news18-kannada Updated:May 28, 2020, 11:12 AM IST
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ
ಬಾಗಲಕೋಟೆ(ಮೇ 28): ಕಳೆದ ಎರಡು ವರ್ಷಗಳಿಂದ ಖಾಲಿಯಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಕೊನೆಗೂ ರಾಜ್ಯ ಸರ್ಕಾರ ಪೂರ್ಣಾವಧಿ ಉಪಕುಲಪತಿ ನೇಮಿಸಿ ಆದೇಶ ಹೊರಡಿಸಿದೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಉಪ ಕುಲಪತಿಯಾಗಿದ್ದ ಕೆ ಎಂ ಇಂದಿರೇಶ್ ಅವರನ್ನು ಪೂರ್ಣಾವಧಿ ಉಪಕುಲಪತಿಯಾನ್ನಾಗಿ ನೇಮಿಸಿದೆ. ಈ ಹಿಂದೆ ಡಾ. ಕೆಎಂ ಇಂದಿರೇಶ್ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದರು. ಇದೀಗ ರಾಜಪಾಲ ವಜುಭಾಯಿ ವಾಲಾ ನೇಮಕ ಆದೇಶ ಹೊರಡಿಸಿದ್ದು. 29-06-2018 ರಂದು ಡಿ ಎಲ್ ಮಹೇಶ್ವರ ಉಪಕುಲಪತಿ ಹುದ್ದೆಗೆ ನಿವೃತ್ತಿ ಹೊಂದಿದ ಬಳಿಕ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪೂರ್ಣಾವಧಿ ಉಪಕುಲಪತಿ ನೇಮಕಾತಿ ಆಗಿರಲಿಲ್ಲ.
ಡಾ. ಡಿಎಲ್ ಮಹೇಶ್ವರ ನಿವೃತ್ತಿ ಬಳಿಕ ರಾಜ್ಯ ಸರ್ಕಾರ ಡಾ,ಎಚ್ ಬಿ ಲಿಂಗಯ್ಯ ಎಂಬುವರನ್ನು 31-07-2018 ವರೆಗೆ ಹಂಗಾಮಿಯನ್ನಾಗಿ ನೇಮಿಸಿತ್ತು. ಬಳಿಕ ಕೆ ಎಂ ಇಂದಿರೇಶ್ ಅವರನ್ನು 31-07-2018 ರಿಂದ ಎರಡು ಬಾರಿ ಹಂಗಾಮಿ ಉಪ ಕುಲಪತಿಯನ್ನಾಗಿ ನೇಮಿಸಿ, ಮುಂದುವರೆಸುತ್ತಾ ಬಂದಿತ್ತು. ಮೈತ್ರಿ ಸರ್ಕಾರದಲ್ಲೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ನೇಮಕ ಆಗಿರಲಿಲ್ಲ.

ಉಪಕುಲಪತಿಯಾಗಿ ನೇಮಕವಾದ ಡಾ. ಕೆ ಎಂ ಇಂದ್ರೇಶ್
ಪೂರ್ಣಾವಧಿ ಉಪ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷದಿಂದ ಕಾರಣಾಂತರಗಳಿಂದ ಮುಂದೂಡುತ್ತಾ ಬಂದಿದ್ದು. ಇದೀಗ ಬಿಜೆಪಿ ಸರ್ಕಾರ ಡಾ.ಕೆ ಎಂ ಇಂದಿರೇಶ್ ಅವರನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ನೇಮಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ :
ಹಾಸನದಲ್ಲಿ ಓರ್ವ ಪಿಎಸ್ಐ ಸೇರಿ 136 ಕ್ಕೇರಿದ ಸೋಂಕಿತರ ಸಂಖ್ಯೆ; 6 ಏರಿಯಾ ಸೀಲ್ ಡೌನ್
ವಿಶ್ವವಿದ್ಯಾಲಯದ ಆಡಳಿತಾತ್ಮಕ ದೃಷ್ಟಿಯಿಂದ ಪೂರ್ಣಾವಧಿ ಉಪಕುಲಪತಿ ನೇಮಕದ ಬೇಡಿಕೆ ಹೆಚ್ಚಾಗಿತ್ತು. ಕೊನೆಗೂ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪೂರ್ಣಾವಧಿ ಉಪಕುಲಪತಿ ನೇಮಕದ ಭಾಗ್ಯ ಸಿಕ್ಕಂತಾಗಿದೆ.
First published:
May 28, 2020, 10:50 AM IST