Special Marriage: ಕುಬ್ಜ ವರ, ಎತ್ತರದ ವಧು ಅಪರೂಪದ ಮದುವೆಗೆ ಸಾಕ್ಷಿಯಾದ ಬಾದಾಮಿಯ ನೀಲಗುಂದ ಗ್ರಾಮ

ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಪರೂಪದ ಮದುವೆ ನಡೆದಿದೆ. 38 ಇಂಚು ಎತ್ತರದ ಬಸವರಾಜ, 5.3 ಅಡಿ ಎತ್ತರದ ರುಕ್ಮಿಣಿಯನ್ನು ವರಿಸಿದ್ದಾರೆ.

ಅಪರೂಪದ ಮದುವೆ

ಅಪರೂಪದ ಮದುವೆ

 • Share this:
  ಕುಳಗೇರಿ ಕ್ರಾಸ್: ಮದುವೆ (Marriage) ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಅದಕ್ಕೆ ಸಾಕ್ಷಿಯಾಗಿದೆ ಇಲ್ಲೊಂದು ಮದುವೆ. ಬಾದಾಮಿ (Badami) ತಾಲೂಕಿನ ನೀಲಗುಂದ ಗ್ರಾಮದಲ್ಲಿ (Village) ವಿಶೇಷ ಹಾಗೂ ಅಪರೂಪದ ಮದುವೆಗೆ (Special Wedding) ಇಡೀ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಭಾನುವಾರ ಅಪರೂಪದ ಮದುವೆ ನಡೆದಿದೆ. ಅಂದ ಹಾಗೆ, ವರನ ಎತ್ತರ 38 ಇಂಚು ಇದ್ದರೆ, ವಧು 5.3 ಅಡಿ ಎತ್ತರ ಇದ್ದಾರೆ. ಇಬ್ಬರ ಜೋಡಿಗೆ (Couple) ಕುಟುಂಬಸ್ಥರು (Family) ಅಸ್ತು ಎಂದಿದ್ದಾರೆ.  ಗ್ರಾಮಸ್ಥರು ಸೇರಿದಂತೆ ಇಬ್ಬರ ಮನೆಯವರು ಮದುವೆಗೆ ಒಪ್ಪಿಗೆ ನೀಡಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ.

  ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಈ ಅಪರೂಪದ ಮದುವೆ ನಡೆದಿದೆ. ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ 38 ಇಂಚು ಎತ್ತರದ ಬಸವರಾಜ, 5.3 ಅಡಿ ಎತ್ತರದ ರುಕ್ಮಿಣಿಯನ್ನು ವರಿಸಿದ್ದಾರೆ.

  ಅಪರೂಪದ ಮದುವೆಗೆ ಗ್ರಾಮಸ್ಥರ ಹಾರೈಕೆ

  30 ವರ್ಷದ ಬಸವರಾಜ ಕುಬ್ಜನಾಗಿದ್ದಾರೆ. ಬಸವರಾಜ ಕುಂಬಾರ ಕನ್ಯೆಯನ್ನು ಹುಡುಕುತ್ತಿದ್ದರು. ಈ ವೇಳೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿನ 22 ವಯಸ್ಸಿನ ಯುವತಿ ರುಕ್ಮಿಣಿಯನ್ನು ಕಂಡಿದ್ದಾರೆ. ಈಗ ಬಸವರಾಜ, ರುಕ್ಮಿಣಿಯ ಜೊತೆ ಜೊತೆ ಸಪ್ತಪದಿ ತುಳಿದಿದ್ದಾರೆ. ವಧು-ವರರ ಈ ನವ ಜೀವನಕ್ಕೆ ಇಡೀ ಗ್ರಾಮವೇ ಹರಸಿ ಹಾರೈಸಿದೆ.

  ಇದನ್ನೂ ಓದಿ: ಆ್ಯಸಿಡ್ ದಾಳಿಯಲ್ಲಿ ಶೇ. 80 ರಷ್ಟು ಸುಟ್ಟು ಹೋಗಿದ್ದ ಸಂತ್ರಸ್ತೆಗೆ ಬಾಳು ಕೊಟ್ಟ ಸಾಹು

  "ಪ್ರೇಮದಿಂದಲೇ ಇಬ್ಬರೂ ಮದುವೆಯಾಗುತ್ತಿದ್ದೇವೆ"

  ಕುಬ್ಜನಾದ ಬಸವರಾಜ ಅವರನ್ನು ವರಿಸಲು ರುಕ್ಮಿಣಿ ಸ್ವತಃ ಒಪ್ಪಿಗೆ ನೀಡಿದ್ದಾರೆ. ಸಧ್ಯ ಯಾವುದೇ ಅಡೆತಡೆ ಇಲ್ಲದೇ ಇಬ್ಬರೂ ಬಾಳ ದೋಣಿ ಏರಿದ್ದಾರೆ. ಬಸವರಾಜ ಜೊತೆ ಮದುವೆಯಾಗಿದ್ದು, ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ. ಯಾರ ಒತ್ತಡವೂ ಇಲ್ಲ. ಪ್ರೇಮದಿಂದಲೇ ಇಬ್ಬರೂ ಮದುವೆಯಾಗುತ್ತಿದ್ದೇವೆ ಎಂದು ರುಕ್ಮಿಣಿ ಹೇಳಿದ್ದಾರೆ.

  ಮಗನ ಮದುವೆ ಖುಷಿ ತಂದಿದೆ-ವರನ ತಾಯಿ

  ಬಸವರಾಜನ ತಾಯಿ ಶಾಂತಮ್ಮ ಮಾತನಾಡಿ, ಐದು ವರ್ಷಗಳಿಂದ ನನ್ನ ಮಗನಿಗೆ ಕನ್ಯಾ ನೋಡುತ್ತಿದ್ದೆ ಆದರೂ ಸಿಕ್ಕಿರಲಿಲ್ಲ. ಈಗ ಎಲ್ಲರಂತೆ ನನ್ನ ಮಗನಿಗೆ ಕನ್ಯಾ ಸಿಕ್ಕಿದೆ ಮದುವೆಯು ನಡೆಯಿತು ಎಂದು ಸಂತಸದಿಂದ ಹೇಳಿದ್ದಾರೆ. ನನಗೆ ಬಹಳ ಖುಷಿಯಾಗಿದೆ ಎಂದರು.

  ಇಬ್ಬರ ಮನೆಯವರ ಒಪ್ಪಿಗೆ ಮದುವೆಗೆ ಇದೆ

  ಗ್ರಾಪಂ ಮಾಜಿ ಅಧ್ಯಕ್ಷ ನೀಲಗುಂದಮಲ್ಲಪ್ಪ ಸೋಮಪ್ಪ ಹೂಗಾರ ಮಾತನಾಡಿ, ಇಂದು ನಮ್ಮೂರಲ್ಲಿ ನಡೆದ ಮದುವೆ ಬಹಳ ವಿಶೇಷವಾದದ್ದು. ಇಬ್ಬರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಮಾಡಿಸಿದ್ದೇವೆ. ಗ್ರಾಮದ ಮುಖಂಡರು, ಗ್ರಾಮಸ್ಥರು ಸೇರಿದಂತೆ 600 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.

  ಇಡೀ ಗ್ರಾಮಸ್ಥರಿಗೆ ಸಂತಸ ತಂದಿದೆ

  ಟಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರು ಮಾತನಾಡಿ, ನನ್ನ ಸಹೋದರನಂತಿರುವ ಬಸವರಾಜನಿಗೆ ಯಾವಾಗ ಮದುವೆ ಆಗುತ್ತೋ..? ಅಂತ ಮದುವೆ ಕುರಿತು ಎಲ್ಲರೂ ವ್ಯಂಗ್ಯ ಮಾಡುತ್ತಿದ್ದರು ಆದರೆ ಇಂದು ಅವನಿಗೆ ಮದುವೆಯಾಗಿದ್ದು ಇಡಿ ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದು ಹೇಳಿದರು.

  ಇದನ್ನೂ ಓದಿ: ಮದುವೆ ಆಗೋರಿಗೆ ಸಿಗಲಿದೆ ಈ ಬ್ಯಾಂಕ್ ನಿಂದ ಸಾಲ

  ಹೀಗೆ ಅದೆಷ್ಟೋ ಜನ ವಿಶೇಷ ಚೇತನರು ಹಾಗೂ ವಿಶೇಷ ಮದುವೆಗಳನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಎಷ್ಟೇ ವಯಸ್ಸಾದರೂ ಕನ್ಯಾ ಸಿಗುತ್ತಿಲ್ಲ. ಕನ್ಯೆಗೆ ವರ ಸಿಗುತ್ತಿಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ತಲೆಕೆಡಿಸಿಕೊಳ್ಳುವುದು ಸಾಮಾನ್ಯ. ಆದರೆ ಕಾಲ ಕಾಲಕ್ಕೆ ಯಾವುದು ಯಾವಾಗ ಆಗಬೇಕೋ, ಅದು ಆಗಲೇ ಆಗುತ್ತದೆ. ಅಪರೂಪದ ಮದುವೆಗಳು, ವಿಶೇಷಚೇತನರು ಹಾಗೂ ದೈಹಿಕ ಕೊರತೆಯಿರುವವರಿಗೆ ಒಂದು ಸ್ಫೂರ್ತಿ ನೀಡಿದಂತೆ. ಯಾವತ್ತೂ ಯಾರನ್ನೂ ಕೆಟ್ಟದಾಗಿ ಹೀಯಾಳಿಸಿ, ಅವಮಾನ ಮಾಡಬಾರದು ಎಂಬುದನ್ನು ಅಪರೂಪದ ಮದುವೆಗಳು ಹೇಳುತ್ತವೆ.
  Published by:renukadariyannavar
  First published: