ಸರ್ಕಾರಿ ವೈದ್ಯರ ಎಡವಟ್ಟಿನಿಂದ ಸಾವಿನ ಮನೆ ಕದ ತಟ್ಟಿ ಬಂದ ಬಾಗಲಕೋಟೆ ಯುವಕ

ಸದ್ಯ ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸದ್ಯ ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸದ್ಯ ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

  • Share this:
 ಬಾಗಲಕೋಟೆ (ಮಾ. 02): ಅಪಘಾತವೊಂದರಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆಂದು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದ ವೇಳೆ ಯುವಕ ಜೀವಂತವಾಗಿರುವುದು ತಿಳಿದು ಬಂದಿದೆ. ಈ ಮೂಲಕಸರ್ಕಾರಿ ಆಸ್ಪತ್ರೆ ವೈದ್ಯರ ಎಡವಟ್ಟು ಪ್ರಕರಣ  ಬೆಳಕಿಗೆ ಬಂದಿದೆ. ಜಿಲ್ಲೆಯ ಮಹಾಲಿಂಗಪುರದ ಶಂಕರ್ ಗೊಂಬಿ ಎಂಬ ಯುವಕ ಫೆಬ್ರವರಿ 27ರಂದು ಸ್ಕೂಟಿ ಹಾಗೂ ಕಾರು ಡಿಕ್ಕಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ.  ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಶಂಕರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಯುವಕ ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಬೆಳಗಾವಿ  ವೈದ್ಯರು  ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಫೆಬ್ರವರಿ 28ರ ತಡರಾತ್ರಿ ಆಂಬುಲೆನ್ಸ್ ನಲ್ಲಿ ವೆಂಟಿಲೇಟರ್ ಸಹಾಯದಿಂದ  ಬೆಳಗಾವಿಯಿಂದ ಮಹಾಲಿಂಗಪುರಕ್ಕೆ  ಯುವಕ ಶಂಕರನನ್ನು ಕರೆದುಕೊಂಡು ಬಂದಿದ್ದಾರೆ. ಮಾರ್ಗ ಮಧ್ಯ ಶಂಕರ ಸಾವನ್ನಪ್ಪಿದ್ದಾನೆಂದು ತಿಳಿದು ಶಂಕರ ಸ್ನೇಹಿತರಿಂದ ಸಾಮಾಜಿಕ ಜಾಲತಾಣದಲ್ಲಿ ಮೃತವಾಗಿದ್ದಾನೆಂದು ಶೋಕ ಗೀತೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದರು. ಮರಳಿ ಬಾರದೂರಿಗೆ ಪಯಣ ಎನ್ನುವ ಮೆಸೇಜ್ ಕೂಡಾ ಹಾಕಿದ್ದರು.

ಮಾರ್ಚ್ 1ರಂದು ಬೆಳಗ್ಗೆ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಯುವಕ ಸಾವನ್ನಪ್ಪಿದ್ದು, ಅಪಘಾತ ಆಗಿದ್ದರಿಂದ ಮರಣೋತ್ತರ ಪರೀಕ್ಷೆಗೆಂದು ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ  ಕೋಣೆಗೆ ಕಳುಹಿಸಿದ್ದರು. ಈ ಮಧ್ಯೆ  ಜಮಖಂಡಿ ತಾಲೂಕು ವೈದ್ಯಾಧಿಕಾರಿ  ಜಿ ಎಸ್ ಗಲಗಲಿ   ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಆಕಸ್ಮಿಕವಾಗಿ ಮರಣೋತ್ತರ ಪರೀಕ್ಷೆಯ ಕೋಣೆಗೆ ಭೇಟಿ ನೀಡಿದ್ದರು. ಈ ವೇಳೆ  ಯುವಕ ಕೈಕಾಲು ಮಿಸುಕಾಡಿಸಿದ್ದು ಗಮನಕ್ಕೆ ಬಂದಿದೆ. ಯುವಕ ಸಾಯುವ ಮುನ್ನವೇ ಮರಣೋತ್ತರ ಪರೀಕ್ಷೆ ಕೋಣೆಗೆ ಹಾಕಿರುವ ಪ್ರಮಾದ ಗೊತ್ತಾಗಿ ತಕ್ಷಣವೇ ಯುವಕನ್ನು ಮರಣೋತ್ತರ ಪರೀಕ್ಷಾ  ಕೋಣೆಯಿಂದ ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇದನ್ನು ಓದಿ: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್​; ಸಚಿವರ ರಾಸಲೀಲೆ ವಿಡಿಯೋ ವಿರುದ್ಧ ದೂರು

ಸದ್ಯ ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಮಹಾಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು,  ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮಹಾ ಎಡವಟ್ಟಿನಿಂದ ಪಾರಾಗಿದ್ದಾನೆ. ಶಂಕರ ಮೃತಪಟ್ಟಿದ್ದಾನೆಂದು ಸಂಬಂಧಿಕರು ಕೂಡಾ ಅಂತ್ಯಕ್ರಿಯೆಗೆ ಬಂದಿದ್ದರು. ಇನ್ನೂ ಜೀವಂತ ಎನ್ನುವ ಸುದ್ದಿ ತಿಳಿದ ಸ್ನೇಹಿತರು   ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ  ಮತ್ತೆ ಹುಟ್ಟಿ ಬಾ ಎನ್ನುವ ಪೋಸ್ಟ್ ಡಿಲೀಟ್ ಮಾಡಿ, ಸಾವು ಗೆದ್ದು ಬಾ ಗೆಳೆಯ ಅಂತ ಮರು ಪೋಸ್ಟ್ ಹಾಕಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು.ಯುವಕನ ಪರಿಸ್ಥಿತಿ ಗಂಭೀರವಿದೆ. ಆದರೆ, ಸತ್ತು ಬದುಕಿರುವ ಜೀವ ಉಳಿದು ಬರಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ. ಶಂಕರ್ ಗೊಂಬಿ ಮಹಾಲಿಂಗಪುರದಲ್ಲಿ ಬಿಜೆಪಿ ಪಕ್ಷದಲ್ಲಿ ಗುರ್ತಿಸಿಕೊಂಡು ಸಕ್ರೀಯನಾಗಿದ್ದು, ಸ್ನೇಹಿತರ ಬಳಗ, ಮುಖಂಡರ ಅಚ್ಚುಮೆಚ್ಚಿನ ಕಾರ್ಯಕರ್ತನಾಗಿದ್ದಾನೆ. ಏನೇ ಆಗಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅಚಾತುರ್ಯದಿಂದ ಇನ್ನೂ ಬದುಕಿರುವಾಗಲೇ ಯುವಕನೊಬ್ಬ ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಸಮಯಪ್ರಜ್ಞೆ, ಆಕಸ್ಮಿಕ ಭೇಟಿ ಯುವಕ ಮತ್ತೆ ಸಾವಿನ ಕದ ತಟ್ಟಿ ಹೊರ ಬಂದಿದ್ದಾನೆ.
Published by:Seema R
First published: