ಇದು ತಿನ್ನುವ ಕಾಂಗ್ರೆಸ್ ಎಂದಿದ್ದ ರಮೇಶ್ ಕುಮಾರ್ ವಿರುದ್ಧ ಎಸ್.ಜಿ. ನಂಜಯ್ಯನಮಠ ಕಿಡಿ

ರಮೇಶ್​​ ಕುಮಾರ್​ ಅವರು ಒಂದು ವೈಚಾರಿಕ ವೇದಿಕೆ ಮೇಲೆ ಈ ರೀತಿ ಮಾತನಾಡಿದ್ದು ಸಮಂಜಸವಲ್ಲ. ಅವರು ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ. ಆದರೆ, ಕೆಲವೊಮ್ಮೆ ಏನೇನೋ ಮಾತನಾಡಲು ಹೋಗಿ ಕಾಲು ಜಾರುತ್ತಾರೆ

ಎಸ್​ ಜೆ ನಂಜಯ್ಯನಮಠ ಹಾಗೂ ಕೆ ಆರ್​ ರಮೇಶ್​​ ಕುಮಾರ್​

ಎಸ್​ ಜೆ ನಂಜಯ್ಯನಮಠ ಹಾಗೂ ಕೆ ಆರ್​ ರಮೇಶ್​​ ಕುಮಾರ್​

  • Share this:
ಬಾಗಲಕೋಟೆ(ಫೆ. 25): ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು​ ಕಾಂಗ್ರೆಸ್ ಹಿರಿಯ ಶಾಸಕರಾಗಿ ಪಕ್ಷದ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡಿರುವುದು ತೀವ್ರ ನೋವು ತಂದಿದೆ. ಇದರಿಂದ ಪಕ್ಷವನ್ನು ನಂಬಿದ ಕಾರ್ಯಕರ್ತರು ಭ್ರಮನಿರಸನಗೊಳ್ಳಲಿದ್ದಾರೆ‌ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದ್ದಾರೆ. 

ಬಾದಾಮಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂಬರ್ಥದಲ್ಲಿ ಹೇಳಿರುವ ವಿಚಾರ ಕುರಿತು ಮಾತನಾಡಿದ ಅವರು, ರಮೇಶ್​​ ಕುಮಾರ್​ ಅವರು ಒಂದು ವೈಚಾರಿಕ ವೇದಿಕೆ ಮೇಲೆ ಈ ರೀತಿ ಮಾತನಾಡಿದ್ದು ಸಮಂಜಸವಲ್ಲ. ಅವರು ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ. ಆದರೆ, ಕೆಲವೊಮ್ಮೆ ಏನೇನೋ ಮಾತನಾಡಲು ಹೋಗಿ ಕಾಲು ಜಾರುತ್ತಾರೆ. ಇದರಿಂದ ದುಷ್ಪರಿಣಾಮ ಕೂಡ ಆಗುತ್ತೆ. ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಅವರ ಮಾತುಗಳನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು.

ಅದರಲ್ಲೂ ಅವರು ಮಾತನಾಡಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲಿ. ಹತ್ತಾರು ಯೋಜನೆಗಳನ್ನು ಬಡವರಿಗೆ ಕೊಟ್ಟ ಜನಪರ ಧ್ವನಿ ಎತ್ತುವ ರಾಜಕಾರಣಿ ಸಿದ್ದರಾಮಯ್ಯ. ಅಂತಹ ಸ್ಥಳದಲ್ಲಿ ಇದು ತಿನ್ನುವ ಕಾಂಗ್ರೆಸ್ ಹೇಳಿರೋದು ಯೋಗ್ಯವಲ್ಲ. ಒಬ್ಬ ಜಿಲ್ಲಾಧ್ಯಕ್ಷನಾಗಿ ಪತ್ರ ಬರೆಯಬೇಕಿರುವುದು ನನ್ನ ಕರ್ತವ್ಯ. ಈಗ ಕೆಪಿಸಿಸಿ ರಾಜ್ಯಾಧ್ಯಕ್ಷರಿಲ್ಲ. ಸಿದ್ದರಾಮಯ್ಯನವರು ನಮ್ಮ ಶಾಸಕಾಂಗ ಪಕ್ಷದ ನಾಯಕರು. ಹೀಗಾಗಿ ಅವರಿಗೆ ಖುದ್ದು ನಾನೇ ತಿಳಿಸುತ್ತೇನೆ ಎಂದು ನಂಜಯ್ಯನಮಠ ಹೇಳಿದರು.

ಇದನ್ನೂ ಓದಿ : ಇದು ತಿನ್ನುವ ಕಾಂಗ್ರೆಸ್ ಎಂಬಂತೆ ಬಾಯ್ಸನ್ನೆ ಮಾಡಿ ಟೀಕಿಸಿದ ರಮೇಶ್ ಕುಮಾರ್

ಫೆ. 23 ರಂದು ಬಾದಾಮಿಯಲ್ಲಿ ವಿಶ್ವ ಚೇತನ ಸಂಸ್ಥೆ ಆಯೋಜಿಸಿದ್ದ "ಚುನಾವಣಾ ರಾಜಕಾರಣ - ಪ್ರಜಾಪ್ರಭುತ್ವ - ಮಾನವೀಯತೆ" ಉಪನ್ಯಾಸ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಮಾತನಾಡುತ್ತಾ, ನೆಹರು ಮತ್ತು ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ್ದ ಕಾಂಗ್ರೆಸ್ಸೇ ಬೇರೆ. ಈಗ ನಾವಿರುವ ಕಾಂಗ್ರೆಸ್ಸೇ ಬೇರೆ. ಈ ಕಾಂಗ್ರೆಸ್​ಗೂ ಆ ಕಾಂಗ್ರೆಸ್​ಗೂ ಏನೂ ಸಂಬಂಧ ಇಲ್ಲ. ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಬಾಯಿ ಸನ್ನೆ ಮೂಲಕ ಅಭಿಪ್ರಾಯ ಹೊರಹಾಕಿದ್ದರು.

(ವರದಿ: ರಾಚಪ್ಪ ಬನ್ನಿದಿನ್ನಿ)

 
First published: