟೆ            - ಬಿಜೆಪಿ 

ಇಳಕಲ್                     - ಕಾಂಗ್ರೆಸ್  

ರಬಕವಿ-ಬನಹಟ್ಟಿ   - ಕಾಂಗ್ರೆಸ್

ಜಮಖಂಡಿ              - ಕಾಂಗ್ರೆಸ್

ಮುಧೋಳ               - ಕಾಂಗ್ರೆಸ್

 

ಪಟ್ಟಣ ಪಂಚಾಯತಿ 

ಬೀಳಗಿ - ಕಾಂಗ್ರೆಸ್ 

ಕೆರೂರ - ಬಿಜೆಪಿ- ಜೆಡಿಎಸ್ ಸಮ್ಮಿಶ್ರ.

 

ಪುರಸಭೆ

ಗುಳೇದಗುಡ್ಡ - ಬಿಜೆಪಿ 

ಬಾದಾಮಿ - ಕಾಂಗ್ರೆಸ್ 

ತೇರದಾಳ - ಬಿಜೆಪಿ 

ಹುನಗುಂದ - ಕಾಂಗ್ರೆಸ್ 

ಮಹಾಲಿಂಗಪೂರ - ಕಾಂಗ್ರೆಸ್ 
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ